ಉತ್ತರಕಾಶಿ: ಇಲ್ಲಿನ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿಕೊಂಡಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಕ್ಕೆ ಪದೇ ಪದೇ ತೊಡಕು ಉಂಟಾಗುತ್ತಿರುವುದರಿಂದ, ಒತ್ತಡ ನಿವಾರಿಸಿಕೊಳ್ಳಲು ಒಳಗಿರುವ ಕಾರ್ಮಿಕರಿಗೆ ಚೆಸ್, ಲೂಡೊ ಆಟದ ಪರಿಕರಗಳನ್ನು ನೀಡಲು ಅಧಿಕಾರಿಗಳು ಮುಂದಾಗಿದ್ದಾರೆ.

ರಕ್ಷಣಾ ಕಾರ್ಯಾಚರಣೆ ಗುರುವಾರ ನಿರ್ಣಾಯಕ ಘಟ್ಟ ತಲುಪಿತ್ತು. ಆದರೆ, ಕೊರೆಯುವ ಯಂತ್ರವನ್ನು ಇರಿಸಿರುವ ಜಾಗದಲ್ಲಿ ರಾತ್ರಿಯ ವೇಳೆಗೆ ಬಿರುಕು ಉಂಟಾದ ಕಾರಣದಿಂದಾಗಿ ಇಡೀ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು.
.ಉತ್ತರಕಾಶಿ ಸುರಂಗ ಕುಸಿತ: ಕಾರ್ಮಿಕರೊಂದಿಗೆ ಮಾತನಾಡಿ ಧೈರ್ಯ ತುಂಬಿದ ಸಿಎಂ ಧಾಮಿ.
‘ರಕ್ಷಣಾ ಕಾರ್ಯಾಚರಣೆ ವಿಳಂಬವಾಗುತ್ತಿದೆ. ಒತ್ತಡ ನಿವಾರಿಸಿಕೊಳ್ಳಲು ಸುರಂಗದ ಒಳಗೆ ಸಿಲುಕಿರುವ ಕಾರ್ಮಿಕರಿಗೆ ಚೆಸ್ ಹಾಗೂ ಲೂಡೊ ಬೋರ್ಡ್, ಪ್ಲೇಯಿಂಗ್ ಕಾರ್ಡ್ ನೀಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ’ ಎಂದು ಸ್ಥಳದಲ್ಲಿರುವ ಮಾನಸಿಕ ರೋಗ ತಜ್ಞರಲ್ಲಿ ಒಬ್ಬರಾದ ಡಾ. ರೋಹಿತ್ ಗೊಂಡ್ವಾಲ್ ಹೇಳಿದ್ದಾರೆ.

ಸುರಂಗದೊಳಗೆ ಸಿಲುಕಿರುವ 41 ನೌಕರರು ಆರೋಗ್ಯವಾಗಿದ್ದು, ಅವರು ಮಾನಸಿಕವಾಗಿಯೂ ಸದೃಢವಾಗಿರಬೇಕಿದೆ. ಒತ್ತಡ ನಿವಾರಣೆಗೆ ಅವರು ಅಲ್ಲಿ ಕಳ್ಳ ಪೊಲೀಸ್ ಆಟವಾಡುತ್ತಿದ್ದಾರೆ. ಯೋಗ, ವ್ಯಾಯಾಮ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ ಎಂದು ಗೊಂಡ್ವಾಲ್ ತಿಳಿಸಿದ್ದಾರೆ.
.ಉತ್ತರಕಾಶಿ ಸುರಂಗ ಕುಸಿತ: ಹೊರಗೆ ಬರಲು 11 ದಿನದಿಂದ ಕಾಯುತ್ತಿರುವ 41 ಕಾರ್ಮಿಕರು!.
ಅವರ ಮಾನಸಿಕ ಸ್ಥೈರ್ಯವು ಉನ್ನತ ಮಟ್ಟದಲ್ಲಿರಬೇಕು. ಅವರು ಖಿನ್ನತೆಗೆ ಒಳಗಾಗಬಾರದು. ಹೀಗಾಗಿ ವೈದ್ಯರ ತಂಡವು ಕಾರ್ಮಿಕರೊಂದಿಗೆ ಪ್ರತಿದಿನ ಮಾತನಾಡುತ್ತಿದ್ದಾರೆ. ಅವರ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗಳ ಬಗ್ಗೆ ಕೇಳುತ್ತಿದ್ದಾರೆ ಎಂದು ಮತ್ತೊಬ್ಬ ವೈದ್ಯರು ಮಾಹಿತಿ ನೀಡಿದರು.
.ಉತ್ತರಕಾಶಿ ಪ್ರಕರಣ: ದೇಶದಾದ್ಯಂತ ನಿರ್ಮಾಣ ಹಂತದಲ್ಲಿರುವ 29 ಸುರಂಗಗಳ ಪರಿಶೀಲನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.