ನವದೆಹಲಿ: ಪಾಕಿಸ್ತಾನದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಮಂಗಳವಾರ ಸಂಜೆ ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್ ಮುಖಂಡರೊಂದಿಗೆ ಸಭೆ ನಡೆಸಿದ್ದರ ಬಗ್ಗೆ ಭಾರತ ನೇರವಾಗಿ ತನ್ನ ಅಸಮಾಧಾನ ದಾಖಲಿಸಿದೆ.

`ಹಲವಾರು ವಿಷಯಗಳಿಗೆ ಸಂಬಂಧಿಸಿಎರಡೂ ರಾಷ್ಟ್ರಗಳ ನಡುವೆ ಸಾಕಷ್ಟು ಭಿನ್ನತೆಗಳಿವೆ. ಹೀನಾರವರು ಹುರಿಯತ್ ಮುಖಂಡರನ್ನು ಭೇಟಿಯಾಗಿದ್ದು ಕೂಡ ಇದಕ್ಕೆ ಸ್ಪಷ್ಟ ನಿದರ್ಶನವಾಗಿದೆ.ಈ ಭೇಟಿ ಬಗ್ಗೆ ನಮ್ಮ ಕಳವಳ ಏನೆಂಬುದನ್ನು ಪಾಕಿಸ್ತಾನಕ್ಕೆ ಮುಚ್ಚುಮರೆಯಿಲ್ಲದೆ ರವಾನಿಸಿದ್ದೇವೆ~ ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ರಾವ್ ಪಾಕಿಸ್ತಾನದ ಸಹವರ್ತಿ ಸಲ್ಮಾನ್ ಬಷೀರ್ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹುರಿಯತ್ ನಾಯಕರ ಜತೆ ಖರ್ ಸಭೆ ನಡೆಸಿದ್ದುಎರಡೂ ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆಗೆ ಧಕ್ಕೆ ತರುತ್ತದೆಯೇ ಎಂಬ ಪ್ರಶ್ನೆಗೆ ರಾವ್ ಪ್ರತಿಕ್ರಿಯಿಸಿದರು.

ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧಜತೆಜತೆಗೇ ಹುರಿಯತ್ನೊಂದಿಗೆ ಸಮಾನಾಂತರ ಸಂಬಂಧ ಹೊಂದುವ ಉದ್ದೇಶ ಪಾಕ್ಗೆ ಇದೆಯೇ ಎಂಬ ಪ್ರಶ್ನೆ ರಾವ್ ಅವರಿಗೆ ಎದುರಾಯಿತು. ಆಗ ಅವರು, `ಸರ್ಕಾರದ ಮಟ್ಟದಲ್ಲಿ ವ್ಯವಹರಿಸಿ ಸದೃಢ ದ್ವಿಪಕ್ಷೀಯ ಸಂಬಂಧ ಹೊಂದುವುದಷ್ಟೇ ಭಾರತದ ಧ್ಯೇಯ. ಈ ದ್ವಿಪಕ್ಷೀಯ ಸಂಬಂಧ ವ್ಯಾಪ್ತಿಯಲ್ಲೇ ಕಾಶ್ಮೀರ ಕೂಡ ಬರುತ್ತದೆ~ ಎಂದರು.

`ಈ ಭೇಟಿಗೆ ಹೆಚ್ಚಿನ ಮಹತ್ವ ನೀಡಬಾರದು. ಮಾತುಕತೆ ಮುರಿದು ಬೀಳಬೇಕೆಂಬುದು ನಮ್ಮ ಉದ್ದೇಶವಲ್ಲ. ಬದಲಾಗಿ ಚರ್ಚೆ ಹೆಚ್ಚಿನ ಫಲ ನೀಡಬೇಕೆಂಬ ಉದ್ದೇಶ ಈ ಭೇಟಿ ಹಿಂದಿದೆ~ ಎಂದು ಬಷೀರ್ ಸಮರ್ಥಿಸಿಕೊಂಡರು.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗಿನ ಭೇಟಿಯ ಮುನ್ನಾ ದಿನ ಹೀನಾ ಹುರಿಯತ್ ಜತೆ ಸಭೆ ನಡೆಸಿದ್ದರ ಬಗ್ಗೆ ಆತಂಕವುಂಟಾಗಿತ್ತು.ಇಬ್ಬರೂ ಸಚಿ ವರ ಮಾತುಕತೆ ಮುರಿದುಬೀಳಬಹುದೆಂಬ ಚಿಂತೆ ಮೂಡಿದ್ದವು. ಆದರೆ ಒಂದೆಡೆ ಭಾರತ ನೇರವಾಗಿ ಅಸಮಾಧಾನ ದಾಖಲಿಸಿದರೂ ಮತ್ತೊಂದೆಡೆ ಮಾತುಕತೆ ಕೂಡ ಯಶಸ್ವಿಯಾಗಿ ನಡೆದಿದ್ದು ಮತ್ವದ ಬೆಳವಣಿಗೆಯಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.