ಜೋಡಿಹಕ್ಕಿಗಳೇ ಟಾರ್ಗೆಟ್!
ಪ್ರಕರಣ ದಾಖಲಾದ ಬೆನ್ನಲ್ಲೇ ಮತ್ತಷ್ಟು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರಿನಲ್ಲಿ ಮುಸ್ಲಿಂ ಯುವತಿಗೆ ಯುವಕರ ಗುಂಪು ಕಿರುಕುಳ ನೀಡುತ್ತಿರುವ ದೃಶ್ಯಗಳು ಸೆರೆಯಾಗಿವೆ. ‘ನನ್ನನ್ನು ಬಿಟ್ಟುಬಿಡಿ ಮನೆಗೆ ಹೋಗುತ್ತೇನೆ’ ಎಂದರೂ ಬಿಡದೆ, ಯುವತಿಯ ಕಪಾಳಕ್ಕೆ ಹೊಡೆಯುತ್ತಿರುವ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವ ದೃಶ್ಯಗಳು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿವೆ. ಒಂಟಿಯಾಗಿ ಸಿಗುತ್ತಿದ್ದ ಜೋಡಿಗಳ ಬೆನ್ನು ಹತ್ತುತ್ತಿದ್ದ ಯುವಕರ ಗುಂಪು ಹುಡುಗನಿಗೆ ಥಳಿಸಿದ ನಂತರ ಯುವತಿಯನ್ನು ಕಾರಿನಲ್ಲಿ ಕರೆದೊಯ್ದು ಕಿರುಕುಳ ನೀಡುತ್ತಿದ್ದರು ಎಂಬ ಆರೋಪಗಳು ಕೇಳಿಬಂದಿದ್ದು, ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.