ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಚ್‌ಡಿಕೆಗೆ ಕೈಗಾರಿಕಾ ನಿವೇಶನ: ದಾಖಲೆ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ

Published : 26 ಜುಲೈ 2024, 14:11 IST
Last Updated : 26 ಜುಲೈ 2024, 14:11 IST
ಫಾಲೋ ಮಾಡಿ
Comments

ಬೆಂಗಳೂರು: ಮೈಸೂರಿನ ವಿಶ್ವೇಶ್ವರಯ್ಯನಗರ ಕೈಗಾರಿಕಾ ಸಬರ್ಬ್‌ 3ನೇ ಹಂತದಲ್ಲಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಮಂಜೂರು ಮಾಡಲಾದ ನಿವೇಶನ ಮತ್ತು ನಿವೇಶನದ ಬದಲಿಗೆ ನೀಡಿದ ಬದಲಿ ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

ತಮಗೆ ಕೈಗಾರಿಕಾ ನಿವೇಶನ ಮಂಜೂರು ಮಾಡುವಂತೆ ಕುಮಾರಸ್ವಾಮಿ ಅವರು ಬರೆದ ಪತ್ರ, ನಿವೇಶನ ಮಂಜೂರಾದ ದಾಖಲೆ, ಶುಲ್ಕ ಪಾವತಿ ರಸೀತಿ, ಸ್ವಾಧೀನ ಪತ್ರ, ಬದಲಿ ನಿವೇಶನ ನೀಡುವಂತೆ ಕುಮಾರಸ್ವಾಮಿ ಅವರು ಬರೆದ ಪತ್ರಗಳ ಪ್ರತಿಗಳನ್ನು ಅವರು ಮಾಧ್ಯಮಗೋಷ್ಠಿಯಲ್ಲಿ ‍‍ಪ್ರದರ್ಶಿಸಿದರು.

ದಾಖಲೆಗಳ ಪಟ್ಟಿ

02.11.1984: ‘ನಾನು ಮೈಸೂರು ನಿವಾಸಿಯಾಗಿದ್ದು, ಮೈಸೂರಿನಲ್ಲಿ ಕೈಗಾರಿಕೆ ಆರಂಭಿಸಲು ನಿವೇಶನ ಮಂಜೂರು ಮಾಡಿ’ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಸಿಐಟಿಬಿ ಅಧ್ಯಕ್ಷರಿಗೆ ಬರೆದ ಪತ್ರ

07.11.1984: ಎಚ್‌.ಡಿ.ಕುಮಾರಸ್ವಾಮಿ ಅವರ ಕೋರಿಕೆ ಮೇರೆಗೆ 75 ಅಡಿ X280 ಅಡಿ ನಿವೇಶನ ಮಂಜೂರು ಮಾಡಿ, ₹37,334 ಶುಲ್ಕ ಪಾವತಿಸುವಂತೆ ಸಿಐಟಿಬಿ ನೀಡಿದ ಮಂಜೂರಾತಿ ಪತ್ರ. ಆರು ತಿಂಗಳೊಳಗೆ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಬೇಕು ಮತ್ತು ಎರಡು ವರ್ಷಗಳ ಒಳಗೆ ಕೈಗಾರಿಕೆ ಕಾರ್ಯಾರಂಭ ಮಾಡಬೇಕು ಎಂದು ಪತ್ರದಲ್ಲಿ ಷರತ್ತು ಹಾಕಲಾಗಿತ್ತು

12.12.1984: ಸಂಬಂಧಿತ ನಿವೇಶನಕ್ಕೆ ಶುಲ್ಕ ಪಾವತಿ ಮಾಡಿದ ಮತ್ತು ಸ್ವಾಧೀನ ಪತ್ರ ಕೋರಿದ್ದನ್ನು ಉಲ್ಲೇಖಿಸಿ ಮೈಸೂರು ನಗರಾಭಿವೃದ್ಧಿ ಮಂಡಳಿಯು ನೀಡಿದ ಪತ್ರ

09.12.2000: ಸಬರ್ಬ್‌ 3ನೇ ಹಂತದಲ್ಲಿ ತಮಗೆ ಮಂಜೂರಾಗಿರುವ 17/ಬಿ ನಿವೇಶನಕ್ಕೆ ಸಂಬಂಧಿಸಿದಂತೆ ಸ್ವಾಧೀ ಪತ್ರ ನೀಡುವಂತೆ ಕುಮಾರಸ್ವಾಮಿ ಅವರು ಮುಡಾ ಆಯುಕ್ತರಿಗೆ ಬರೆದ ಪತ್ರ

23.02.2017: ‘ಕೈಗಾರಿಕೆ ಪ್ರಾರಂಭಿಸಲು ನನಗೆ ಮಂಜೂರಾಗಿದ್ದ 17/ಬಿ ನಿವೇಶನದ ಅರ್ಧ ಭಾಗವನ್ನು ಬೇರೆಯವರಿಗೂ ಮಂಜೂರು ಮಾಡಲಾಗಿದೆ. ಈ ನಿವೇಶನದ ಸ್ವಾಧೀನವನ್ನೂ ನನಗೆ ನೀಡಿರುವುದಿಲ್ಲ. ಹೀಗಾಗಿ ಕೂಡಲೇ ಕೈಗಾರಿಕೆಯನ್ನು ಪ್ರಾರಂಭಿಸಲು ಸದರಿ ನಿವೇಶನದ ಹಕ್ಕು ಪತ್ರ ನೀಡಬೇಕು ಅಥವಾ ಬದಲಿ ನಿವೇಶನದ ಹಕ್ಕು ಪತ್ರವನ್ನಾದರೂ ನೀಡಬೇಕು’ ಎಂದು ಎಚ್‌.ಡಿ.ಕುಮಾರಸ್ವಾಮಿ ಮುಡಾ ಆಯುಕ್ತರಿಗೆ ಬರೆದ ಪತ್ರ

06.09.2019: ‘ಕೈಗಾರಿಕೆ ಪ್ರಾರಂಭಿಸಲು ನನಗೆ ಮಂಜೂರಾಗಿದ್ದ 17/ಬಿ ನಿವೇಶನದ ಅರ್ಧ ಭಾಗವನ್ನು ಬೇರೆಯವರಿಗೂ ಮಂಜೂರು ಮಾಡಲಾಗಿದೆ. ಈ ನಿವೇಶನದ ಸ್ವಾಧೀನವನ್ನೂ ನನಗೆ ನೀಡಿರುವುದಿಲ್ಲ. ಈ ನಿವೇಶನಕ್ಕೆ ಹಕ್ಕು ಪತ್ರ ನೀಡಿ ಅಥವಾ ಅದೇ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ಮಾಡಿ, ಹಕ್ಕುಪತ್ರ ನೀಡಿ’ ಎಂದು ಎಚ್‌.ಡಿ.ಕುಮಾರಸ್ವಾಮಿ ಮುಡಾ ಆಯುಕ್ತರಿಗೆ ಬರೆದ ಪತ್ರ

ಕೂಡಲೇ ಕೈಗಾರಿಕೆಯನ್ನು ಆರಂಭಿಸಲು ನಿವೇಶನ ಮಂಜೂರು ಮಾಡಿ ಎಂದು ಕೋರಿ ಎಚ್‌.ಡಿ. ಕುಮಾರಸ್ವಾಮಿ 1984ರಲ್ಲಿ ಬರೆದಿದ್ದ ಪತ್ರ ಎಂದು ಸಚಿವ ಬೈರತಿ ಸುರೇಶ್ ಅವರು ಬಿಡುಗಡೆ ಮಾಡಿದ ದಾಖಲೆ

ಕೂಡಲೇ ಕೈಗಾರಿಕೆಯನ್ನು ಆರಂಭಿಸಲು ನಿವೇಶನ ಮಂಜೂರು ಮಾಡಿ ಎಂದು ಕೋರಿ ಎಚ್‌.ಡಿ. ಕುಮಾರಸ್ವಾಮಿ 1984ರಲ್ಲಿ ಬರೆದಿದ್ದ ಪತ್ರ ಎಂದು ಸಚಿವ ಬೈರತಿ ಸುರೇಶ್ ಅವರು ಬಿಡುಗಡೆ ಮಾಡಿದ ದಾಖಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT