ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಹಾಗೂ ಇತರ ಮೂವರನ್ನು ಬೆಂಗಳೂರು ನಗರದ 24 ನೇ ಎಸಿಎಂಎಂ ನ್ಯಾಯಾಲಯ 12 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 24 ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ವಿಜಯಕುಮಾರ್ ಎಸ್.ಜಾಟ್ಲಾ ಅವರ ಮುಂದೆ ಶನಿವಾರ ಮಧ್ಯಾಹ್ನ 3.50ಕ್ಕೆ ನಾಲ್ವರು ಆರೋಪಿಗಳನ್ನು ಹಾಜರುಪಡಿಸಲಾಯಿತು.

ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿ ಎಸಿಪಿ ಎಲ್.ಚಂದನ್ ಕುಮಾರ್ ಪ್ರಕರಣದ ಸಿಡಿಯನ್ನು ( ಕೇಸ್ ಡೈರಿ) ಮುಚ್ಚಿದ ಲಕೋಟೆಯಲ್ಲಿ ಹಾಗೂ ಮುಕ್ತ ರಿಮ್ಯಾಂಡ್ ಅರ್ಜಿಯ ದಸ್ತಾವೇಜನ್ನು ನ್ಯಾಯಾಧೀಶರಿಗೆ ಸಲ್ಲಿಸಿದರು.

ಇದನ್ನು ದಾಖಲಿಸಿಕೊಂಡ ನ್ಯಾಯಾಧೀಶರು 35 ನಿಮಿಷಗಳ ಕಾಲ ವಿಚಾರಣಾ ಪ್ರಕ್ರಿಯೆ ಪೂರೈಸಿ ಎಲ್ಲ ಆರೋಪಿಗಳನ್ನು ಜುಲೈ 4 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಹಾಜರಿದ್ದರು.

ನಂತರ ಇವರನ್ನು ಪರಪ್ಪನ ಅಗ್ರಹಾರದಲ್ಲಿರುವ ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಯಿತು.

ನ್ಯಾಯಾಂಗ ಬಂಧನಕ್ಕೆ ಒಳಗಾದ ಆರೋಪಿಗಳು

* ಎ–2 ದರ್ಶನ್ ಅಲಿಯಾಸ್ ಡಿ ಬಾಸ್ ಬಿನ್ ಲೇಟ್ ತೂಗುದೀಪ ಶ್ರೀನಿವಾಸ್ (47)

* ಎ–9 ಡಿ.ಧನರಾಜ್ ಅಲಿಯಾಸ್ ರಾಜು ಬಿನ್ ದಿನೇಶ್ (27)

* ಎ–10 ವಿ.ವಿನಯ್ ಬಿನ್ ಲೇಟ್ ವೆಂಕಟರೆಡ್ಡಿ (38)

* ಎ–14 ಪ್ರದೋಷ್ ಬಿನ್ ಸುಬ್ಬಾರಾವ್ (40)
.ನಟ ದರ್ಶನ್ ವಿಚಾರವಾಗಿ ಹೇಳಿಕೆ ನೀಡದಂತೆ ಸಚಿವರಿಗೆ ಸಿದ್ದರಾಮಯ್ಯ ಸೂಚನೆ.ಚನ್ನಪಟ್ಟಣದಲ್ಲಿ ನಟ ದರ್ಶನ್ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ರಾ ಡಿಕೆ ಬ್ರದರ್ಸ್?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.