ಬೆಂಗಳೂರು: ವಕ್ಫ್ ಆಸ್ತಿಗಳ ಒತ್ತುವರಿ ಯನ್ನು ತೆರವು ಮಾಡಿಸಬೇಕು ಮತ್ತು ಪಹಣಿಗಳಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಬೇಕು ಎಂಬ ನಿರ್ಧಾರವು ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲೇ ಆಗಿತ್ತು. ಅದೇ ಅವಧಿಯಲ್ಲೇ ರೈತರಿಗೆ ಮತ್ತು ಭೂಮಾಲೀಕರಿಗೆ ಅತಿಹೆಚ್ಚು ನೋಟಿಸ್ಗಳನ್ನು ನೀಡಲಾಗಿತ್ತು.

2018–2023ರ ನಡುವೆಬಿಜೆಪಿ ಶಾಸಕರಾಗಿದ್ದ ಕುಮಾರ್ ಬಂಗಾರಪ್ಪ ಅವರ ಅಧ್ಯಕ್ಷತೆಯ ಕರ್ನಾಟಕ ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಸಮಿತಿಯು, ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದಂತೆ ವಕ್ಫ್ ಅಧಿಕಾರಿಗಳು, ಜಿಲ್ಲಾಧಿಕಾರಿ ಗಳ ಜತೆ ಸಾಲು–ಸಾಲು ಸಭೆ ನಡೆಸಿತ್ತು. ಆಸ್ತಿಸಂರಕ್ಷಣೆಗೆ ಕ್ರಮ ತೆಗೆದುಕೊಳ್ಳು ವಂತೆ ಸಮಿತಿಯು ಜಿಲ್ಲಾಧಿಕಾರಿಗಳಿಗೆ ಸೂಚಿಸಿತ್ತು. ಆನಂತರವೇ ವಕ್ಫ್ ಆಸ್ತಿ ಗಳನ್ನು ಗುರುತಿಸುವ, ಅಧಿಸೂಚನೆ ಹೊರಡಿಸುವ ಮತ್ತು ಒತ್ತುವರಿದಾರ ರಿಗೆ ನೋಟಿಸ್ ನೀಡುವ ಕಾರ್ಯವನ್ನು ಚುರುಕುಗೊಳಿಸಲಾಗಿತ್ತು.

ಹೀಗಾಗಿಯೇ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಟ್ಟು 2,865 ಎಕರೆ 9 ಗುಂಟೆ ವಿಸ್ತೀರ್ಣದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಹೊಸದಾಗಿ ಅಧಿಸೂಚನೆ ಹೊರಡಿಸಲಾಗಿತ್ತು.

2,865 ಎಕರೆ ವಿಸ್ತೀರ್ಣದ ಜಮೀನನ್ನು ‘ವಕ್ಫ್ ಆಸ್ತಿ’ ಎಂದು ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ, ಅವುಗಳ ಒತ್ತುವರಿ ತೆರವಿಗೆ ನೋಟಿಸ್ ನೀಡಲಾಗಿತ್ತು. ಬಿ.ಎಸ್. ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಧಿಸೂಚನೆ ಮಾಡಲಾಗಿದ್ದ ‘ವಕ್ಫ್ ಆಸ್ತಿ’ಗಳಿಗೂ ಈ ಅವಧಿಯಲ್ಲಿ ನೋಟಿಸ್ ನೀಡಲಾಗಿತ್ತು.

ಬಿಜೆಪಿ ಸರ್ಕಾರವು 1,735 ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡಿತ್ತು. ಇದರ ವಿರುದ್ಧ ಕೆಲ ರೈತರು ನ್ಯಾಯಾಲಯದ ಮೊರೆಹೋಗಿ ತಡೆಯಾಜ್ಞೆ ತಂದಿದ್ದರು. ಉಳಿದ ಪ್ರಕರಣಗಳಲ್ಲಿ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಲು ಕ್ರಮ ತೆಗೆದುಕೊಳ್ಳುವಂತೆ ಸಮಿತಿಯು ಶಿಫಾರಸು ಮಾಡಿತ್ತು.

4,720 ಎಕರೆ ವಿಸ್ತೀರ್ಣದ ಜಮೀನು ವಕ್ಫ್ ಆಸ್ತಿ ಒತ್ತುವರಿಯಾಗಿದ್ದು, ಅವುಗಳು ಅಕ್ರಮ ಪರಭಾರೆ ಆಗಬಾರದು ಎಂದು ಪಹಣಿಯಲ್ಲಿ ‘ಫ್ಲಾಗ್ ಆಫ್’ (ಪಹಣಿಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸುವುದು) ಮಾಡಲಾಗಿತ್ತು. ವಕ್ಫ್ ಆಸ್ತಿಗಳ ದಾಖಲೆ, ಸ್ಥಿತಿಗತಿ ಮತ್ತು ಸಂರಕ್ಷಣೆ ಕಾರ್ಯಾಚರಣೆಗಳ ವಿವರವನ್ನು ಒಳಗೊಂಡ ವರದಿಗಳನ್ನು ಕುಮಾರ್ ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಮಂಡಿಸಿದ್ದರು. ಈ ವರದಿಗಳನ್ನು ಸದನವು ಅಂಗೀಕರಿಸಿತ್ತು.

2020ರ ಸೆಪ್ಟೆಂಬರ್ 10ರಂದು ವಿಧಾನಸಭೆಯಲ್ಲಿ ಮಂಡಿಸಿದ ವರದಿಯಲ್ಲಿ, ‘ವಕ್ಫ್ ಆಸ್ತಿಗಳ ಒತ್ತುವರಿ, ಅಕ್ರಮ ಮಾರಾಟ ಅಥವಾ ಇತರೆ ಯಾವುದೇ ತೊಂದರೆ ಬಂದಲ್ಲಿ, ಅವುಗಳನ್ನು ತೆರವುಗೊಳಿಸಲು ವಕ್ಫ್ ಮಂಡಳಿಯು ಜಿಲ್ಲಾಧಿಕಾರಿಗಳಿಗೆ ಸೂಚಿಸಲು ಕಾಯ್ದೆಯಲ್ಲಿ ಅವಕಾಶವಿದೆ’ ಎಂದು ಸಮಿತಿ ಹೇಳಿತ್ತು.

‘ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಕಂದಾಯ ದಾಖಲೆಗಳನ್ನು ಪರಿಶೀಲಿಸ ಬೇಕು. ದಾಖಲೆಗಳು ಇಲ್ಲದ ಆಸ್ತಿಗಳಿಗೆ ಸಂಬಂಧಿಸಿದ ಆಕಾರ್ಬಂದ್ಗಳ ಮಾಹಿತಿ ಪರಿಶೀಲಿಸಿ, ವಕ್ಫ್ ಆಸ್ತಿಗಳ ರಕ್ಷಣೆಗೆ ಕ್ರಮ ತೆಗೆದು ಕೊಳ್ಳಬೇಕು’ ಎಂದು ಶಿಫಾರಸು ಮಾಡಿತ್ತು.

ಜತೆಗೆ, ‘ಗೆಜೆಟ್ ಅಧಿಸೂಚನೆ ಹೊರಡಿಸಲಾಗಿರುವ ಆಸ್ತಿಗಳ ಮೂಲ ಕಂದಾಯ ದಾಖಲೆಗಳನ್ನು ಪರಿಶೀಲನೆ ಮಾಡಿ, ಕಂದಾಯ ಇಲಾಖೆಯ ತಂತ್ರಾಂಶದಲ್ಲಿ ನಮೂದಿಸಬೇಕು. ತಂತ್ರಾಂಶದಲ್ಲಿ ಆ ಆಸ್ತಿಗಳನ್ನು ಲಾಕ್ ಮಾಡಿಸುವ ಮೂಲಕ ಪರಭಾರೆ, ಒತ್ತುವರಿ ಮತ್ತು ಅಕ್ರಮ ಮಾರಾಟಕ್ಕೆ ಅವಕಾಶವಿರದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು’ ಎಂದು ಸಮಿತಿ ಶಿಫಾರಸಿನಲ್ಲಿ ಹೇಳಿತ್ತು.

2022ರಲ್ಲಿ ಸಮಿತಿಯು ಮತ್ತೊಂದು ವರದಿಯನ್ನು ಸದನದಲ್ಲಿ ಮಂಡಿಸಿತ್ತು. 2020ರ ವರದಿಯಲ್ಲಿ ಮಾಡಿದ್ದ ಎಲ್ಲ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಿದ್ದು, ಅದಕ್ಕೆ ಸಂಬಂಧಿಸಿದ ಸುಮಾರು 6,000 ಪುಟಗಳಷ್ಟು ದಾಖಲೆಗಳನ್ನು ವರದಿಯೊಂದಿಗೆ ಲಗತ್ತಿಸಲಾಗಿತ್ತು.

‘ವಕ್ಫ್ ಆಸ್ತಿ ಎಂದು ನಮೂದಿಸಿ’

ವ್ಯಕ್ತಿಗಳ ಹೆಸರಿನಲ್ಲಿ ಇರುವ ವಕ್ಫ್ ಆಸ್ತಿಗಳ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಿ ಎಂದು ಇದೇ ಸಮಿತಿ ಸೂಚಿಸಿತ್ತು.

ವಕ್ಫ್ ಮಂಡಳಿ ಸಲ್ಲಿಸಿರುವ ದಾಖಲೆಗಳಲ್ಲಿ ವಕ್ಫ್ ಆಸ್ತಿಗಳು ಎಂದು ನಮೂದು ಮಾಡದೇ, ವೈಯಕ್ತಿಕ ಹೆಸರಿನಲ್ಲಿರುವ ಆಸ್ತಿಗಳಲ್ಲಿ ಅಕ್ರಮವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದಾದ್ಯಂತ ವಕ್ಫ್ ಆಸ್ತಿಗಳನ್ನು ತಾಲ್ಲೂಕುವಾರು ಪರಿಶೀಲಿಸಬೇಕು. ಕಂದಾಯ ಇಲಾಖೆಯ ಭೂಮಿ ಸಾಫ್ಟ್ವೇರ್ ನಲ್ಲಿ ನಿಯಮಾನುಸಾರ, ವಕ್ಫ್ ಆಸ್ತಿ ಎಂದು ನಮೂದಿಸಬೇಕು ಎಂದು ಸೂಚಿಸಲಾಗಿದೆ.

ವಕ್ಫ್ ಆಸ್ತಿಗಳ ಮುಂದೆ ಆಯಾ ವಕ್ಫ್ ಸಂಸ್ಥೆಗಳ ಹೆಸರನ್ನೂ ನಮೂದಿಸಬೇಕು. ಆ ಮೂಲಕ ವಕ್ಫ್ ಆಸ್ತಿಗಳನ್ನು ಸಂರಕ್ಷಿಸಿಕೊಳ್ಳಿ ಎಂದು ಸಮಿತಿ ಶಿಫಾರಸು ಮಾಡಿತ್ತು.

ಕೆ.ಆರ್.ಮಾರುಕಟ್ಟೆಯಂತೆ ಆದಾಯ ಬೆಂಗಳೂರಿನ ಕೆ.ಆರ್.ಮಾರುಕಟ್ಟೆಯು ವಕ್ಫ್ ಆಸ್ತಿ ಎಂಬುದನ್ನು ಬಿಜೆಪಿ ಸರ್ಕಾರದ ಅವಧಿಯ ಸಮಿತಿ ವರದಿಯಲ್ಲಿ ಗುರುತಿಸಿದೆ. ಜತೆಗೆ ಈ ವರದಿಯನ್ನು ವಿಧಾನಸಭೆ ಅಂಗೀಕರಿಸಿದೆ.

‘ಕೆ.ಆರ್. ಮಾರುಕಟ್ಟೆಯನ್ನು ಒಳಗೊಂಡಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಕ್ಫ್ ಆಸ್ತಿಗಳಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಅವುಗಳ ಆದಾಯದಲ್ಲಿ ಶೇ 7ರಷ್ಟರ ಪಾಲಿನಂತೆ ವಕ್ಫ್ ಮಂಡಳಿಗೆ ವಾರ್ಷಿಕ ₹6 ಕೋಟಿ ಬರುತ್ತಿದೆ. ಆದರೆ, ಈ ರೀತಿ ಆರ್ಥಿಕ ಚಟುವಟಿಕೆ ನಡೆಯುತ್ತಿರುವ ಎಲ್ಲ ವಕ್ಫ್ ಆಸ್ತಿಗಳಿಂದ ಆದಾಯ ಬರುತ್ತಿಲ್ಲ’ ಎಂದು ಸಮಿತಿಯು ವರದಿಯಲ್ಲಿ ಹೇಳಿತ್ತು.

‘ವಾಣಿಜ್ಯ ಚಟುವಟಿಕೆಗಳು ನಡೆಯುತ್ತಿರುವ ವಕ್ಫ್ ಆಸ್ತಿಗಳಿಗೆ ಯಾವುದೋ ಕಾಲದಲ್ಲಿ ಬಾಡಿಗೆ ಮತ್ತು ಭೋಗ್ಯ ನಿಗದಿ ಮಾಡಿದ್ದು, ಇದರಿಂದ ವಕ್ಫ್ ಮಂಡಳಿಗೆ ಮತ್ತು ಸರ್ಕಾರಕ್ಕೆ ತೀವ್ರ ನಷ್ಟವಾಗುತ್ತಿದೆ. ಅಂತಹ ಆಸ್ತಿಗಳಿಗೆ ಸಂಬಂಧಿಸಿದಂತೆ ಎಸ್.ಆರ್ (ಸ್ಥಿರಾಸ್ತಿ ಮಾರ್ಗಸೂಚಿ ದರ) ಮೌಲ್ಯದ ಪ್ರಕಾರ ಜಿಲ್ಲಾಧಿಕಾರಿಗಳು ಬಾಡಿಗೆ ಮತ್ತು ಭೋಗ್ಯ ಸಂಬಂಧಿಸಿದಂತೆ ಹೊಸ ಆದೇಶಗಳನ್ನು ಹೊರಡಿಸಬೇಕು. ಈ ಮೂಲಕ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಸಮಿತಿ ಶಿಫಾರಸು ಮಾಡಿತ್ತು.

ಕೆ.ಆರ್.ಮಾರುಕಟ್ಟೆಯಂತೆ ಆದಾಯ

ಕೆ.ಆರ್.ಮಾರುಕಟ್ಟೆಯು ವಕ್ಫ್ ಆಸ್ತಿ ಎಂಬುದನ್ನು ಬಿಜೆಪಿ ಸರ್ಕಾರದ ಅವಧಿಯ ಸಮಿತಿಯು ವರದಿ ಗುರುತಿಸಿದೆ. ಜತೆಗೆ ಈ ವರದಿಯನ್ನು ವಿಧಾನಸಭೆ ಅಂಗೀಕರಿಸಿದೆ.

‘ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯನ್ನು ಒಳಗೊಂಡಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ವಕ್ಫ್ ಆಸ್ತಿಗಳಲ್ಲಿ ಆರ್ಥಿಕ ಚಟುವಟಿಕೆಗಳು ನಡೆಯುತ್ತಿವೆ. ಅವುಗಳ ಆದಾಯದಲ್ಲಿ ಶೇ 7ರಷ್ಟರ ಪಾಲಿನಂತೆ ವಕ್ಫ್ ಮಂಡಳಿಗೆ ವಾರ್ಷಿಕ ₹6 ಕೋಟಿ ಬರುತ್ತಿದೆ. ಆದರೆ, ಈ ರೀತಿ ಆರ್ಥಿಕ ಚಟುವಟಿಕೆ ನಡೆಯುತ್ತಿರುವ ಎಲ್ಲ ವಕ್ಫ್ ಆಸ್ತಿಗಳಿಂದ ಆದಾಯ ಬರುತ್ತಿಲ್ಲ’ ಎಂದು ಸಮಿತಿಯು ವರದಿಯಲ್ಲಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.