ಕಾಳಜಿ ಕೇಂದ್ರದಲ್ಲಿರುವ ಮಕ್ಕಳನ್ನು ಆಟದಲ್ಲಿ ತೊಡಗಿಸಿಕೊಂಡು ನೋವು ಮರೆಸಲು ಪ್ರಯತ್ನಿಸುತ್ತಿರುವ ಆಪ್ತಸಮಾಲೋಚರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಮಗಳು ಮತ್ತು ಮೊಮ್ಮಗನೊಂದಿಗೆ ಪ್ರಾಣ ಉಳಿಸಿಕೊಂಡ ಮೊಯ್ದು ಓಳಪರಂಬನ್ ಅವರನ್ನು ಕಾಳಜಿ ಕೇಂದ್ರದ ಸಿಬ್ಬಂದಿ ಹೊರಗೆ ಕರೆದುಕೊಂಡು ಹೋದರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಬದುಕುಳಿದರೂ ಮೊಯ್ದು ಈಗ ಅತಂತ್ರ
ಮಗಳು ಮತ್ತು ಮೊಮ್ಮಗನನ್ನು ಅತ್ಯಂತ ಸಾಹಸದಿಂದ ಉಳಿಸಿದ ಚೂರಲ್‌ಮಲ ಪಟ್ಟಣದ ಎದುರಿನ ಮನೆಯಲ್ಲಿ ವಾಸವಾಗಿದ್ದ ಮೊಯ್ದು ಓಳಪರಂಬನ್, ಬದುಕಿ ಉಳಿದರೂ ಅತಂತ್ರ. 68 ವರ್ಷ ವಯಸ್ಸಿನ ಅವರು, ದುರಂತದ ಸಂದರ್ಭದಲ್ಲಿ ನಡೆಸಿದ ಹೋರಾಟದಿಂದ ಕಾಲುಗಳಿಗೆ ದೊಡ್ಡ ಗಾಯಗಳಾಗಿವೆ. ದೇಹವೂ ಸೋತಿದೆ. ‘ಭೂಕುಸಿತ ಉಂಟಾದ ವಿಷಯ ತಿಳಿದು ಮಗಳು ರಮ್ಸೀಳಾ ಮತ್ತು ಆಕೆಯ ಮಗು ಹನ್ಸಲ್‌ನನ್ನು ಹಿಡಿದುಕೊಂಡು ಓಡಿದೆ. ಬಾಗಿಲು ತೆಗೆಯುವಷ್ಟರಲ್ಲಿ ಎದೆಯ ಮಟ್ಟಕ್ಕೆ ಕೆಸರು ತುಂಬಿತು. ಅವರಿಬ್ಬರನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಮೂವರೂ ಹೇಗೋ ಉಳಿದೆವು. ಈಗ ಮನಸ್ಸು ಮರಗಟ್ಟಿದೆ. ಏನೊಂದೂ ಗೊತ್ತಾಗುತ್ತಿಲ್ಲ. ಮಗಳು ಮತ್ತು ಮೊಮ್ಮಗನನ್ನು ಹೇಗೆ ಸಾಕುವುದು ಎಂದೇ ತಿಳಿಯುತ್ತಿಲ್ಲ’ ಎಂದು ಅವರು ಹೇಳಿದರು.
ಸೂಜಿಪ್ಪಾರ ಜಲಪಾತದಲ್ಲಿ ಬಿದ್ದಿರುವ ವಾಹನ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಮೊಯ್ದು ಓಳಪರಂಬನ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
12 ಮಂದಿ ಆಪ್ತ ಸಮಾಲೋಚಕರು ಮಲಪ್ಪುರಂ ಜಿಲ್ಲೆಯಿಂದ ಬಂದಿದ್ದೇವೆ. ಮಕ್ಕಳನ್ನು ಆಘಾತದಿಂದ ಹೊರತರುವುದೇ ನಮ್ಮ ಮುಖ್ಯ ಉದ್ದೇಶ.
–ಧನ್ಯಾ ಆಬಿದ್ ಆಪ್ತ ಸಮಾಲೋಚಕಿನನ್ನಮ್ಮನ ಕಂಡವರಿಹರೇ...?
ಕಂಡೋ ನಾಟ್ಟಾರೆಕಂಡೋ ಎನ್ ನಾಟ್ಟಾರೆಉಣ್ಣೀಡೆ ಅಮ್ಮಯೆ ಕಂಡೋರುಂಡೊ... (ಓ ನಾಡಜನರೇ ಓ ಎನ್ನ ಪ್ರೀತಿಯ ಜನಗಳೇ ನನ್ನಮ್ಮನ ಎಲ್ಲಾದರೂ ಕಂಡವರಿಹರೇ...) ಎಂಟು ವರ್ಷದ ಅಮರ್‌ಜೀತ್ ಜೋರಾಗಿ ಹಾಡಿದಾಗ ಮೇಪ್ಪಾಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇದ್ದವರೆಲ್ಲರ ಕಣ್ಣಂಚಿನಿಂದ ನೀರು ಜಿನುಗಿತು. ದುರಂತದಲ್ಲಿ ಸಂಬಂಧಿಕರನ್ನು ಕಳೆದುಕೊಂಡು ಕಾಳಜಿ ಕೇಂದ್ರ ಸೇರಿರುವ ಮಕ್ಕಳಲ್ಲಿ ಭರವಸೆ ಮೂಡಿಸಿ ಅವರನ್ನು ನವಜೀವನದತ್ತ ಕರೆದುಕೊಂಡು ಬರಲು ಕೇರಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಆಪ್ತ ಸಮಾಲೋಚನೆ ಮಾಡುತ್ತಿರುವ ಕಾರ್ಯಕರ್ತರು ಶನಿವಾರ ಮಧ್ಯಾಹ್ನ ಏರ್ಪಡಿಸಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಚೂರಲ್‌ಮಲ ಸರ್ಕಾರಿ ಶಾಲೆಯ ಅಮರ್‌ಜೀತ್ ಮಿಮಿಕ್ರಿಯ ನಂತರ ಈ ನಾಡನ್ ಪಾಟ್ಟ್ (ಜಾನಪದ ಗೀತೆ) ಹಾಡಿದರು. ತಂದೆ ತಾಯಿಯನ್ನು ಕಳೆದುಕೊಂಡ ಅನೇಕ ಮಕ್ಕಳು ಅಲ್ಲಿದ್ದರು. ಒಂಬತ್ತು ಮಂದಿಯನ್ನು ಕಳೆದುಕೊಂಡ ಕುಟುಂಬದ ಕುಡಿಗಳೂ ಅಲ್ಲಿದ್ದವು. ಆಪ್ತಸಮಾಲೋಚಕಿಯರು ಹೇಳಿಕೊಟ್ಟ ಆಟದಲ್ಲಿ ಪಾಲ್ಗೊಂಡ ಅವರು ಆಟದ ನಡುವಿನ ಬಿಡುವಿನಲ್ಲಿ ಅಂತರ್ಮುಖಿಯಾಗುತ್ತಿದ್ದುದನ್ನು ಗಮನಿಸಿದ ಎಲ್ಲರ ಕಣ್ಣಂಚಿನಲ್ಲೂ ನೀರು ಜಿನುಗುತ್ತಿತ್ತು. ನನ್ನಮ್ಮನ ಕಂಡಿದ್ದೀರಾ ಎಂದು ಅಮರ್‌ಜೀತ್ ಹಾಡಿದಾಗ ಆ ಕಣ್ಣೀರ ಕಟ್ಟೆ ಒಡೆಯಿತು.
ಕಾಳಜಿ ಕೇಂದ್ರದಲ್ಲಿರುವ ಮಕ್ಕಳನ್ನು ಆಟದಲ್ಲಿ ತೊಡಗಿಸಿಕೊಂಡು ನೋವು ಮರೆಸಲು ಪ್ರಯತ್ನಿಸುತ್ತಿರುವ ಆಪ್ತಸಮಾಲೋಚರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್.
ಪ್ರಪಾತದಲ್ಲಿ ಕಾರು, ಸೈಕಲ್, ಸಿಲಿಂಡರ್
ಮುಂಡಕ್ಕೈ ಗುಡ್ಡದ ತುದಿಯ ಪುಂಜಿರಿಮಟ್ಟಂ ಭಾಗದಿಂದ ಒಡೆದು ಬಂದ ಕೆಸರು ಮಣ್ಣು, ಕೆಳಗುರುಳಿದ ಬಂಡೆಕಲ್ಲುಗಳ ಪ್ರಹಾರಕ್ಕೆ ಸಿಲುಕಿ ಎಂಟು ಕಿಲೋಮೀಟರ್ ವರೆಗಿನ ಪ್ರದೇಶ ನಾಶವಾಗಿದೆ. ಚೂರಲ್‌ಮಲದ ಇಳಿಜಾರು ಪ್ರದೇಶದಿಂದ ಇನ್ನಷ್ಟು ಮನುಷ್ಯರು, ಮನೆ ಮತ್ತು ಸಾಮಗ್ರಿ ಕೊಚ್ಚಿಕೊಂಡು ಹೋದ ಕೆಸರುನೀರು, ಐದು ಕಿಲೊಮೀಟರ್ ದೂರದಲ್ಲಿರುವ ಸೂಜಿಕ್ಕಲ್ಲು ಜಲಪಾತದಿಂದ ಧುಮುಕಿ ಮುಂದೆ ಸಾಗಿದೆ.
ಸೂಜಿಕ್ಕಲ್ಲು ಪ್ರದೇಶದಲ್ಲಿ ಮೂರು ಜಲಪಾತಗಳಿದ್ದು ಮೊದಲ ಜಲಪಾತದ ನೀರು ಸುಮಾರು 100 ಅಡಿಗಳಷ್ಟು ಮೇಲಿಂದ ಬಿದ್ದು ಮುಂದೆ ಹರಿಯುವ ಜಾಗದಲ್ಲಿ ಕಾರು, ಮಕ್ಕಳ ಸೈಕಲ್, ಮನೆ ಸಾಮಗ್ರಿ, ಅನೇಕ ಗ್ಯಾಸ್ ಸಿಲಿಂಡರ್‌ಗಳು ಬಿದ್ದುಕೊಂಡಿವೆ.