ಪೆಶಾವರ: ಪಾಕಿಸ್ತಾನದ ಪ್ರಾಂತೀಯ ಚುನಾವಣೆಯಲ್ಲಿ ಸ್ಪರ್ಧಿಸಲು ಮೊದಲ ಬಾರಿಗೆ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮಹಿಳೆ ನಾಮಪತ್ರ ಸಲ್ಲಿಸಿದ್ದಾರೆ.

‘ಡಾ.ಸವೀರಾ ಪ್ರಕಾಶ್ (25) ಅವರು ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಸಾಮಾನ್ಯ ಕ್ಷೇತ್ರದಿಂದ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿದ್ದಾರೆ’ ಎಂದು ಅವರ ತಂದೆ ಓಂ ಪ್ರಕಾಶ್ ತಿಳಿಸಿದ್ದಾರೆ.

‘ಫೆ.8ರಂದು ಚುನಾವಣೆ ನಡೆಯಲಿದ್ದು ಸವೀರಾ ಅವರು ಸಾಮಾನ್ಯ ಕ್ಷೇತ್ರದಿಂದ ಅಷ್ಟೇ ಅಲ್ಲದೆ ಮಹಿಳಾ ಮೀಸಲು ಕ್ಷೇತ್ರದಿಂದಲೂ ನಾಮಪತ್ರ ಸಲ್ಲಿಸಿದ್ದಾರೆ’ ಎಂದಿದ್ದಾರೆ.

‘ಸವೀರಾ ಅವರು ಬುನೆರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ’ ಎಂದು ಕೌಮಿ ವತನ್ ಪಕ್ಷದ ಸಲೀಂ ಖಾನ್ ತಿಳಿಸಿದ್ದಾರೆ.

‘ಡಿಸೆಂಬರ್ 23ರಂದು ನಾನು ನಾಮಪತ್ರ ಸಲ್ಲಿಸಿದ್ದೇನೆ. ಸಮಾಜದಲ್ಲಿ ಮಹಿಳೆಯರು ತುಳಿತಕ್ಕೆ ಒಳಗಾಗಿದ್ದಾರೆ. ನಾನು ಅವರ ಸೇವೆ ಮಾಡುತ್ತೇನೆ. ಮಹಿಳೆಯರಿಗೆ ಸೇವೆ ಮಾಡುವ ಗುಣ ನನಗೆ ರಕ್ತಗತವಾಗಿ ಬಂದಿದೆ’ ಎಂದು ಸವೀರಾ ಹೇಳಿದ್ದಾರೆ.

28626 ನಾಮಪತ್ರ ಸಲ್ಲಿಕೆ

ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದಲ್ಲಿ ಫೆ.8ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು 28626 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚುನಾವಣೆ ಬಗ್ಗೆ ಮಾಹಿತಿ ನೀಡಿದ ಪಾಕಿಸ್ತಾನ ಚುನಾವಣಾ ಆಯೋಗ ‘266 ಸಂಸತ್ ಸ್ಥಾನಗಳಿಗೆ 471 ಮಹಿಳೆಯರು ಸೇರಿ 7713 ಜನ ನಾಮಪತ್ರ ಸಲ್ಲಿಸಿದ್ದಾರೆ. ಪಂಜಾಬ್ ಪ್ರಾಂತ್ಯದಲ್ಲಿ 141 ಸ್ಥಾನಗಳಿಗೆ 277 ಮಹಿಳೆಯರು ಸೇರಿದಂತೆ 3871 ಜನ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ತಿಳಿಸಿದೆ. ‘ಸಿಂಧ್ ಪ್ರಾಂತ್ಯದಲ್ಲಿ 61 ಸ್ಥಾನಗಳಿಗೆ 110 ಮಹಿಳೆಯರು ಸೇರಿ 1681 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಲೂಚಿಸ್ತಾನ ಪ್ರಾಂತ್ಯದಲ್ಲಿ 16 ಸ್ಥಾನಗಳಿಗೆ 12 ಮಹಿಳೆಯರು ಸೇರಿ 631 ಮಂದಿ ನಾಮಪತ್ರ ಸಲ್ಲಿಸಿದ್ದು ಖೈಬರ್ ಪಖ್ತುಂಖ್ವಾದಲ್ಲಿ 45 ಸ್ಥಾನಗಳಿಗೆ 39 ಮಹಿಳೆಯರು ಸೇರಿ 1322 ಮಂದಿ ನಾಮಪತ್ರ ಸಲ್ಲಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.