ಕಜಾನ್, ರಷ್ಯಾ: ರಷ್ಯಾದ ಕಜಾನ್ನಲ್ಲಿ BRICS summit 2024 ನಡೆಯುತ್ತಿದ್ದರೇ, ಅತ್ತ ರಷ್ಯಾದ ವಿದೇಶಾಂಗ ಸಚಿವಾಲಯದ ವೆಬ್ಸೈಟ್ ಮೇಲೆ ಭಾರಿ ಆಘಾತಕಾರಿ ಎನ್ನುವಂತೆ ಸೈಬರ್ ದಾಳಿ ನಡೆದಿದೆ.

ಈ ವಿಷಯವನ್ನು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಕರೋವಾ ಅವರು ಖಚಿತಪಡಿಸಿದ್ದಾರೆ.

ವಿದೇಶಗಳಿಂದ ಅ.23ರಂದು ಬೆಳಿಗ್ಗೆಯಿಂದ ನಮ್ಮ ಇಲಾಖೆಯ ವೆಬ್ಸೈಟ್ ಮೇಲೆ ಭಾರಿ ಸೈಬರ್ ದಾಳಿ ನಡೆದಿದೆ. ಇದರಿಂದ ಸೇವೆಯಲ್ಲಿ ತೊಂದರೆ ಆಗಿದೆ ಹಾಗೂ ಆತಂಕ ಮೂಡಿಸಿದೆ ಎಂದು ಝಕರೋವಾ ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ನಮ್ಮ ವೆಬ್ಸೈಟ್ ಮೇಲೆ ಆಗಾಗ ವಿದೇಶಗಳಿಂದ ಸೈಬರ್ ದಾಳಿ ನಡೆಯುತ್ತಿತ್ತು. ಅದನ್ನು ನಾವು ಸರಿಯಾಗಿ ನಿಭಾಯಿಸಿದ್ದೇವು. ಆದರೆ, ಇಂದು ನಡೆದ ದಾಳಿ ಭಾರಿ ತೊಂದರೆ ಉಂಟು ಮಾಡುವಂತದ್ದಾಗಿತ್ತು ಎಂದು ಹೇಳಿದ್ದಾರೆ.

ರಷ್ಯಾದ ಕಜಾನ್ನಲ್ಲಿ ಅ.22ರಿಂದ ಅ.24ವರೆಗೆ BRICS summit ಆಯೋಜನೆಗೊಂಡಿದೆ. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಸೇರಿದಂತೆ ಹಲವು ಜಾಗತಿಕ ನಾಯಕರು ಭಾಗಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.