ವಾಷಿಂಗ್ಟನ್: ತಮ್ಮ ಬೆಂಬಲಿಗರನ್ನು ‘ಕಸ’ಕ್ಕೆ ಹೋಲಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರಿಗೆ ಕಸದ ವಾಹನವನ್ನು ಚಲಾಯಿಸುವ ಮೂಲಕ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.

ಭಾನುವಾರ ಟ್ರಂಪ್ ಪ್ರಚಾರ ಸಮಾವೇಶದಲ್ಲಿ ಭಾಗವಹಿಸಿದ್ದ ಹಾಲಿವುಡ್ ಹಾಸ್ಯನಟ ಟೋನಿ ಹಿಂಚ್ಕ್ಲಿಫ್, ಪೋಟೊ ರಿಕೊವನ್ನು ‘ತೇಲುವ ಕಸದ ದ್ವೀಪ’ ಎಂದು ಕರೆದಿದ್ದರು. ಅಲ್ಲದೇ ತಮ್ಮ ಭಾಷಣದುದ್ದಕ್ಕೂ ಲ್ಯಾಟಿನ್ ಅಮೆರಿಕನ್ನರು, ಯಹೂದಿಗಳು, ಪ್ಯಾಲೆಸ್ಟೀನಿಯರನ್ನು ಅವಹೇಳನ ಮಾಡಿದ್ದರು.

ಜನಾಂಗೀಯ ನಿಂದನೆ ಮಾಡಿದ್ದ ಹಿಂಚ್ಕ್ಲಿಫ್ ಹೇಳಿಕೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದ ಬೈಡನ್, ‘ನಾನು ಕಂಡ ಏಕೈಕ ತೇಲುತ್ತಿರುವ ಕಸವೆಂದರೆ ಅದು ಟ್ರಂಪ್ ಬೆಂಬಲಿಗರು’ ಎಂದು ಹೇಳಿದ್ದರು.

ಬೈಡನ್ ಹೇಳಿಕೆ ಬೆನ್ನಲ್ಲೇ ಟ್ರಂಪ್ ಅವರು ಕಸದ ವಾಹನವನ್ನು ಚಲಾಯಿಸುತ್ತಿರುವ ವಿಡಿಯೊವನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ಉದ್ಯಮಿ ಮತ್ತು ರಿಪಬ್ಲಿಕ್ ಪಕ್ಷದ ಬೆಂಬಲಿಗ ವಿವೇಕ್ ರಾಮಸ್ವಾಮಿ, ‘ನಾವು ಕಸವಲ್ಲ... ಕಸವನ್ನು ತೆಗೆದು ಹಾಕುವವರು’ ಎಂದು ಬರೆದುಕೊಂಡಿದ್ದಾರೆ.

ಅಮೆರಿಕದಲ್ಲಿ ನವೆಂಬರ್ 5ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.