ವಾಷಿಂಗ್ಟನ್: ಯುದ್ಧ ಪರಿಕರಗಳಿಗೆ ಸಂಬಂಧಿಸಿದಂತೆ ರಷ್ಯಾದ ಮೇಲೆ 500ಕ್ಕೂ ಹೆಚ್ಚು ಹೊಸ ನಿರ್ಬಂಧಗಳನ್ನು ಹೇರಲು ಅಮೆರಿಕ ಚಿಂತನೆ ನಡೆಸಿದೆ.

ಯುದ್ಧ ಮೂರನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರುವ ಕ್ರಮವಾಗಿ ಈ ತೀರ್ಮಾನಕ್ಕೆ ಬಂದಿದೆ. 2022ರ ಫೆಬ್ರುವರಿ 24ರಂದು ಉಕ್ರೇನ್ ಮೇಲೆ ಯುದ್ಧ ಸಾರಿದ ನಂತರ ರಷ್ಯಾದ ಮೇಲೆ ಹೇರಲಾಗುತ್ತಿರುವ ಅತಿದೊಡ್ಡ ನಿರ್ಬಂಧವಾಗಿದೆ.

ಐದು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿ ರಷ್ಯಾದ ಎರಡನೇ ಅತಿದೊಡ್ಡ ಬ್ಯಾಂಕ್‌ನ ಮುಖ್ಯಸ್ಥ, ಮಧ್ಯವರ್ತಿ ಗುರಿಯಾಗಿಸಿ ನ್ಯಾಯಾಂಗ ಇಲಾಖೆಯು ವಿವಿಧ ಕ್ರಮಗಳನ್ನು ಪ್ರಕಟಿಸಿದ ಹಿಂದೆಯೇ ನಿರ್ಬಂಧದ ಚಿಂತನೆ ನಡೆದಿದೆ.

ಡೊನಾಲ್ಡ್ ಟ್ರಂಪ್ ಜೊತೆಗೆ ಗುರುತಿಸಿಕೊಂಡಿರುವ ರಿಪಬ್ಲಿಕನ್ ಪಕ್ಷದ ಕೆಲ ಸಂಸದರ ವಿರೋಧದ ನಡುವೆಯೂ ಜೋ ಬೈಡನ್ ಆಡಳಿತವು ಉಕ್ರೇನ್‌ಗೆ ಪೂರ್ಣ ಬೆಂಬಲ ನೀಡಲು ಒತ್ತು ನೀಡಿದೆ.

ಈಗಾಗಲೇ ರಷ್ಯಾದ ಅಧಿಕಾರಿಗಳು, ಉದ್ಯಮಿಗಳು, ಬ್ಯಾಂಕ್‌ಗಳು, ಕಂಪನಿಗಳು, ಕೈಗಾರಿಕೆಗಳಿಗೆ ಅನ್ವಯಿಸಿ ಈಗಾಗಲೇ ಅಮೆರಿಕ ಹಲವು ನಿರ್ಬಂಧಗಳನ್ನು ಹೇರಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.