ಅಮೃತಸರ: ಪಂಜಾಬ್‌ನ ಅಮೃತಸರದ ಖಾಸಾ ಎಂಬಲ್ಲಿರುವ ಸೇನಾ ಶಿಬಿರದಲ್ಲಿ ಭಾನುವಾರ ದುರ್ಘಟನೆ ಸಂಭವಿಸಿದ್ದು, ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಐವರು ಯೋಧರು ಮೃತಪಟ್ಟಿದ್ದಾರೆ.

ಬಿಎಸ್‌ಎಫ್ ಪೇದೆ ಸಾತೆಪ್ಪ ಎಸ್.ಕೆ ಎಂಬುವವರು ಐವರು ಯೋಧರ ಮೇಲೆ ಗುಂಡು ಹಾರಿಸಿದ್ದಾರೆ. ಈ ಪೈಕಿ ನಾಲ್ವರು ಹತರಾದರೆ, ಘಟನೆಯಲ್ಲಿ ಗಾಯಗೊಂಡಿದ್ದ ಸಾತೆಪ್ಪಅವರೂ ಮೃತಪಟ್ಟಿದ್ದಾರೆ. ಈ ಬಗ್ಗೆ ಸುದ್ದಿ ಸಂಸ್ಥೆ ‘ಐಎಎನ್‌ಎಸ್’ ವರದಿ ಮಾಡಿದೆ.

ಸಾತೆಪ್ಪ ಎಸ್.ಕೆ ಕರ್ನಾಟಕದವರಾಗಿದ್ದಾರೆ.

ಅಟ್ಟಾರಿ ವಾಘಾ ಗಡಿಯಿಂದ 20 ಕಿ.ಮೀ ದೂರದಲ್ಲಿರುವ ಅಮೃತಸರದ ಖಾಸಾ ಎಂಬಲ್ಲಿನ ಸೇನಾ ಶಿಬಿರ ‘144 ಬಿಎನ್’ನಲ್ಲಿ ಈ ಅವಘಡ ನಡೆದಿದೆ.

ಘಟನೆ ಬಗ್ಗೆ ಸೇನೆಯು ತನಿಖೆಗೆ ಆದೇಶಿಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.