ನವದೆಹಲಿ: ಇತ್ತೀಚೆಗೆ ನಡೆದ ಎಐಎಡಿಎಂಕೆ ಪಕ್ಷದ ಸಾಮಾನ್ಯ ಸಭೆಯಲ್ಲಿತಮ್ಮನ್ನು ಪಕ್ಷದಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಒ. ಪನ್ನೀರಸೆಲ್ವಂ (ಒಪಿಎಸ್) ಮತ್ತು ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿ ಮೂರು ವಾರಗಳ ಒಳಗೆ ತೀರ್ಪು ನೀಡುವಂತೆ ಮದ್ರಾಸ್ ಹೈಕೋರ್ಟ್ಗೆ, ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.

ಮುಖ್ಯನ್ಯಾಯಮೂರ್ತಿ ಎನ್.ವಿ. ರಮಣ ಅವರ ನೇತೃತ್ವದ ಪೀಠವು, ಪಕ್ಷದ ವ್ಯವಹಾರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಮತ್ತು ಇವರ ವಿರೋಧಿ ಒಪಿಎಸ್ ಬಣಗಳಿಗೆ ಸೂಚನೆ ನೀಡಿದೆ.

ಇತ್ತೇಚೆಗೆ ನಡೆದಪಕ್ಷದ ಸಾಮಾನ್ಯ ಸಭೆಯಲ್ಲಿ ‘ದ್ವಿ ನಾಯಕತ್ವ ಮಾದರಿ’ಯನ್ನು ಕೊನೆಗೊಳಿಸಿ, ಇಪಿಎಸ್ ಅವರನ್ನು ಪಕ್ಷದ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಪಕ್ಷ ವಿರೋಧಿ ಚುಟವಟಿಕೆ ಆಪಾದನೆ ಮೇರೆಗೆ ಒಪಿಎಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.

ಇದನ್ನೂ ಓದಿ:ಪಕ್ಷದ ಏಕೈಕ ಸಂಸದನನ್ನೇ ಹೊರದಬ್ಬಿದ ಮಾಜಿ ಸಿಎಂ ಯಡಪ್ಪಾಡಿ ಪಳನಿಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.