ಮುಂಬೈ: 'ಕ್ರೂಸ್ ಹಡಗಿನಲ್ಲಿ ರಾಷ್ಟ್ರೀಯ ಮಾದಕ ವಸ್ತುಗಳ ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳೇ ಡ್ರಗ್ಸ್ ಇಟ್ಟು ನಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ನೋಡುತ್ತಿದ್ದಾರೆ' ಎಂದು ಪ್ರಕರಣದಲ್ಲಿ ಬಂಧಿತ ಅರ್ಬಾಜ್ ಮರ್ಚಂಟ್ ಆರೋಪಿಸಿದ್ದಾರೆ.

ಕಳೆದ ಭಾನುವಾರ ಮುಂಬೈನ ಕ್ರೂಸ್ ಹಡಗಿನಲ್ಲಿ ನಡೆದಿದೆ ಎನ್ನಲಾದ ಡ್ರಗ್ಸ್ ಪಾರ್ಟಿಯಲ್ಲಿ ಬಂಧಿತರಾದ ಏಳು ಜನರಲ್ಲಿ ಅರ್ಬಾಜ್ ಮರ್ಚಂಟ್ ಕೂಡ ಒಬ್ಬರು ಹಾಗೂ ಆರ್ಯನ್ ಖಾನ್ ಸ್ನೇಹಿತ.

ಪ್ರಕರಣದಲ್ಲಿ ಜಾಮೀನು ನೀಡಬೇಕು ಎಂದು ಮುಂಬೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಬಾಜ್ ಮರ್ಚಂಟ್, 'ಎನ್‌ಸಿಬಿ ಅಧಿಕಾರಿಗಳೇ ಡ್ರಗ್ಸ್ ಇಟ್ಟು ನಾಟಕ ಮಾಡುತ್ತಿದ್ದಾರೆ. ಬೇಕಾದರೆ ಸಿಸಿಟಿವಿ ದೃಶ್ಯಗಳನ್ನು ಬಿಡುಗಡೆ ಮಾಡಲಿ' ಎಂದು ಸವಾಲು ಹಾಕಿದ್ದಾರೆ.

'ಡ್ರಗ್ಸ್ ಸಿಕ್ಕಿದೆ ಅಥವಾ ಇಲ್ಲವೋ ಎಂಬ ವಿಚಾರದಲ್ಲಿ ಎನ್‌ಸಿಬಿ ಅಧಿಕಾರಿಗಳು ನ್ಯಾಯಾಲಯದದಾರಿ ತಪ್ಪಿಸುತ್ತಿದ್ದಾರೆ' ಎಂದು ಅರ್ಬಾಜ್ ಆರೋಪಿಸಿದ್ದಾರೆ ಎಂದು 'ಲೈವ್ ಲಾ' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇನ್ನೊಂದೆಡೆ ಆರ್ಯನ್ ಖಾನ್ ಮತ್ತು ಇತರ ಎಂಟು ಆರೋಪಿಗಳನ್ನು ಅಕ್ಟೊಬರ್ 7ರವರೆಗೆ ವಶಕ್ಕೆ ಪಡೆದಿರುವ ಎನ್‌ಸಿಬಿ, ವಾಟ್ಸ್‌ಆ್ಯಪ್ ಚಾಟ್‌ಗಳಲ್ಲಿ ಮಾದಕವಸ್ತು ಖರೀದಿಗಾಗಿ ಪಾವತಿ ವಿಧಾನಗಳು, ಡ್ರಗ್ಸ್‌ಗೆ ಹಲವಾರು ಕೋಡ್ ಹೆಸರುಗಳನ್ನು ಬಳಸಲಾಗುತ್ತಿದೆ ಎಂದು ಹೇಳಿದೆ. ಆದರೆ, ಆರ್ಯನ್ ಖಾನ್ ಅವರ ವಕೀಲರು ತಮ್ಮ ಕಕ್ಷಿದಾರನ ಬಳಿಯಿಂದ ಯಾವುದೇ ಮಾದಕ ದ್ರವ್ಯ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

ಹೆಚ್ಚಿನ ವಿಚಾರಣೆ ಅಗತ್ಯ ಇರುವುದರಿಂದ ಆರೋಪಿಗಳನ್ನು ಇನ್ನು ಕೆಲ ಕಾಲ ನಮ್ಮ ವಶಕ್ಕೆ ನೀಡಬೇಕು ಎಂದು ಎನ್‌ಸಿಬಿ ಇಂದು ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ ಇದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ:ಶಾರುಕ್ ಮನೆಗೆ ಸಲ್ಮಾನ್ ಖಾನ್ ಭೇಟಿ: ಆರ್ಯನ್ ಬಂಧನಕ್ಕೆ ಕಾರಣವಾಯ್ತಾ ಚಾಟಿಂಗ್?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್‌ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.