ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಂಚನೆ ಆರೋಪ ಎದುರಿಸುತ್ತಿರುವ ಸುಖೇಶ್ ಚಂದ್ರಶೇಖರ್, ಬಾಲಿವುಡ್ ಬೆಡಗಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಒಲಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಪ್ರಯತ್ನಿಸಿದ್ದರು. ಅದಕ್ಕಾಗಿ ಐಷಾರಾಮಿ ವಸ್ತುಗಳು, ಕಾರುಗಳು ಮತ್ತು ಇತರ ಉಡುಗೊರೆಗಳನ್ನು ನೀಡಿದ್ದರು. ಇದರೊಂದಿಗೆ ಜಾಕ್ವೆಲಿನ್ ಅವರನ್ನು ಮೆಚ್ಚಿಸಲು ಸುಕೇಶ್ ಇತರ ತಂತ್ರಗಳನ್ನು ಬಳಸಿದ್ದರು ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಜಾಕ್ವೆಲಿನ್ ಅವರಿಗಾಗಿಯೇ ಸರಣಿ ಚಿತ್ರಗಳನ್ನು ನಿರ್ಮಿಸುವುದಾಗಿ ಸುಖೇಶ್ ಭರವಸೆ ನೀಡಿದ್ದ. ನಕಲಿ ಹೇಳಿಕೆಗಳನ್ನು ಬಳಸಿ ಮತ್ತು ಎ-ಲಿಸ್ಟ್ ನಿರ್ಮಾಪಕರ ಹೆಸರನ್ನು ಕೈಬಿಡುವ ಮೂಲಕ, 500 ಕೋಟಿ ರೂಪಾಯಿ ವೆಚ್ಚದಲ್ಲಿ 3 ಪಾರ್ಟ್‌ಗಳಲ್ಲಿ ವುಮನ್ ಸೂಪರ್ ಹೀರೊ ಯೋಜನೆಯನ್ನು ಸಹ ಕೈಗೊಳ್ಳುವುದಾಗಿ ಸುಖೇಶ್, ಜಾಕ್ವೆಲಿನ್‌ಗೆ ಹೇಳಿದ್ದರು.

ಜಾಕ್ವೆಲಿನ್ ಬಾಲಿವುಡ್‌ನಲ್ಲಿ ಕೆಲಸ ಮಾಡಲು ಹುಡುಕುತ್ತಿದ್ದಾರೆ ಎಂಬುದು ಸುಖೇಶ್‌ಗೆ ಚೆನ್ನಾಗಿಯೇ ತಿಳಿದಿತ್ತು. ಹೀಗಾಗಿ ಆಕೆಯನ್ನು ಇನ್ನಷ್ಟು ಓಲೈಸಲೆಂದು ಅವರಿಗಾಗಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಹಾಲಿವುಡ್‌ನ ವಿಎಫ್‌ಎಕ್ಸ್ ಕಲಾವಿದರನ್ನು ಬಳಸಿಕೊಂಡು ಭಾರತದ ಮೊದಲ ಮಹಿಳಾ ಸೂಪರ್‌ಹೀರೊ ಯೋಜನೆಯನ್ನು ಜಾಕ್ವೆಲಿನ್ ಅವರೊಂದಿಗೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಅಲ್ಲದೆ ಅದನ್ನು ಜಾಗತಿಕ ಮಟ್ಟದಲ್ಲಿ ಚಿತ್ರೀಕರಿಸಲಾಗುವುದು ಎಂದಿದ್ದರು. ಜಾಕ್ವೆಲಿನ್ ಹಾಲಿವುಡ್ ನಟಿ ಏಂಜಲೀನಾ ಜೋಲೀ ಅವರನ್ನು ಹೋಲುತ್ತಾರೆ. ಹಾಗಾಗಿಯೇ ಅವರ ಸುತ್ತ ನಿರ್ಮಿಸಲಾದ ಸೂಪರ್ ಹೀರೊ ಸರಣಿಗೆ ನೀವು ಸರಿಹೊಂದುತ್ತೀರಿ ಎಂದು ಜಾಕ್ವೆಲಿನ್‌ಗೆ ಆತ ಹೇಳಿದ್ದರು.

ಈ ಸಂಭಾಷಣೆಯನ್ನೆಲ್ಲ ಗಂಭೀರವಾಗೇ ಕೇಳಿಸಿಕೊಂಡಿದ್ದ ಜಾಕ್ವೆಲಿನ್, ಒಂದು ಹಂತದಲ್ಲಿ ತಮಗಾಗಿ ನಿಜವಾಗಿಯೂ ಸಿನಿಮಾ ಮಾಡುತ್ತಾರೆ ಎಂದು ನಂಬಿ ಬಿಟ್ಟಿದ್ದರು. ಸಿನಿಮಾ ಬಜೆಟ್, ನಿರ್ಮಾಣದ ಬಗ್ಗೆ ತಿಳಿದುಕೊಳ್ಳಲು ಹೋಂವರ್ಕ್ ಮಾಡಿದ್ದ ಸುಖೇಶ್, ಆ ಬಗ್ಗೆ ಚೆನ್ನಾಗಿಯೇ ಮಾಹಿತಿ ಕಲೆ ಹಾಕಿದ್ದ ಮತ್ತು ಈ ಸಂಭಾಷಣೆಯ ವೇಳೆ, ಇಂಡಸ್ಟ್ರೀಯ ದೊಡ್ಡ ದೊಡ್ಡವರ ಹೆಸರುಗಳನ್ನು ಬಳಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.