ಮುಂಬೈ: ‘ಅಮೆರಿಕದಲ್ಲಿ ಪದವಿ ಕೋರ್ಸ್ ಓದುವಾಗ ನಿದ್ರಾಹೀನತೆ ಸಮಸ್ಯೆ ಇತ್ತು. ಅದರಿಂದ ಹೊರಬರಲು ‘ಗಾಂಜಾ’ ಸೇವನೆ ಆರಂಭಿಸಿದ್ದೆ’ ಎಂದು ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಎನ್ಸಿಬಿ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಈಚೆಗೆ ಅವರು ಆರೋಪಮುಕ್ತರಾಗಿದ್ದಾರೆ. ಇವರ ವಿರುದ್ಧ ಎನ್ಸಿಬಿ ಕೋರ್ಟ್ಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಗಾಂಜಾ ಸೇವನೆ ಕುರಿತಂತೆಆರ್ಯನ್ ಖಾನ್ ಅವರು ನೀಡಿದ್ದ ಹೇಳಿಕೆಯ ಉಲ್ಲೇಖವಿದೆ.

ಈ ಪ್ರಕರಣದಲ್ಲಿ 20 ಮಂದಿ ಪೈಕಿ 14 ಜನರ ವಿರುದ್ಧ ಎನ್ಸಿಬಿ ಕಳೆದ ಶುಕ್ರವಾರ ಆರೋಪಪಟ್ಟಿ ದಾಖಲಿಸಿತ್ತು. ‘ವಿಚಾರಣೆ ವೇಳೆ ಆರ್ಯನ್ ಖಾನ್, ತಾನು 2018ರಲ್ಲಿ ಪದವಿ ಕಲಿಕೆಗೆ ಅಮೆರಿಕದಲ್ಲಿ ಇದ್ದಾಗ ಗಾಂಜಾ ಸೇವನೆ ಆರಂಭಿಸಿದ್ದೆ‘ ಎಂದು ಹೇಳಿದ್ದಾಗಿ ಉಲ್ಲೇಖಿಸಲಾಗಿದೆ.

ಆಗ ನಾನು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿದ್ದೆ. ಗಾಂಜಾ ಸೇವಿಸುವುದರಿಂದ ಇದಕ್ಕೆ ಪರಿಹಾರ ಸಿಗಲಿದೆ ಎಂದು ನಾನು ಇಂಟರ್ನೆಟ್ನಲ್ಲಿ ಕೆಲ ಲೇಖನಗಳಲ್ಲಿ ಓದಿದ್ದೆ. ಹೀಗಾಗಿ ಸೇವನೆ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

ಇನ್ನೊಂದು ಹೇಳಿಕೆಯಲ್ಲಿ ಮೊಬೈಲ್ ಫೋನ್ನಲ್ಲಿ ಕಂಡುಬಂದಿದ್ದ ಡ್ರಗ್ಸ್ ಕುರಿತಾದ ಸಂದೇಶ ಸಂವಹನವನ್ನು ತಾನೇ ಮಾಡಿದ್ದಾಗಿಯೂ ಆರ್ಯನ್ ಖಾನ್ ಒಪ್ಪಿಕೊಂಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.