ನವದೆಹಲಿ: ‘ಕೋವಿಡ್- 19 ಬಿಕ್ಕಟ್ಟಿನಲ್ಲಿ ಆಮ್ಲಜನಕದ ಕೊರತೆಯಿಂದ ಉಂಟಾಗುತ್ತಿರುವ ಸಮಸ್ಯೆಗಳಿಂದ ಆಸ್ಪತ್ರೆಗಳು ಪಾಠ ಕಲಿಯಬೇಕು ಮತ್ತು ಜೀವ ಉಳಿಸುವ ಈ ಅನಿಲವನ್ನು ಉತ್ಪಾದಿಸಲು ಆಸ್ಪತ್ರೆಯಲ್ಲೇ ಘಟಕಗಳನ್ನು ಸ್ಥಾಪಿಸಬೇಕು’ ಎಂದು ದೆಹಲಿ ಹೈಕೋರ್ಟ್ ಶನಿವಾರ ಹೇಳಿದೆ.

ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ರೇಖಾ ಪಲ್ಲಿ ಅವನ್ನೊಳಗೊಂಡ ನ್ಯಾಯಪೀಠವು, ಕೋವಿಡ್ ಸಂಬಂಧಿತ ಸಮಸ್ಯೆಗಳ ಕುರಿತು ಶನಿವಾರ ನಡೆಸಿದ ವಿಶೇಷ ತುರ್ತು ವಿಚಾರಣೆ ವೇಳೆ ಈ ರೀತಿ ಅಭಿಪ್ರಾಯಪಟ್ಟಿದೆ.

‘ವಾಣಿಜ್ಯ ದೃಷ್ಟಿಯಿಂದ ಹಾಗೂ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವುದಕ್ಕಾಗಿ ಕೆಲವೊಂದು ಆಸ್ಪತ್ರೆಗಳಲ್ಲಿ, ಅದರಲ್ಲೂ ದೊಡ್ಡ ಆಸ್ಪತ್ರೆಗಳಲ್ಲೇ ಆಮ್ಲಜನಕ ಉತ್ಪಾದನೆ ಘಟಕದಂತಹ ಅಗತ್ಯವಾಗಿರುವ ಸೌಲಭ್ಯಗಳ ಅಳವಡಿಕೆಯನ್ನೇ ಕೈಬಿಡಲಾಗುತ್ತಿದೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

‘ಪ್ರತಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕಗಳನ್ನು ಸ್ಥಾಪಿಸುವುದು ಅತ್ಯವಶ್ಯ. ಅಂಥ ಘಟಕಗಳನ್ನು ಹೊಂದುವುದು ಪ್ರತಿ ವೈದ್ಯಕೀಯ ಕೇಂದ್ರದ ಜವಾಬ್ದಾರಿಯಾಗಿದೆ’ ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ... ದೇವಾಲಯಗಳ ಲೆಕ್ಕ ಪರಿಶೋಧನೆ: ಈಶಾ ಫೌಂಡೇಷನ್ನಿಂದ ಮದ್ರಾಸ್ ಹೈಕೋರ್ಟ್ಗೆ ಪಿಐಎಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.