ನವದೆಹಲಿ: ಬೆಂಗಳೂರಿಗೆ ಹೊರಟಿದ್ದ ವಿಮಾನದ ಪ್ರಯಾಣಿಕರು ಏರೋಬ್ರಿಡ್ಜ್ನಲ್ಲಿ ದೀರ್ಘ ಸಮಯದವರೆಗೆ ಕಾಯಬೇಕಾದ ಘಟನೆ ಕುರಿತು ನಾಗರಿಕ ವಿಮಾನ ಯಾನ ನಿರ್ದೇಶನಾಲಯವು (ಡಿಜಿಸಿಎ) ಗುರುವಾರ ಸ್ಪೈಸ್ಜೆಟ್ನಿಂದ ವರದಿ ಕೇಳಿದೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಸಹ ಪ್ರಯಾಣಿಕರು ಏರೋಬ್ರಿಡ್ಜ್ನಲ್ಲಿ ದೀರ್ಘಕಾಲ ಕಾಯಬೇಕಾದ ಬಗ್ಗೆ ಪ್ರಯಾಣಿಕರೊಬ್ಬರು ವಿಡಿಯೊ ಮತ್ತು ಅನುಭವವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಸ್ಪೈಸ್ ಜೆಟ್ ವಿಮಾನ ಎಸ್ ಜಿ 8133 ದೆಹಲಿ-ಬೆಂಗಳೂರು ಪ್ರಯಾಣಿಕರು ಇದನ್ನು ತಿಳಿಸಿದ್ದಾರೆ.

ನಿಯಂತ್ರಕರು ಈ ಘಟನೆಯನ್ನು ಪರಿಶೀಲಿಸುತ್ತಿದ್ದಾರೆ ಮತ್ತು ವಿಮಾನಯಾನ ಸಂಸ್ಥೆಯಿಂದ ವರದಿ ಕೋರಿದ್ದಾರೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ಗುರುವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬುಧವಾರ ರಾತ್ರಿ ಹವಾಮಾನ ಅಡಚಣೆಯಿಂದಾಗಿ ವಿಮಾನವು ವಿಳಂಬವಾಯಿತು. ಪ್ರಯಾಣಿಕರು ಭದ್ರತಾ ತಪಾಸಣೆ ಪೂರ್ಣಗೊಳಿಸಿದ್ದರಿಂದ ಅವರನ್ನು ಏರೋಬ್ರಿಡ್ಜ್ನಲ್ಲಿ ಕಾಯಲು ಮನವಿ ಮಾಡಲಾಯಿತು ಎಂದು ಸ್ಪೈಸ್ ಜೆಟ್ ಬುಧವಾರ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.