ನವದೆಹಲಿ: ಕೇಂದ್ರ ಚುನಾವಣಾ ಆಯೋಗ ಮುಂಬರುವ ತಮಿಳುನಾಡು, ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆ ದಿನಾಂಕಗಳ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಕೇಂದ್ರ ಚುನಾವಣಾ ಆಯೋಗ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಚುನಾವಣೆಯ ಮಾಹಿತಿ ನೀಡಿತು. ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಮಾರ್ಚ್ 27ರಿಂದ ವಿವಿಧ ಹಂತಗಳಲ್ಲಿ ಮತದಾನನಡೆಯಲಿದೆ. ಹಾಗೆಯೇ ಮೇ 2ರಂದು ಮತ ಎಣಿಕೆ ನಡೆಯಲಿದೆ.

ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯ/ಕೇಂದ್ರಾಡಳಿತಗಳ ಪಟ್ಟಿ: ಕೇರಳ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ

ಚುನಾವಣಾ ವೇಳಾಪಟ್ಟಿಇಂತಿದೆ:

ಪಶ್ಚಿಮ ಬಂಗಾಳ:
ಎಂಟು ಹಂತದಲ್ಲಿ ಮತದಾನ
ಮೊದಲ ಹಂತದಲ್ಲಿ 30 ಕ್ಷೇತ್ರಗಳಲ್ಲಿ ಮಾರ್ಚ್ 27ರಂದು ಮತದಾನ
2ನೇ ಹಂತದಲ್ಲಿ 30 ಕ್ಷೇತ್ರಗಳಿಗೆ ಏಪ್ರಿಲ್ 1ರಂದು ಮತದಾನ
3ನೇ ಹಂತದಲ್ಲಿ 31 ಕ್ಷೇತ್ರಗಳಿಗೆ ಏಪ್ರಿಲ್ 6ರಂದು ಮತದಾನ
4ನೇ ಹಂತದಲ್ಲಿ 44 ಕ್ಷೇತ್ರಗಳಿಗೆ ಏಪ್ರಿಲ್ 10ರಂದು ಮತದಾನ
5ನೇ ಹಂತದಲ್ಲಿ 45 ಕ್ಷೇತ್ರಗಳಿಗೆ ಏಪ್ರಿಲ್ 17ರಂದು ಮತದಾನ
6ನೇ ಹಂತದಲ್ಲಿ 43 ಕ್ಷೇತ್ರಗಳಿಗೆ ಏಪ್ರಿಲ್ 22ರಂದು ಮತದಾನ
7ನೇ ಹಂತದಲ್ಲಿ 36 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ
8ನೇ ಹಂತದಲ್ಲಿ 35 ಕ್ಷೇತ್ರಗಳಿಗೆ ಏಪ್ರಿಲ್ 29ರಂದು ಮತದಾನ

ಮತ ಎಣಿಕೆ: ಮೇ 2

ತಮಿಳುನಾಡು:
ಒಂದು ಹಂತದಲ್ಲಿ ಏಪ್ರಿಲ್ 6ರಂದು ಮತದಾನ
ಮತ ಎಣಿಕೆ: ಮೇ 2
ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಅಂದೇ ನಡೆಯಲಿದೆ.

ಪುದುಚೇರಿ:
ಏಪ್ರಿಲ್ 6ರಂದು ಮತದಾನ
ಮತ ಎಣಿಕೆ: ಮೇ 2

ಕೇರಳ:
ಒಂದೇ ಹಂತದಲ್ಲಿ ಎಪ್ರಿಲ್ 6ರಂದು ಮತದಾನ.
ಮತ ಎಣಿಕೆ: ಮೇ 2
ಮಲಪ್ಪುರಂ ಲೋಕಸಭೆಗೂ ಅಂದೇ ಉಪಚುನಾವಣೆ

ಅಸ್ಸಾಂ: ಮೂರು ಹಂತದ ಚುನಾವಣೆ.
ಮೊದಲ ಹಂತ ಮಾರ್ಚ್ 27
2ನೇ ಹಂತ ಏಪ್ರಿಲ್ 1,
3ನೇ ಹಂತ ಏಪ್ರಿಲ್ 6

ಮತ ಎಣಿಕೆ: ಮೇ 2

ಇದನ್ನೂ ಓದಿ:ರಾಜ್ಯಪಾಲ ದತ್ತಾತ್ರೇಯ ಮೇಲೆ ಹಲ್ಲೆ ಆರೋಪ; ಕಾಂಗ್ರೆಸ್ನ ಐವರು ಶಾಸಕರ ಅಮಾನತು

ಮತದಾನ ಅವಧಿ 1 ತಾಸು ಹೆಚ್ಚಳ:
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಮತದಾನ ಅವಧಿ 1 ತಾಸು ಹೆಚ್ಚಿಸಲಾಗುವುದುಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಒಟ್ಟು ವಿಧಾನಸಭಾ ಕ್ಷೇತ್ರಗಳ ಅಂಕಿಅಂಶ:
ಅಸ್ಸಾಂನಲ್ಲಿ 126, ತಮಿಳುನಾಡಿನಲ್ಲಿ 234, ಪಶ್ಚಿಮ ಬಂಗಾಳದಲ್ಲಿ 294, ಕೇರಳದಲ್ಲಿ 140 ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಮತದಾನ ನಡೆಯಲಿದೆ.

ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಸೇರಿದಂತೆ ಒಟ್ಟು 824 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಹಾಗೆಯೇ 2.7 ಲಕ್ಷ ಮತಗಟ್ಟೆಗಳನ್ನು ಹೊಂದಿರಲಿದೆ.

ಮತಗಟ್ಟೆಗಳ ಸಂಖ್ಯೆಯಲ್ಲಿ ಕಡಿತ:
ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ ರಾಜ್ಯದ ಮತಗಟ್ಟೆಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.