ನವದೆಹಲಿ:ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಹುತಾತ್ಮರಾಗಿದ್ದ ಕರ್ನಲ್ ಸಂತೋಷ್ ಬಾಬು ಅವರಿಗೆ ಮಂಗಳವಾರ ಮರಣೋತ್ತರ ‘ಮಹಾವೀರ ಚಕ್ರ’ ಪ್ರದಾನ ಮಾಡಲಾಯಿತು.

ಸಂತೋಷ್ ಬಾಬು ಪರವಾಗಿ ಅವರ ತಾಯಿ ಹಾಗೂ ಪತ್ನಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ‘ಮಹಾವೀರ ಚಕ್ರ’ ಸ್ವೀಕರಿಸಿದರು.

ಕಳೆದ ವರ್ಷ ಜೂನ್ನಲ್ಲಿ ಲಡಾಖ್ನ ಪೂರ್ವಭಾಗದ ಗಾಲ್ವನ್ ಕಣಿವೆಯಲ್ಲಿ ಚೀನಾ ಯೋಧರ ಜತೆ ನಡೆಸಿದ್ದ ಸಂಘರ್ಷದಲ್ಲಿ ಬಾಬು ಹುತಾತ್ಮರಾಗಿದ್ದರು.

ಓದಿ:ಗಾಲ್ವನ್ ಕಣಿವೆಯಲ್ಲಿ ಜೂನ್ 15ರಂದು ಏನೆಲ್ಲಾ ನಡೆಯಿತು?

ತೆಲಂಗಾಣದ ಸೂರ್ಯಪೇಟೆಯವರಾದ ಬಾಬು ಅವರು 2004ರಲ್ಲಿ ಸೇನೆಗೆ ಸೇರಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ವೃತ್ತಿ ಆರಂಭಿಸಿದ್ದರು. ‘ಬಿಹಾರ–16’ ರೆಜಿಮೆಂಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.