ನವದೆಹಲಿ: ಹಿಮಪಾತದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಉತ್ತರಾಖಂಡದ ಚಮೋಲಿ, ತಪೋವನ ಮತ್ತು ಜೋಶಿಮಠದ ಮೇಲೆ ಫೆಬ್ರುವರಿ 7 ಮತ್ತು 8 ರಂದು ಯಾವುದೇ ಹವಾಮಾನ ಪ್ರತಿಕೂಲ ಪರಿಸ್ಥಿತಿಯ ಪರಿಣಾಮ ಉಂಟಾಗುವ ಸಂಭವವಿಲ್ಲ ಎಂದು ಹವಾಮಾನ ಇಲಾಖೆ ಭಾನುವಾರ ತಿಳಿಸಿದೆ.

ಚಮೋಲಿ, ತಪೋವನ ಮತ್ತು ಜೋಶಿಮಠದಲ್ಲಿ ಈ ಎರಡು ದಿನಗಳಲ್ಲಿ ಶುಷ್ಕ ಹವಾಮಾನವನ್ನು ಕಾಣುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೆಚ್ಚುವರಿ ಮಹಾನಿರ್ದೇಶಕ ಆನಂದ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಹಿಮಪಾತ: ಉತ್ತರಾಖಂಡವನ್ನು ಕಾಡಿದ್ದ ಪ್ರಮುಖ ನೈಸರ್ಗಿಕ ವಿಕೋಪಗಳು

ಫೆಬ್ರವರಿ 7-8ರಂದು ಹಿಮಪಾತ ಅಥವಾ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ಐಎಂಡಿ ತನ್ನ ಹವಾಮಾನ ವಿಶೇಷ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಫೆಬ್ರವರಿ 9 ಮತ್ತು 10 ರಂದು ಚಮೋಲಿ ಜಿಲ್ಲೆಯ ಉತ್ತರ ಭಾಗಗಳಲ್ಲಿ ಲಘು ಮಳೆ / ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹೇಳಿದೆ.

ಉತ್ತರಾಖಂಡದಲ್ಲಿ ಜೋಶಿಮಠದಲ್ಲಿ ಭಾನುವಾರ ಸಂಭವಿಸಿದ ಹಿಮಪಾತದಲ್ಲಿ ತಪೋವನ-ರೆನಿಯಲ್ಲಿನ ವಿದ್ಯುತ್ ಸ್ಥಾವರದಲ್ಲಿ ಕೆಲಸ ಮಾಡುತ್ತಿರುವ 150ಕ್ಕೂ ಹೆಚ್ಚಿನ ಕಾರ್ಮಿಕರು ಮೃತಪಟ್ಟಿರುವ ಶಂಕೆಯಿದೆ ಎಂದು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ:ನೋಡಿ: ಉತ್ತರಾಖಂಡದಲ್ಲಿ ಹಿಮಪ್ರವಾಹ: ಉಕ್ಕಿ ಹರಿದ ನದಿ, ನೂರಾರು ಮಂದಿ ಕಣ್ಮರೆ!

ಹಿಮಪಾತದಿಂದಾಗಿ ಧೌಲಿ ಗಂಗಾ ನದಿಯಲ್ಲಿ ಭಾರಿ ಪ್ರವಾಹ ಏರ್ಪಟ್ಟಿದ್ದು, ಪರ್ವತದ ಮೇಲ್ಭಾಗದಲ್ಲಿ ದೊಡ್ಡ ಪ್ರಮಾಣದ ವಿನಾಶಕ್ಕೆ ಕಾರಣವಾಯಿತು. ಈವರೆಗೆ 9-10 ಮೃತದೇಹಗಳು ಪತ್ತೆಯಾಗಿದ್ದು, ದೊಡ್ಡ ಮಟ್ಟದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರಾಖಂಡದಲ್ಲಿ ಹಿಮಪಾತ: 150ಕ್ಕೂ ಅಧಿಕ ಜನರು ಕಣ್ಮರೆ, ಕೇಂದ್ರದಿಂದ ನೆರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.