ಹಿಮಂತನಗರ (ಗುಜರಾತ್): ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಹಿಮಂತನಗರ ಕ್ಷೇತ್ರದಿಂದ ಸ್ಪರ್ಧಿಸಿರುವ ಪಕ್ಷೇತರ ಅಭ್ಯರ್ಥಿ ಮಗನ್ಭಾಯ್ ಸೋಳಂಕಿ ಅವರಿಗೆ ಅವರ ಮೀಸೆಯೇ ಪ್ರಚಾರದ ವಸ್ತು. ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಿರುವ ಅವರ ಮೀಸೆಯು ಒಂದು ತುದಿಯಿಂದ ಇನ್ನೊಂದು ತುದಿಗೆ ಐದು ಅಡಿಯಷ್ಟು ಉದ್ದ ಇದೆ.

57 ವರ್ಷ ವಯಸ್ಸಿನ ಸೋಳಂಕಿ ಅವರು ಸೇನೆಯಿಂದ ನಿವೃತ್ತರಾದವರು. ಹಾನರರಿ ಲೆಫ್ಟಿನೆಂಟ್ ಹುದ್ದೆಯಲ್ಲಿ ಅವರು ಇದ್ದರು. ಅವರಲ್ಲಿ ಒಂದು ಬಲವಾದ ಬೇಡಿಕೆಯೂ ಇದೆ. ‘ಯಾರೆಲ್ಲ ಉದ್ದನೆಯ ಮೀಸೆ ಬೆಳೆಸುತ್ತಾರೆಯೋ ಅವರಿಗೆ ಅದರ ನಿರ್ವಹಣೆಗೆ ಸರ್ಕಾರವು ಭತ್ಯೆ ಕೊಡಬೇಕು’ ಎಂಬುದೇ ಆ ಬೇಡಿಕೆ.

ತಾವು ಗೆದ್ದರೆ, ಗುಜರಾತ್ನ ಯುವಕರು ಉದ್ದಕ್ಕೆ ಮೀಸೆ ಬೆಳೆಸುವುದನ್ನು ಉತ್ತೇಜಿಸಲು ಕಾನೂನು ತರುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿಯೂ ಅವರು ಹೇಳಿದ್ದಾರೆ.

‘ಸೇನೆಯಲ್ಲಿ ಇದ್ದಾಗ ಮೀಸೆ ನಿರ್ವಹಣೆಗೆ ವಿಶೇಷ ಭತ್ಯೆಯನ್ನು ನೀಡಲಾಗಿತ್ತು. ಮೀಸೆವಾಲಾ ಎಂದೇ ನಾನು ಸೇನೆಯಲ್ಲಿ ಜನಪ್ರಿಯನಾಗಿದ್ದೆ. ನನ್ನ ಮೀಸೆಯು ನನ್ನ ಹೆಮ್ಮೆ. ಯಾವುದೇ ಗುಂಪಿನಲ್ಲಿ ಇದ್ದರೂ ನನ್ನನ್ನು ಇದು ಭಿನ್ನವಾಗಿಸುತ್ತದೆ’ ಎಂದು ಸೋಳಂಕಿ ಹೇಳಿದ್ದಾರೆ.

ಬಿಜೆಪಿಯ ಭದ್ರಕೋಟೆಯಾಗಿರುವ ಹಿಮಂತನಗರದಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಸೋಳಂಕಿಗೆ ಗೊತ್ತು. ಚುನಾವಣೆಗೆ ಸ್ಪರ್ಧಿಸುವುದು ಅವರಿಗೆ ಇಷ್ಟ. ಅದಕ್ಕಾಗಿ ಮಾತ್ರ ಅವರು ಸ್ಪರ್ಧಿಸುತ್ತಿದ್ದಾರೆ. 2017ರ ಚುನಾವಣೆಯಲ್ಲಿಯೂ ಸ್ಪರ್ಧಿಸಿದ್ದರು.

2017ರ ಚುನಾವಣೆಯಲ್ಲಿ ಅವರು ಬಿಎಸ್ಪಿ ಅಭ್ಯರ್ಥಿಯಾಗಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.