ನವದೆಹಲಿ: ಭಾರತವು ಏಳು ವರ್ಷಗಳಲ್ಲಿ ₹ 38 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡಿದ್ದು, ಶೀಘ್ರದಲ್ಲೇ ಒಟ್ಟಾರೆ ನಿವ್ವಳ ರಫ್ತುದಾರ ರಾಷ್ಟ್ರವಾಗುವ ಭರವಸೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಹೇಳಿದರು.

ಶನಿವಾರ ಇಲ್ಲಿ ನಡೆದ ಸೊಸೈಟಿ ಆಫ್ ಇಂಡಿಯನ್ ಡಿಫೆನ್ಸ್ ಮ್ಯಾನುಫ್ಯಾಕ್ಚರ್ಸ್‌ನ (ಎಸ್‌ಐಡಿಎಂ) ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ) ಸಮಾವೇಶದಲ್ಲಿ ಮಾತನಾಡಿದ ಅವರು, ‘ನಾವು ಅಂದಾಜು ₹ 85 ಸಾವಿರ ಕೋಟಿಯಷ್ಟು ಹೂಡಿಕೆಯ ಏರೋಸ್ಪೇಸ್ ಮತ್ತು ರಕ್ಷಣಾ ಉದ್ಯಮ ಹೊಂದಿದ್ದೇವೆ. ಇದರಲ್ಲಿ ಖಾಸಗಿ ವಲಯದ ಕೊಡುಗೆ ₹ 18 ಸಾವಿರ ಕೋಟಿಗೂ ಹೆಚ್ಚಿದೆ’ ಎಂದರು.

ರಾಷ್ಟ್ರದ ಭದ್ರತೆ ಬಲಪಡಿಸಲು ನೆರವಾಗುವ ಸಂಶೋಧನಾ ಚಟುವಟಿಕೆಗಳಿಗೆ ಹೆಚ್ಚಿನ ಹೂಡಿಕೆ ಮಾಡುವಂತೆ ಸಚಿವರು ಎಂಎಸ್‌ಎಂಇ ಪ್ರತಿನಿಧಿಗಳಿಗೆ ತಿಳಿಸಿದರು.

ಸರ್ಕಾರ ಕೈಗೊಂಡಿರುವ ಕ್ರಮಗಳಿಂದ ಸುಮಾರು 12,000 ಎಂಎಸ್‌ಎಂಇಗಳು ರಕ್ಷಣಾ ಉದ್ಯಮಕ್ಕೆ ಸೇರಿಕೊಂಡಿವೆ ಎಂದು ಅವರು ಮಾಹಿತಿ ನೀಡಿದರು.

ಸರ್ಕಾರವು 2024-25ರ ವೇಳೆಗೆ ₹ 35,000 ಕೋಟಿ ರಫ್ತು ಗುರಿ ಸಾಧಿಸುವ ಯೋಜನೆ ಹೊಂದಿದೆ. ಪ್ರಸ್ತುತ, ಭಾರತವು ಸುಮಾರು 70 ದೇಶಗಳಿಗೆ ರಕ್ಷಣಾ ಸಾಧನಗಳನ್ನು ರಫ್ತು ಮಾಡುತ್ತಿದೆ. ಸ್ಟಾಕ್‌ಹೋಮ್ ಇಂಟರ್‌ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ 2020ರ ವರದಿಯ ಪ್ರಕಾರ, ಭಾರತವು ಅತಿ ಹೆಚ್ಚು ರಕ್ಷಣಾ ಸಾಮಗ್ರಿಗಳನ್ನು ರಫ್ತು ಮಾಡುತ್ತಿರುವ ಅಗ್ರ 25 ದೇಶಗಳ ಪಟ್ಟಿಯಲ್ಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.