ನವದೆಹಲಿ: ಐಎನ್‌ಎಸ್ ಮೀಡಿಯಾ ಹಣಅಕ್ರಮ ವರ್ಗಾವಣೆ ಪ್ರಕರಣದ ಸಂಬಂಧ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅರ್ಜಿ ಆಧರಿಸಿ ದೆಹಲಿ ಕೋರ್ಟ್ ಶನಿವಾರ ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ನೋಟಿಸ್ ನೀಡಿದೆ.

ವಿಶೇಷ ನ್ಯಾಯಾಧೀಶರಾದ ಎಂ.ಕೆ.ನಾಗಪಾಲ್ ಅವರು, ಈ ಸಂಬಂಧ ಪ್ರತಿಕ್ರಿಯಿಸಲು ಸೂಚಿಸಿ ನೋಟಿಸ್ ಜಾರಿ ಮಾಡಿದರು. ಚಿದಂಬರಂ ಪರವಾಗಿ ವಕೀಲ ಅರ್ಶ್‌ದೀಪ್ ಸಿಂಗ್ ಖುರಾನಾ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸಲ್ಲಿಸಿರುವ ದೋಷಾರೋಪ ಪಟ್ಟಿ, ಪೂರಕ ದಾಖಲೆಗಳನ್ನು ಹಾಜರುಪಡಿಸಲು ಇ.ಡಿಗೆ ಸೂಚಿಸಬೇಕು ಎಂದೂ ಅವರು ಕೋರಿದ್ದರು.

ದಾಖಲೆಗಳ ಪುಟಸಂಖ್ಯೆಗಳ ಗೊಂದಲ ಬಗೆಹರಿಸಬೇಕು, ನಾಪತ್ತೆಯಾಗಿರುವ ದಾಖಲೆಗಳನ್ನು ಹಾಜರುಪಡಿಸಬೇಕು ಎಂದೂ ಇ.ಡಿಗೆ ಸೂಚಿಸಲಾಗಿದೆ. ಈ ಪ್ರಕರಣದ ಸಂಬಂಧ ಚಿದಂಬರಂ ಅವರನ್ನು ಆಗಸ್ಟ್ 21, 2009ರಂದು ಸಿಬಿಐ ಬಂಧಿಸಿದ್ದು, ಅಕ್ರಮ ಹಣ ವರ್ಗಾವಣೆ ಆರೋಪಕ್ಕೆ ಸಂಬಂಧಿಸಿ ಅದೇ ವರ್ಷ ಅಕ್ಟೋಬರ್ 16ರಂದು ಇ.ಡಿ ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.