ಡೆಹ್ರಾಡೂನ್/ತಪೋವನ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಕುಸಿತ, ನಂತರದ ಪ್ರವಾಹದ ತೀವ್ರತೆಗೆ ಸಿಲುಕಿದ್ದ, ತಪೋವನ ಸುರಂಗ ಮತ್ತು ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಭಾನುವಾರ ಒಟ್ಟು 12 ಶವಗಳನ್ನು ಹೊರತೆಗೆಯಲಾಗಿದೆ.

ಇದರೊಂದಿಗೆ ಅವಘಡದಲ್ಲಿ ಮೃತರಾದವರ ಸಂಖ್ಯೆ 50ಕ್ಕೆ ಏರಿದೆ. ಇನ್ನೂ 154 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.

ಎನ್‌ಟಿಪಿಸಿಯ 520 ಮೆಗಾ ವಾಟ್‌ನ ತಪೋವನ್–ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ ಕೆಸರು ತೆರವು ಕಾರ್ಯಾಚರಣೆ ವೇಳೆ ಐವರ ಶವಪತ್ತೆಯಾದವು. ಉಳಿದಂತೆ ಆರು ಶವಗಳು 13.2 ಮೆಗಾವಾಟ್ ಸಾಮರ್ಥ್ಯದ ವಿದ್ಯುತ್ ಯೋಜನೆ ರೈನಿ ಹಾಗೂ ಒಂದು ಶವ ರುದ್ರಪ್ರಯಾಗ ನದಿ ಪಾತ್ರದಲ್ಲಿ ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುರಂಗ ಮಾರ್ಗದಲ್ಲಿ ತುಂಬಿರುವ ಕೆಸರು ತೆರವುಗೊಳಿಸುವ ಕಾರ್ಯದಲ್ಲಿ ರಕ್ಷಣಾ ತಂಡಗಳು ಕಾರ್ಯತತ್ಪರವಾಗಿವೆ.

ಇದನ್ನೂ ಓದಿ:ರಸ್ತೆ ಅಪಘಾತದ ಸಾವು: ಭಾರತದಲ್ಲೇ ಹೆಚ್ಚು ಎಂದ ವಿಶ್ವಬ್ಯಾಂಕ್ ವರದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.