ಬೆಂಗಳೂರು: ಎನ್‌ಡಿಎ ಮೈತ್ರಿ ತೊರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉಪ ರಾಷ್ಟ್ರಪತಿಯಾಗಲು ಬಯಸಿದ್ದರು ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ತಿಳಿಸಿದ್ದಾರೆ.

ಉಪ ರಾಷ್ಟ್ರಪತಿಯಾಗುವ ಮಹತ್ವಾಕಾಂಕ್ಷೆಗೆ ಬಿಜೆಪಿ ಸಹಕರಿಸದ ಕಾರಣ ನಿತೀಶ್ ಅವರು ಎನ್‌ಡಿಎ ತೊರೆದರೆಂದು ಸುಶೀಲ್ ಮೋದಿ ಬುಧವಾರ ಆರೋಪಿಸಿದ್ದಾರೆ.

ಮೋದಿ ಆರೋಪವನ್ನು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಅವರು ತಳ್ಳಿಹಾಕಿದ್ದಾರೆ.

ನಿತೀಶ್ ಅವರು 2017ರ ವರೆಗೆ ಮಹಾಮೈತ್ರಿಕೂಟದ ಭಾಗವಾಗಿಯೇ ಇದ್ದರು. ಆದರೆ, 2017ರಲ್ಲಿ ಮಹಾಮೈತ್ರಿಕೂಟ ತೊರೆದು ಬಿಜೆಪಿ ನೇತೃತ್ವದ ಎನ್‌ಡಿಎ ಸೇರಿಕೊಂಡರು. ಮಹಾಮೈತ್ರಿಕೂಟಕ್ಕೆ ಸೇರುವ ಮೊದಲೂ ಅವರು ಎನ್‌ಡಿಎಯಲ್ಲಿಯೇ ಇದ್ದರು.

ಈಗ, 9 ವರ್ಷಗಳಲ್ಲಿ ಎರಡನೇ ಬಾರಿಗೆ ಬಿಜೆಪಿ ಜತೆಗಿನ ನಂಟನ್ನು ಅವರು ಕಡಿದುಕೊಂಡಿದ್ದಾರೆ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯ ಅಭ್ಯರ್ಥಿ ಎಂದು ಬಿಜೆಪಿ 2013ರಲ್ಲಿ ನಿರ್ಧರಿಸಿದಾಗ ನಿತೀಶ್ ಅವರು ಎನ್‌ಡಿಎ ತೊರೆದಿದ್ದರು.

ಇವನ್ನೂ ಓದಿ:

ಜನಾದೇಶವನ್ನು ಅವಮಾನಿಸಿದ ನಿತೀಶ್ ಕುಮಾರ್: ಬಿಜೆಪಿ ವಾಗ್ದಾಳಿ

ಮತ್ತೆ ಎನ್‌ಡಿಎ ತೊರೆದ ನಿತೀಶ್: ಸಿ.ಎಂ ಆಗಿ ಇಂದು ಪ್ರಮಾಣ

ಬಿಹಾರ ಬೆಳವಣಿಗೆ ಕಂಡು ಜನತಾ ಪರಿವಾರ ಒಟ್ಟಿಗಿದ್ದ ಕಾಲ ಮೆಲುಕು ಹಾಕಿದ ದೇವೇಗೌಡ

ಬಿಹಾರ ರಾಜಕೀಯ: ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ರಾಷ್ಟ್ರಪತಿ ಸ್ಪರ್ಧೆಯಲ್ಲಿ ನಾನಿಲ್ಲ: ನಿತೀಶ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.