ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಪ್ರಿಯಾಂಕಾಗಾಂಧಿವಾದ್ರಾಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.

ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ‘ಕೊರೊನಾ ಸೋಂಕಿನ ಸೌಮ್ಯ ಲಕ್ಷಣಗಳಿರುವ ಕಾರಣಕ್ಕೆ ನಾನು ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ವರದಿ ಪಾಸಿಟಿವ್ ಬಂದಿದೆ.ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು,ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಸದಲ್ಲಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ನನ್ನ ಸಂಪರ್ಕಕ್ಕೆ ಬಂದವರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಪ್ರಿಯಾಂಕಾ ಮನವಿ ಮಾಡಿದ್ದಾರೆ.

ಇತ್ತ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೂ ಗುರುವಾರ ಕೋವಿಡ್ ದೃಢಪಟ್ಟಿದ್ದು, ಮನೆಯಲ್ಲೇ ಪ್ರತೇಕವಾಸದಲ್ಲಿದ್ದಾರೆ.

ರಾಷ್ಟ್ರದಲ್ಲಿ ದೈನಂದಿನ ಕೋವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಹೊಸದಾಗಿ 4,041 ಮಂದಿಗೆ ಸೋಂಕು ತಗುಲಿದೆ. 10 ಮಂದಿ ಕೋವಿಡ್ ಕಾರಣದಿಂದ ಮೃತಪಟ್ಟಿದ್ದಾರೆ.

ಇದರೊಂದಿಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 4,31,68,585ಕ್ಕೆ ತಲುಪಿದೆ. ಮೃತರ ಸಂಖ್ಯೆ ಒಟ್ಟು 5,24,651ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಬಿಡುಗಡೆಗೊಳಿಸಿದ ಮಾಹಿತಿಯಲ್ಲಿ ತಿಳಿಸಿದೆ.

ಒಟ್ಟು 21,177 ಸಕ್ರಿಯ ಕೋವಿಡ್ ಪ್ರಕರಣಗಳ ಪೈಕಿ ಕಳೆದ 24 ಗಂಟೆಯಲ್ಲಿ 1,668 ಸಕ್ರಿಯ ಪ್ರಕರಣಗಳು ಸೇರ್ಪಡೆಗೊಂಡಿವೆ.

ಓದಿ...

ಒಬ್ಬರ ಅನಾರೋಗ್ಯವನ್ನು ಹಿಯಾಳಿಸುವ ವಿಕೃತಿ ಇರುವುದು ಬಿಜೆಪಿಗೆ ಮಾತ್ರ: ಕಾಂಗ್ರೆಸ್

ಜೂನ್ 8ರಂದು ಇ.ಡಿ. ಮುಂದೆ ಸೋನಿಯಾ ಹಾಜರಾಗಲಿದ್ದಾರೆ: ಸುರ್ಜೆವಾಲಾ

ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ, ರಾಹುಲ್ ಗಾಂಧಿಗೆ ಇ.ಡಿ ಸಮನ್ಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.