ಚಂಡೀಗಡ: ಕಾಂಗ್ರೆಸ್ ಮುಖಂಡ, ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ವಿಪಕ್ಷಗಳ ನಾಯಕರು ಹರಿಹಾಯ್ದಿದ್ದಾರೆ.

ಈ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, ‘ಗಾಯಕ ಸಿದ್ದು ಮೂಸೆವಾಲಾ ಅವರ ಕೊಲೆಯು ರಾಜಕೀಯ ಹತ್ಯೆ’ ಎಂದು ತಿಳಿಸಿದ್ದಾರೆ.

‘ಪಂಜಾಬ್‌ನಲ್ಲಿ ದಿನ ನಿತ್ಯ ಕೊಲೆಗಳು ನಡೆಯುತ್ತಿವೆ. ಪೊಲೀಸರು ಹತಾಶರಾಗಿದ್ದಾರೆ ಮತ್ತು ಅವರಿಗೆ ಯಾವುದೇ ನಿರ್ದೇಶನವಿಲ್ಲ. ಸಿದ್ದು ಮೂಸೆವಾಲಾ ಕೊಲೆರಾಜಕೀಯ ಹತ್ಯೆಯಾಗಿದೆ. ಸಿಎಂ ಭಗವಂತ್ ಮಾನ್ ರಾಜೀನಾಮೆ ನೀಡಲಿ. ಅದಕ್ಕೆ ಅವರೇ ಜವಾಬ್ದಾರರು’ ಎಂದು ಪಂಜಾಬ್ ವಿರೋಧ ಪಕ್ಷದ ನಾಯಕರೂ ಆಗಿರುವ ಬಾಜ್ವಾ ಒತ್ತಾಯಿಸಿದ್ದಾರೆ.

ಇದನ್ನೂ ಓದಿ-ಪಂಜಾಬಿ ಗಾಯಕ ಸಿಧು ಹತ್ಯೆ: ಹೊಣೆ ಹೊತ್ತ ಕೆನಡಾ ಮೂಲದ ಗ್ಯಾಂಗ್ಸ್ಟರ್

ಮಾನ್ಸಾ ಜಿಲ್ಲೆಯ ಜವಾಹರ್ಕೆ ಎಂಬ ಸ್ಥಳದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೂಸೆವಾಲಾ ಅವರು ಮೃತಪಟ್ಟಿದ್ದಾರೆ. ಮೂಸೆವಾಲಾ ಮೇಲೆ 30 ಕ್ಕೂ ಹೆಚ್ಚು ಸುತ್ತು ಗುಂಡು ಹಾರಿಸಲಾಗಿತ್ತು. ಮೂಸೆವಾಲಾ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಪಂಜಾಬ್ ಪೊಲೀಸರು ಶನಿವಾರವಷ್ಟೇ ಹಿಂಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.