ತಿರುಚಿ: ದಕ್ಷಿಣ ರೈಲ್ವೆಯ ಸಹಭಾಗಿತ್ವದಲ್ಲಿ ಎಲೆಕ್ಟ್ರಾನಿಕ್ ಬೈಕ್‌ಗಳ ಬಾಡಿಗೆ ಸೇವಾ ಕೇಂದ್ರವನ್ನು ಇಲ್ಲಿನ ರೈಲು ನಿಲ್ದಾಣದಲ್ಲಿ ಆರಂಭಿಸಲಾಗಿದೆ.

ಬೆಳಗ್ಗೆ 9ರಿಂದ ರಾತ್ರಿ 9ರ ವರೆಗೆ ಸೇವೆ ಲಭ್ಯವಿರಲಿದ್ದು, ಪ್ರತಿ ಗಂಟೆಗೆ ₹ 50 ಪಡೆದು ಬೈಕ್ ಬಾಡಿಗೆಗೆ ನೀಡಲಾಗುತ್ತಿದೆ. ಆದರೆ, ₹ 1,000 ಮುಂಗಡವಾಗಿ ಪಾವತಿಸಬೇಕು. ಜೊತೆಗೆ ಆಧಾರ್ ಮತ್ತು ಚಾಲನಾ ಪರವಾನಗಿಯನ್ನೂ ಸಲ್ಲಿಸಬೇಕು. ಇದು ತಿರುಚಿ ಜಿಲ್ಲೆಯಲ್ಲಿರುವ ಏಕೈಕ ಇ–ಬೈಕ್ ಬಾಡಿಗೆ ಸೇವಾ ಕೇಂದ್ರವಾಗಿದೆ.

ಸದ್ಯ ಪ್ರತಿ ಗಂಟೆ, ದಿನ ಮತ್ತು ವಾರದಆಧಾರದಲ್ಲಿ ಬೈಕ್‌ಗಳನ್ನು ನೀಡಲಾಗುತ್ತಿದೆ. ಗಂಟೆ ಆಧಾರದ ಬಾಡಿಗೆಗೆ ಹೆಚ್ಚಿನ ಬೇಡಿಕೆ ಇದೆ ಎಂದುರೈಲ್ವೆ ಇಲಾಖೆ ತಿಳಿಸಿದೆ.

ರೈಲು ನಿಲ್ದಾಣದ ಮೂಲಕ ನಿತ್ಯವೂ ಪ್ರಯಾಣಿಸುವ ಗಣೇಶ್ ಬಾಬು ಎನ್ನುವವರು, 'ಇದೊಂದು ಉತ್ತಮ ಕ್ರಮವಾಗಿದೆ. ಆದರೆ, ಸುರಕ್ಷತೆ ಉದ್ದೇಶದಿಂದ ಮುಂಗಡ ಹಣ ಪಾವತಿಸುವ ನಿಯಮವಿದೆ. ರೈಲ್ವೆಯ ಈ ಕ್ರಮದಿಂದಾಗಿ, ಜನರು ಕುತೂಹಲಕ್ಕೆ ಎಂಬಂತೆ ಒಂದೆರಡು ಬಾರಿ ಈ ಸೇವೆ ಬಳಸಿಕೊಂಡು ಬಳಿಕ ಹಿಂದೆ ಸರಿಯಲಿದ್ದಾರೆ. ಗ್ರಾಹಕರಿಂದ ಹಣ ಪಡೆಯುವ ಬದಲು ರೈಲ್ವೆಯೇ ಬೈಕ್‌ಗಳಿಗೆ ಸುರಕ್ಷತೆಯಖಾತರಿ ನೀಡಬಹುದು' ಎಂದು ಸಲಹೆ ನೀಡಿದ್ದಾರೆ.

ಮುಂದುವರಿದು, ಬೈಕ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ. ಅವುಗಳನ್ನು ಪತ್ತೆಹಚ್ಚಬಹುದು. ಹೀಗಾಗಿ, ಮುಂಗಡ ಹಣದ ಹೊರೆ ಹೇರುವ ಅಗತ್ಯವಿಲ್ಲ. ಕುತೂಹಲಕಾರಿ ಸಂಗತಿ ಎಂದರೆ, ಈ ಸೇವೆ ರೈಲು ಪ್ರಯಾಣಿಕರಲ್ಲದವರಿಗೂ ಲಭ್ಯವಾಗುವಂತಾಗಬೇಕು. ರೈಲು ಪ್ರಯಾಣಿಕರಿಗೆ ಈ ಸೇವೆಯ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇ–ಬೈಕ್‌ಗಳನ್ನು ಒಂದು ಬಾರಿ ಚಾರ್ಜ್ ಮಾಡಿದರೆ 130 ಕಿಮೀ ವರೆಗೂ ಪ್ರಯಾಣಿಸಹುದಾಗಿದೆ. ಜಿಲ್ಲೆಯಿಂದ ಹೊರಭಾಗದಲ್ಲಿ ಈ ಬೈಕ್‌ಗಳನ್ನು ಚಾಲನೆ ಮಾಡಲಾಗದು. ಒಂದುವೇಳೆ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ, ಸಿಬ್ಬಂದಿಯೇ ಸ್ಥಳಕ್ಕೆ ಆಗಮಿಸಿ, ಗ್ರಾಹಕರು ತೆರಳಬೇಕಿದ್ದ ಪ್ರದೇಶಕ್ಕೆ ಬಿಟ್ಟುಕೊಡಲಿದ್ದಾರೆಎಂದು ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.