ನವದೆಹಲಿ: ಕೇಂದ್ರದ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಅವರು ಬುಧವಾರ ಕೆಂಪುಕೋಟೆಗೆ ಭೇಟಿ ನೀಡಿ, ರೈತರ ಮುತ್ತಿಗೆ ವೇಳೆಯಲ್ಲಿ ಉಂಟಾದ ಹಾನಿಯ ಬಗ್ಗೆ ಮಾಹಿತಿ ಕಲೆ ಹಾಕಿದರು.

ಈ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು,‘ ಈ ಘಟನೆ ಬಗ್ಗೆ ಏನೂ ಹೇಳಲೂ ಇಷ್ಟವಿಲ್ಲ. ನಾನು ಘಟನೆ ಸಂಬಂಧ ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ಧೇನೆ’ ಎಂದು ಹೇಳಿದರು.

ಇದನ್ನೂ ಓದಿ..Explainer:ದೆಹಲಿಯಲ್ಲಿ ಹಿಂಸೆಗೆ ತಿರುಗಿದ 60 ದಿನಗಳ ಶಾಂತಿಯುತ ರೈತ ಹೋರಾಟ

ಪ್ರಹ್ಲಾದ್ ಪಟೇಲ್ ಅವರ ಜತೆ ಸಂಸ್ಕೃತ ಸಚಿವಾಲಯದ ಕಾರ್ಯದರ್ಶಿ ಮತ್ತುಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆಯ (ಎಎಸ್ಐ) ಅಧಿಕಾರಿಗಳು ಕೆಂಪುಕೋಟೆಗೆ ಭೇಟಿ ನೀಡಿದ್ದರು. ಈ ವೇಳೆ ಕೆಂಪು ಕೋಟೆಯ ಮೆಟಲ್ ಡಿಟೆಕ್ಟರ್ ಗೇಟ್ ಮತ್ತು ಟಿಕೆಟ್ ಕೌಂಟರ್ ಹಾನಿಗೊಳಗಾದ್ದನ್ನು ಗಮನಿಸಿದರು. ಅಲ್ಲದೆ ಆವರಣದಲ್ಲಿ ಗಾಜಿನ ಚೂರುಗಳು ಕೂಡ ಇದ್ದವು ಎಂದು ಮೂಲಗಳು ಹೇಳಿವೆ.

ಈ ಹಿಂದೆ ಪ್ರಹ್ಲಾದ್ ಪಟೇಲ್ ಅವರು ಪ್ರತಿಭಟನನಿರತ ರೈತರ ನಡೆಗೆ ಖಂಡನೆ ವ್ಯಕ್ತಪಡಿಸಿದ್ದರು. ‘ಕೆಂಪುಕೋಟೆಯ ಮೇಲಿನ ಮುತ್ತಿಗೆಯು ದೇಶದ ಪ್ರಜಾಪ್ರಭುತ್ವದ ಘನತೆಗೆ ಧಕ್ಕೆ ತಂದಿದೆ’ ಎಂದು ಅವರು ಹೇಳಿದ್ದರು.

ಓದಿ:ಕೆಂಪುಕೋಟೆಯಲ್ಲಿ ನಡೆದ ಘಟನೆಯಿಂದ ತಲೆತಗ್ಗಿಸುವಂತಾಗಿದೆ: ಯೋಗೇಂದ್ರ ಯಾದವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.