ಕಲಬುರ್ಗಿ: ಕೊರೊನಾ ಲಸಿಕೆಯ ದಾಸ್ತಾನು ಕಲಬುರ್ಗಿ, ಬೀದರ್, ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಕಡಿಮೆಯಾಗುತ್ತಿದೆ.

ಕಲಬುರ್ಗಿ ಜಿಲ್ಲೆಯಲ್ಲಿ 6,156 ಡೋಸ್ ಮಾತ್ರ ಸಂಗ್ರಹ ಇದೆ. ‘1.97 ಲಕ್ಷ ಜನರಿಗೆ ಲಸಿಕೆ ಹಾಕುವ ಗುರಿ ಇದ್ದು, 76,610 ಡೋಸ್ ಲಸಿಕೆ ತರಿಸಿಕೊಳ್ಳಲಾಗಿತ್ತು. ಅದರಲ್ಲಿ ಕೋವಿಶೀಲ್ಡ್ 65,410 ಡೋಸ್, ಕೋವ್ಯಾಕ್ಸಿನ್ 11,200 ಡೋಸ್ನಷ್ಟು ಇತ್ತು. 64 ಸಾವಿರ ಡೋಸ್ ಬಳಕೆಯಾಗಿದ್ದು, ಅಗತ್ಯವಿರುವಷ್ಟು ದಾಸ್ತಾನು ಕಳುಹಿಸಿಕೊಡಲು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ’ ಎಂದು ಕಲಬುರ್ಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಜಶೇಖರ ಮಾಲಿ ತಿಳಿಸಿದರು.

ಓದಿ:45 ವರ್ಷ ದಾಟಿದ ಎಲ್ಲರಿಗೂ ಏ.1ರಿಂದ ಲಸಿಕೆ: ಸಚಿವಪ್ರಕಾಶ್ ಜಾವಡೇಕರ್

‘ಯಾದಗಿರಿ ಜಿಲ್ಲೆಗೆ 20 ಸಾವಿರ ಡೋಸ್ ಪೂರೈಸುವಂತೆ ಬೇಡಿಕೆ ಸಲ್ಲಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದುಮತಿ ಪಾಟೀಲ ಹೇಳಿದರು.

‘ರಾಯಚೂರು ಜಿಲ್ಲೆಯಲ್ಲಿ ಈ ವರೆಗೆ 65 ಸಾವಿರ ಜನರಿಗೆ ಲಸಿಕೆ ನೀಡಲಾಗಿದೆ. ಚಿತ್ರದುರ್ಗ ಮತ್ತು ನೆರೆಯ ಜಿಲ್ಲೆಗಳಿಂದ ಲಸಿಕೆ ತರಿಸಿಕೊಂಡು ಕೊರತೆ ನೀಗಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಿಂದ ಲಸಿಕೆ ಹಂಚಿಕೆಯಾಗಲಿದ್ದು, ಸಮಸ್ಯೆ ಇಲ್ಲ’ ಎಂದುಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಪ್ರತಿಕ್ರಿಯಿಸಿದರು.

‘ಕೋವಿಶೀಲ್ಡ್ ಪೂರೈಕೆಯಲ್ಲಿ ಕೊರತೆ ಇದೆ. ಜಿಲ್ಲೆಗೆ 73 ಸಾವಿರ ಡೋಸ್ ಲಸಿಕೆ ಬಂದಿದ್ದು, 65 ಸಾವಿರ ಜನರಿಗೆ ಕೊಡಲಾಗಿದೆ. ಕೋವ್ಯಾಕ್ಸಿನ್ 11,200 ಡೋಸ್ ಬಂದಿದೆ. ನಿತ್ಯ ಐದರಿಂದ ಆರು ಸಾವಿರ ಜನರಿಗೆ ಲಸಿಕೆ ಕೊಡುತ್ತಿದ್ದೇವೆ. ಎರಡು ದಿನಕ್ಕೆ ಆಗುವಷ್ಟು ಮಾತ್ರ ಲಸಿಕೆ ಇದೆ’ ಎಂದು ಬೀದರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಮಾಹಿತಿ ನೀಡಿದರು.

ಓದಿ:ಕೋವಿಡ್ ಲಸಿಕೆ: ವಿತರಣೆಗೆ ಸಮಸ್ಯೆ ಇಲ್ಲ ಎಂದ ಆರೋಗ್ಯ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.