ಬೆಂಗಳೂರು: ರಾಜ್ಯದಾದ್ಯಂತ ವಾರಾಂತ್ಯದ ಎರಡು ದಿನ ಕರ್ಫ್ಯೂ ಘೋಷಿಸಿದ್ದರೂ, ಅನಿವಾರ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಕಾರು, ಮತ್ತಿತರ ಖಾಸಗಿ ವಾಹನಗಳಲ್ಲಿ ಅಂತರ್ ಜಿಲ್ಲಾ ಪ್ರಯಾಣ ಮಾಡಬಹುದಾಗಿದೆ.

ಬಸ್, ರೈಲು ಪ್ರಯಾಣಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಬಸ್, ರೈಲು, ವಿಮಾನಗಳಲ್ಲಿ ಓಡಾಡುವವರು ಆಯಾ ನಗರಗಳಲ್ಲಿ ತಮ್ಮ ಪ್ರಯಾಣದ ಟಿಕೆಟ್ಗಳನ್ನು ತೋರಿಸಿ ನಿಗದಿತ ಸ್ಥಳಕ್ಕೆ ಹೋಗಬಹುದು. ಕಾರು ಮತ್ತು ಇತರ ಖಾಸಗಿ ವಾಹನಗಳಲ್ಲಿ ಹೋಗುವವರು ಪ್ರಯಾಣದ ಉದ್ದೇಶಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ತೋರಿಸಬೇಕು ಹಾಗೂ ಕಾರಣಗಳನ್ನು ಗಡಿ ಭಾಗದಲ್ಲಿ ಪೊಲೀಸರಿಗೆ ವಿವರಿಸಬೇಕಾಗುತ್ತದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರಿನಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳು ದಾಖಲಾಗುತ್ತಿದ್ದು, ವಾರಾಂತ್ಯಕ್ಕೆ ಇತರ ಜಿಲ್ಲೆಗಳು ಮತ್ತು ಪ್ರವಾಸಿ ಸ್ಥಳಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹೋಗಲು ಅವಕಾಶ ನೀಡಿದರೆ, ಎಲ್ಲೆಡೆ ಕೋವಿಡ್ ಹರಡುವ ಅಪಾಯವಿದೆ. ಇದನ್ನು ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಆದರೆ, ಅನಿವಾರ್ಯ ಕಾರಣಗಳಿಗೆ ಪ್ರಯಾಣಿಸುವವರಿಗೆ ಅಡ್ಡಿ ಇಲ್ಲ ಎಂದು ಮೂಲಗಳು ತಿಳಿಸಿವೆ. ಖಾಸಗಿ ವಾಹನಗಳಲ್ಲಿ ಪ್ರಯಾಣಿಸುವವರು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದಕ್ಕಾಗಿ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಮೂಲಗಳು ಹೇಳಿವೆ.

ಇದನ್ನೂ ಓದಿ:ವಾರಾಂತ್ಯ ಕರ್ಫ್ಯೂ: ಬಸ್ ಸಂಚಾರಕ್ಕೆ ತೊಂದರೆ ಇಲ್ಲ, ವಾರಾಂತ್ಯವೂ ಇರಲಿದೆ ಮೆಟ್ರೊ

ಬೆಂಗಳೂರಿನಲ್ಲಿ ರೈಲು ಮತ್ತು ವಿಮಾನ ಸಂಚಾರಕ್ಕೆ ಅವಕಾಶ ಇದ್ದು, ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು, ಟ್ಯಾಕ್ಸಿಗಳ ಮೂಲಕ ಮನೆಗಳಿಂದ ವಿಮಾನ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಗೆ ತೆರಳಬಹುದು. ಪ್ರಯಾಣ ಮಾಡುವವರು ಅಗತ್ಯ ದಾಖಲೆಗಳು ಅಥವಾ ಟಿಕೆಟ್ ತೋರಿಸಬೇಕು.

ಯಾವುದಕ್ಕೆಲ್ಲ ಅವಕಾಶ?

l ಎಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಚೇರಿಗಳು, ಸರ್ಕಾರದ ಅಧೀನ ಸ್ವಾಯತ್ತ ಸಂಸ್ಥೆಗಳು, ನಿಗಮಗಳು, ಕೋವಿಡ್–19 ಮತ್ತು ಅಗತ್ಯ ಸೇವೆಗಳನ್ನು ನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿ ಓಡಾಟಕ್ಕೆ ಯಾವುದೇ ಅಡ್ಡಿ ಇಲ್ಲ.

l ಎಲ್ಲ ಸಾರ್ವಜನಿಕ ಉದ್ಯಾನಗಳ ಬಾಗಿಲು ಬಂದ್

l ಎಲ್ಲ ರೀತಿಯ ಉದ್ಯಮಗಳು ಮತ್ತು ಐಟಿ ಉದ್ಯಮಗಳಿಗೆ
ಕರ್ಫ್ಯೂವಿನಿಂದ ವಿನಾಯ್ತಿ. ಎಲ್ಲ ಉದ್ಯೋಗಿಗಳ ಓಡಾಟಕ್ಕೆ ಅವಕಾಶವಿದೆ. ಸಿಬ್ಬಂದಿ ಕೆಲಸ ಮಾಡುವ ಸಂಸ್ಥೆಗಳ ಗುರುತಿನ ಚೀಟಿ ಹೊಂದಿರಬೇಕು.

l ರೋಗಿಗಳು ಮತ್ತು ಅವರನ್ನು ನೋಡಿಕೊಳ್ಳುವವರು ತುರ್ತುಸಂದರ್ಭದಲ್ಲಿ ಓಡಾಟಕ್ಕೆ ಅವಕಾಶವಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಹೋಗುವವರಿಗೆ ಅಡ್ಡಿ ಇಲ್ಲ.

l ಆಹಾರ, ದಿನಸಿ, ಹಣ್ಣು–ತರಕಾರಿ, ಮೀನು, ಮಾಂಸ, ಡೇರಿ, ಹಾಲಿನ ಬೂತ್ ಮತ್ತು ಪ್ರಾಣಿಗಳ ಆಹಾರಗಳ ಮಾರಾಟ ಮಳಿಗೆಗಳು ತೆರೆಯಲು ಅವಕಾಶವಿದೆ. ನ್ಯಾಯಬೆಲೆ ಅಂಗಡಿ, ಬೀದಿ ವ್ಯಾಪಾರಿಗಳಿಗೂ ಅವಕಾಶವಿದೆ. ಮನೆಗಳಿಗೆ ವಿವಿಧ ಪದಾರ್ಥ ಮತ್ತು ವಸ್ತುಗಳನ್ನು ತಂದುಕೊಡುವುದಕ್ಕೆ ಅವಕಾಶವಿದೆ.

l ಹೊಟೇಲ್ ಮತ್ತು ರೆಸ್ಟೋರೆಂಟ್ಗಳಿಂದ ಆಹಾರವನ್ನು ಒಯ್ಯಬಹುದು. ಕುಳಿತು ತಿನ್ನಲು ಅವಕಾಶ ಇರುವುದಿಲ್ಲ

ಇದನ್ನೂ ಓದಿ:ವಾರಾಂತ್ಯ ಕರ್ಫ್ಯೂ: ರಜೆ ಇದ್ದವರಿಗೆ ಆನ್ಲೈನ್ ತರಗತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.