ಬೀದರ್: ‘ಎಸಿಪಿ ಒಬ್ಬರ ವರ್ಗಾವಣೆ ಮಾಡಿಸಲು ಸ್ಯಾಂಟ್ರೊ ರವಿ ಮಧ್ಯಸ್ಥಿಕೆಯಲ್ಲಿ ₹ 15 ಲಕ್ಷ ಹಣಕ್ಕೆ ವ್ಯವಹಾರ ಕುದುರಿಸಲಾಗಿದೆ. ಗೃಹ ಸಚಿವರ ಮನೆಯಲ್ಲೇ ಹಣ ಎಣಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ತನಿಖೆ ನಡೆಸಲಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.

ಹುಮನಾಬಾದ್ ತಾಲ್ಲೂಕಿನ ರಾಜೇಶ್ವರ ಗ್ರಾಮದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಸ್ಯಾಂಟ್ರೊ ರವಿಯನ್ನು ಹಿಡಿಯುವುದು ಸರ್ಕಾರದ ಕೆಲಸ. ಎಲ್ಲಾ ನಾವೇ ಹೇಳುವುದಾದರೆ ಗೃಹ ಸಚಿವರು ಏತಕ್ಕೆ ಇರಬೇಕು’ ಎಂದರು.

‘ದಾಖಲೆ ಇದ್ದರೆ ಕೊಡಿ ಎನ್ನುತ್ತಿದ್ದಾರೆ. ಹೀಗೆ ಹೇಳುವ ಮೂಲಕ ಪ್ರಕರಣವನ್ನು ಹಳ್ಳ ಹಿಡಿಸಲು ಯತ್ನಿಸುತ್ತಿದ್ದಾರೆ. ದಲ್ಲಾಳಿಗಳೇ ಸರ್ಕಾರದ ಆಡಳಿತ ನಡೆಸುವ ಸ್ಥಿತಿಯನ್ನು ಸಿ.ಎಂ ಸೃಷ್ಟಿ ಮಾಡಿಕೊಂಡಿದ್ದಾರೆ. ಕುಮಾರಕೃಪ ಹೊಸ ಕಟ್ಟಡದಲ್ಲಿ ಏನೆಲ್ಲಾ ನಡೆಯಿತು? ಬೆಂಕಿ ಇಲ್ಲದೆ ಹೊಗೆ ಬರುತ್ತಾ? ನಿಮ್ಮ ತಂದೆಯವರು ಹೇಳಿಕೊಟ್ಟಿದ್ದು ಇದೇನಾ? ಎಂದು ಮುಖ್ಯಮಂತ್ರಿ ಅವರನ್ನು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.