ಮುನ್ನ, ಪಿಂಕಿ, ಜಾಕಿ, ಚನ್ನಿ, ನಾಕಿ ಏನು ಇವು ಹೆಸರುಗಳು ಅಂತೀರಾ! ಇವು ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿರುವ ಕೊಡತಿಹಳ್ಳಿಯ ಸುಂದರಂ ರೆಡ್ಡಿಯವರ ಪುನರ್ವಸತಿ ಕೇಂದ್ರದಲ್ಲಿರುವ ಬೀದಿ ನಾಯಿಗಳ ಆಶ್ರಯ ತಾಣ.

ಸುಂದರಂ ಅವರ ಪತ್ನಿ ಶಾಂತಾ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಮೂಕ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಸುಂದರಂರೆಡ್ಡಿ ಅವರಿಗೆ ಮೂಕ ಪ್ರಾಣಿಗಳೆಂದರೆ ಅಲರ್ಜಿ. ಸುಂದರಂರವರಿಗೆ ಗೊತ್ತಾಗದ ಹಾಗೆ ನಾಯಿಗಳಿಗೆ ಆಹಾರವನ್ನು ನೀಡುತ್ತಿದ್ದ ಶಾಂತಾ ಅವರು ಒಂದು ದಿನ ನಾಯಿಗಳಿಗೆ ಆಹಾರ ನೀಡುವಾಗ ಪತಿ ಕೈಲಿ ಸಿಕ್ಕಿಬಿದ್ದರು. ಇದರಿಂದ ಜಗಳವಾಗಿ ಗಂಡನನ್ನೇ ತೊರೆಯುವ ನಿರ್ಧಾರಕ್ಕೆ ಬಂದರು ಶಾಂತಾ. ಆದರೆ ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ಸುಂದರಂಗೆ ಹೆಂಡತಿಯನ್ನು ತೊರೆಯುವುದು ಸಾಧ್ಯವಾಗಲಿಲ್ಲ.

ಕೇಂದ್ರ ಆರಂಭ
ಶಾಂತಾರವರ ಇಚ್ಛೆಯಂತೆ ಮಾರುತಿ ಚಾರಿಟಬಲ್ ಟ್ರಸ್ಟ್ ಎಂಬ ಹೆಸರಿನಲ್ಲಿ ಬೀದಿನಾಯಿ ಸಲಹುವ ಕೇಂದ್ರವನ್ನು ಆರಂಭಿಸಿ ಬಿಟ್ಟರು ಸುಂದರಂರೆಡ್ಡಿ.
ಸಮಾಜ ಸೇವೆಗೆ ಹಲವು ಮುಖಗಳಿವೆ. ಸುಂದರಂ ತಮ್ಮ ಹೆಂಡತಿಯ ಪ್ರೀತಿಗೆ ಸಮಾಜ ಸೇವೆಯತ್ತ ಮುಖ ಮಾಡಿದವರು. ಈಗ ಸುಮಾರು ೧೫೦ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಸಲಹುವುದರ ಮೂಲಕ ಈ ದಂಪತಿ ಪ್ರಾಣಿ ಪ್ರೀತಿ ಮೆರೆದಿದ್ದಾರೆ. ನಾಯಿಗಳನ್ನು ಮಕ್ಕಳಂತೆ ಸಲಹುತ್ತಿದ್ದಾರೆ.

ಸುಂದರಂರೆಡ್ಡಿಯವರಿಗೆ ಈಗ ೭೯ ವರ್ಷ. ಅವರ ಬೀದಿನಾಯಿಗಳ ಸಲಹುವ ಕಾಯಕಕ್ಕೆ ಮೂವತ್ತು ವರ್ಷ. ಆದರೆ ಈಗ ತಾವು ಸಲಹಿದ ಬೀದಿ ನಾಯಿಗಳು ತೋರುವ ನಿಷ್ಠೆ, ಪ್ರೀತಿಯಿಂದ ಸುಂದರಂ ಕೂಡ ಬದಲಾದರು. ದಿನ ಕಳೆದಂತೆ ಬೀದಿ ನಾಯಿಗಳನ್ನು ಸಲಹುದರಲ್ಲಿ ಖುಷಿ ಕಂಡರು.

ಬೀದಿ ನಾಯಿಗಳನ್ನು ದೇವರೆಂದು ಭಾವಿಸಿ ಆರಾಧಿಸುವ ಈ ದಂಪತಿ ಬಳಿ ಕುಂಟು, ಕಿವುಡು, ಕಿವಿ ಕತ್ತರಿಸಿದ, ರೋಗಗ್ರಸ್ತ ಹೀಗೆ ಹಲವು ಬಗೆಯ ನಾಯಿಗಳಿವೆ. ಅವುಗಳ ಆರೈಕೆಗೆ ಸಿಬ್ಬಂದಿಯಿದ್ದಾರೆ, ವೈದ್ಯರಿದ್ದಾರೆ.

ಕಾಯಿಲೆಗಳಿಂದ ನರಳುತ್ತಿರುವ ನಾಯಿಗಳಿಗೆ ಇವರೇ ಆರೈಕೆ ಮಾಡುತ್ತಾರೆ. ಯಾವುದೇ ಬೀದಿ ನಾಯಿ ಅಪಘಾತಕ್ಕೀಡಾದರೆ ಅಥವಾ ಆಹಾರವಿಲ್ಲದೆ ಕೆಂಗೆಟ್ಟರೆ ಇವರೇ ಪೋಷಕರಾಗುತ್ತಾರೆ.

ಇವರ ನಾಯಿಗಳ ಪುನರ್ವಸತಿ ಕೇಂದ್ರ ೧೬೦೦ ಅಡಿ ವಿಸ್ತೀರ್ಣವಿದೆ. ಎಲ್ಲಾ ನಾಯಿಗಳಿಗೂ ಪ್ರತಿದಿನ ಪೌಷ್ಠಿಕ ಆಹಾರ ನೀಡಲಾಗುತ್ತದೆ. ಕೆಲ ಸ್ವಯಂ ಸೇವಕರು ಆಗಮಿಸಿ ನಾಯಿಗಳಿಗೆ ಸ್ನಾನ ಮಾಡಿಸುತ್ತಾರೆ. ಕೆಲವರು ಹಣಕಾಸಿನ ನೆರವು ನೀಡುತ್ತಾರೆ. ವೃದ್ಧಾಪ್ಯಕ್ಕೆ ಮೀಸಲಿಟ್ಟ ಹಣದಲ್ಲಿ ಒಂದಿಷ್ಟನ್ನು ಶ್ವಾನ ಸೇವೆಗೆ ಮೀಸಲಿಟ್ಟಿದ್ದೇವೆ ಎನ್ನುತ್ತಾರೆ ಸುಂದರಂರೆಡ್ಡಿ. ಇವರ ಸಂಪರ್ಕಕ್ಕೆ ೯೪೮೦೨೧೨೩೩೦

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.