ಪ್ರವಾಸೋದ್ಯಮ ಕ್ಷೇತ್ರದ ಮುಂಚೂಣಿಯ ಕಂಪನಿ ಥಾಮಸ್ ಕುಕ್ (ಇಂಡಿಯಾ) ಲಿಮಿಟೆಡ್ ಮಾಸಿಕ ಕಂತು ಪಾವತಿಯ (ಈಕ್ವೆಟೆಡ್ ಮಂತ್ ಇನ್ಸ್ಟಾಲ್ಮೆಂಟ್ –ಇಎಂಐ) ನವೀನ ಮಾದರಿಯ ರಜಾ ಪ್ರವಾಸ ಸೌಲಭ್ಯವನ್ನು ಪರಿಚಯಿಸಿದೆ. ಅದಕ್ಕೆ ‘ಹಾಲಿಡೇ ಬಾಸ್ಕೆಟ್’ ಅಥವಾ ‘ರಜಾ ಬಾಸ್ಕೆಟ್’ ಎಂದು ಹೆಸರಿಸಿದೆ. ವಿಶೇಷವಾಗಿ ಯುವ ಪ್ರವಾಸಿಗರಿಗೆ ಹಾಲಿಡೇ ಬಾಸ್ಕೆಟ್ ನೆರವಾಗಲಿದೆ ಎಂದು ಸಂಸ್ಥೆ ಹೇಳಿದೆ.

ಥಾಮಸ್ ಕುಕ್ ನಡೆಸಿದ ಸಮೀಕ್ಷೆಯ ಪ್ರಕಾರ 25 ರಿಂದ 35 ವರ್ಷದ ಜನರಲ್ಲಿ ಪ್ರವಾಸದ ಬೇಡಿಕೆ ಶೇ 30 ರಷ್ಟು ಹೆಚ್ಚುತ್ತಿದೆ. ಪ್ರವಾಸ ಉದ್ದೇಶಕ್ಕಾಗಿಯೇ ವೈಯಕ್ತಿಕ ಸಾಲದ ಬೇಡಿಕೆಯು ಶೇ 55 ರಷ್ಟು ಹೆಚ್ಚುತ್ತಿದೆ. ಹೀಗೆ ಸಾಲ ಪಡೆಯುವವರಲ್ಲಿ ಶೇ 85 ರಷ್ಟು ಜನರು ಯುವಸಮೂಹದವರು. ಪ್ರವಾಸದ ಮಾಹಿತಿ ಕೋರಿ ಕರೆ ಮಾಡುವವರಲ್ಲಿ ಸಿಂಹಪಾಲು ಮಂದಿ ಯುವ ಜನರು ಹಾಗೂ ಮಧ್ಯಮ ವರ್ಗಕ್ಕೆ ಸೇರಿದವರು.

ಈ ವಿಚಾರಣೆಗಳನ್ನು ಆಧರಿಸಿದರೆ ಒಂದು ಅಂತಾರಾಷ್ಟ್ರೀಯ ಮಟ್ಟದ ದೀರ್ಘ ಪ್ರಯಾಣ ಮತ್ತು ಒಂದು ದೇಶೀಯ ಸಣ್ಣ ರಜಾ ಸಮಯದಂತೆ ವರ್ಷದಲ್ಲಿ ಎರಡು ರಜಾ ಸಮಯವನ್ನು ಕಳೆಯುವ ಪ್ರವೃತ್ತಿ ಹೆಚ್ಚುತ್ತಿದೆ. ಮೊದಲ ಬಾರಿ ಪ್ರಯಾಣಿಸುವವರ ದೇಶೀಯ ಸ್ಥಳಗಳೆಂದರೆ ಅಂಡಮಾನ್, ಕೇರಳ, ಲಡಾಕ್, ಗೋವಾ, ಹಿಮಾಚಲ ಮತ್ತು ಈಶಾನ್ಯ ರಾಜ್ಯಗಳಾದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭೂತಾನ್, ಥಾಯ್ಲೆಂಡ್, ಸಿಂಗಾಪುರ, ಮಾರಿಷಸ್, ದುಬೈ, ಬಾಲಿ, ಫುಕೆಟ್ ಮತ್ತು ಶ್ರೀಲಂಕಾ ಆದ್ಯತೆಯ ತಾಣಗಳಾಗಿವೆ.

ಈ ಒಳನೋಟಗಳ ಆಧಾರದ ಮೇಲೆಯೇ ಥಾಮಸ್ ಕುಕ್ ಇಂಡಿಯಾ ವಿಶೇಷ ಉತ್ಪನ್ನವಾದ ಹಾಲಿಡೆ ಬಾಸ್ಕೆಟ್ ಪರಿಚಯಿಸಿದೆ. ಇದರಲ್ಲಿ ಎರಡು ಮಾದರಿಗಳನ್ನೂ ಕಂಪೆನಿ ನೀಡಿದೆ. ಒಂದನೆಯದರಲ್ಲಿ ಎರಡು ವರ್ಷ ಎರಡು ಅಂತಾರಾಷ್ಟ್ರೀಯ ಮತ್ತು ಎರಡು ದೇಶೀಯ ಪ್ರವಾಸದ ಮೂಲಕ ರಜಾದಿನಗಳನ್ನು ಆನಂದಿಸುವ ಅವಕಾಶ ಇರಲಿದೆ. ಇನ್ನೊಂದು ವರ್ಗದಲ್ಲಿ ಒಂದು ವರ್ಷದಲ್ಲಿ ಒಂದು ಅಂತಾರಾಷ್ಟ್ರೀಯ ಮತ್ತು ಒಂದು ದೇಶೀಯ ಪ್ರವಾಸ ಹೀಗೆ ಎರಡು ಹಾಲಿಡೆಗಳು ಇರಲಿವೆ.

ಪ್ರವಾಸಿಗರು ಪ್ರವಾಸದ ಶೇ 20ರಷ್ಟು ಹೆಚ್ಚುವರಿ ಪ್ಯಾಕೇಜ್ ವೆಚ್ಚವನ್ನು ಭರಿಸಿ ಉಳಿದ ಮೊತ್ತವನ್ನು ಬಜಾಜ್ ಫೈನಾನ್ಸ್ ಲಿಮಿಟೆಡ್, ಟಾಟಾ ಕ್ಯಾಪಿಟಲ್ ಲಿಮಿಟೆಡ್ ಮತ್ತು ಸ್ಯಾನ್ಕ್ಯಾಶ್ ಪ್ರೈವೇಟ್ ಲಿಮಿಟೆಡ್ ಮೂಲಕ ನೋ ಕಾಸ್ಟ್ ಇಎಂಐನಲ್ಲಿ ಪಾವತಿ ಮಾಡಬಹುದು.

ವಿವರಗಳಿಗೆ https://holidaybasket.thomascook.in/ವೆಬ್ಸೈಟ್ ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.