ಪಿಸುಮಾತಿನ ಮೊಗಸಾಲೆಯಂತಹ ವಿಸ್ಮಯದ ಗ್ಯಾಲರಿ ಹೊಂದಿರುವ ವಿಜಯಪುರದ ಐತಿಹಾಸಿಕ ಗೋಳಗುಮ್ಮಟವನ್ನು ಇನ್ನು ಮುಂದೆ ರಾತ್ರಿ ವೇಳೆಯೂ ಕಣ್ತುಂಬಿಕೊಳ್ಳಬಹುದು.

ತಂಪನೆಯ ಹವೆಯಲ್ಲಿ, ಬಣ್ಣ ಬಣ್ಣದ ಬೆಳಕಿನಲ್ಲಿ ಗುಮ್ಮಟವನ್ನು ನೋಡಬಹುದು.

ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಅವರು ಜುಲೈ 29ರಂದು ಈ ವಿಷಯ ಪ್ರಕಟಿಸಿದ್ದಾರೆ. ಅದರ ಅನುಸಾರ, ಇನ್ನು ಮುಂದೆ ರಾತ್ರಿ 9 ಗಂಟೆಯವರೆಗೂ ಗುಮ್ಮಟವನ್ನು ವೀಕ್ಷಿಸಬಹುದಾಗಿದೆ.

ಇಲ್ಲಿಯವರೆಗೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಪ್ರವಾಸಿಗರಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು. ಈಗ ರಾತ್ರಿ 9ರ ವರೆಗೆ ಸಮಯ ವಿಸ್ತರಣೆ ಮಾಡಲು ಮುಂದಾಗಿರುವುದರಿಂದ ‘ಮೈಸೂರು ಅರಮನೆ’ಯಂತೆ ಗೋಳಗುಮ್ಮಟ ಕೂಡ ವಿದ್ಯುತ್ ದೀಪಾಲಂಕಾರದಲ್ಲಿ ಮತ್ತೆ ಕಂಗೊಳಿಸಬಹುದು.

2013ರಲ್ಲಿ ಇಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ 2015ರಲ್ಲಿ ನಡೆದ ನವರಸ ಉತ್ಸವದಲ್ಲಿ ಗೋಳಗುಮ್ಮಟಕ್ಕೆ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ನಂತರ ಪ್ರತಿ ಶನಿವಾರ ಮತ್ತು ಭಾನುವಾರ ದೀಪಾಲಂಕಾರ ಮುಂದುವರಿದಿತ್ತು. ಕಾರಣಾಂತರಗಳಿಂದ ಸದ್ಯ ಅದು ಸ್ಥಗಿತಗೊಂಡಿದೆ. ಗೋಳಗುಮ್ಮಟ ವೀಕ್ಷಣೆಗೆ ರಾತ್ರಿ 9 ಗಂಟೆಯವರೆಗೆ ಅವಕಾಶ ಕಲ್ಪಿಸಿದರೆ ವಿದ್ಯುತ್, ಕುಡಿಯುವ ನೀರಿನ ಸೌಲಭ್ಯ ಅಗತ್ಯವಾಗಿ ಬೇಕು. ಸ್ವಚ್ಛತಾ ಹಾಗೂ ಭದ್ರತಾ ಸಿಬ್ಬಂದಿ ಹೆಚ್ಚಿಸಬೇಕು. ಇವೆಲ್ಲವೂ ಸಾಕಾರಗೊಂಡಲ್ಲಿ ಪ್ರವಾಸಿಗರಿಗೆ ವಿದ್ಯುತ್ ದೀಪಾಲಂಕರದ ಬೆಳಕಿನಲ್ಲಿ ಗುಮ್ಮಟದ ಸೌಂದರ್ಯ ಮತ್ತೊಮ್ಮೆ ಕಣ್ತುಂಬಿಕೊಳ್ಳಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.