ಪ್ರವಾಸ ಎಂದಾಕ್ಷಣ ಸಾಮಾನ್ಯವಾಗಿ ಜನಪ್ರಿಯ ತಾಣಗಳೇ ಆಯ್ಕೆ ಪಟ್ಟಿಯಲ್ಲಿರುತ್ತವೆ. ಒಂದಷ್ಟು ಹುಡುಕಾಡಿದರೆ ಇವುಗಳ ಹೊರತಾದ ಸುಂದರ ತಾಣಗಳು ತಿಳಿಯುತ್ತವೆ.

ಇಂತಹ ತಾಣಗಳಲ್ಲಿ ಕೇಂದ್ರಾಡಳಿತ ಪ್ರದೇಶವಾದ ದಿಯು ಮತ್ತು ದಮನ್, ದಾದ್ರಾ ಮತ್ತು ನಗರ್ ಹವೇಲಿಯೂ(ಡಿಡಿಡಿಎನ್ಎಚ್) ಸೇರುತ್ತದೆ. ಈ ತಾಣಗಳಲ್ಲಿರುವ ಜೀವನಶೈಲಿ ಬುಡಕಟ್ಟು, ಭಾರತೀಯ ಹಾಗೂ ಐರೋಪ್ಯ ಸಂಸ್ಕೃತಿಯ ಮಿಶ್ರಣವಾಗಿದೆ. ಪುರಾತನ ಚರ್ಚ್ಗಳು, ಕೋಟೆಗಳು, ಅನಂತ ಅನುಭವ ಸೃಷ್ಟಿಸುವ ಸಮುದ್ರ ಜತೆಗೆ ಸ್ಥಳೀಯ ಸಂಸ್ಕೃತಿಯ ಪರಿಚಯ ಮಾಡಿಕೊಳ್ಳಬಹುದು. ಈ ಕೇಂದ್ರಾಡಳಿತ ಪ್ರದೇಶಗಳ ಪ್ರವಾಸಕ್ಕೆಂದೇ ವೆಬ್ಸೈಟ್ (https://www.tourismdddnh.in/)ಹೊಂದಿದ್ದು, ಪ್ರವಾಸಕ್ಕೆ ಸಲಹೆಗಳು, ಯೋಜನೆಗಳ ಜತೆಗೆ ಪ್ರವಾಸೋದ್ಯಮ ಕುರಿತ ಅನಿಸಿಕೆಗಳನ್ನು ಸಹ ಹಂಚಿಕೊಳ್ಳಲಾಗಿದೆ.

ಇಲ್ಲಿನ ಪ್ರಸಿದ್ಧ ತಾಣಗಳು, ಪ್ರಸಿದ್ಧ ತಿನಿಸುಗಳು ಹಾಗೂ ಹೋಟೆಲ್, ರೆಸಾರ್ಟ್ಗಳ ಮಾಹಿತಿಯನ್ನು ಪ್ರತ್ಯೇಕವಾಗಿ ನೀಡಲಾಗಿದೆ. ಪ್ರವಾಸಕ್ಕೆಂದು ಹೋದಾಗ ಯಾವ ತಾಣಗಳಿಗೆ ಹೇಗೆ ಭೇಟಿ ನೀಡುವುದು, ಆ ತಾಣಗಳ ವಿಶೇಷಣಗಳನ್ನು ತಿಳಿಯವುದು ಹೇಗೆಂಬ ಗೊಂದಲ ಮೂಡುತ್ತದೆ. ಇಲ್ಲಿ ಅಧಿಕೃತ ಮಾರ್ಗದರ್ಶಿಗಳು ಸುತ್ತಾಟಕ್ಕೆ ನೆರವಿಗೆ ಒದಗಲಿದ್ದಾರೆ. ಅಧಿಕೃತ ಮಾರ್ಗದರ್ಶಿಗಳ ವಿವರವನ್ನು ಸಹ ವೆಬ್ಸೈಟ್ನಲ್ಲಿ ನೀಡಿರುವುದು ವಿಶೇಷ.

ಇದನ್ನೂ ಓದಿ:ಪುದುಚೇರಿ ಅಚ್ಚರಿ..!

ನಾಯ್ದಾ ಗುಹೆಗಳು, ಪೋರ್ಚುಗೀಸರ ಕಾಲದ ಕೋಟೆಗಳು, ಸೇಂಟ್ ಥಾಮಸ್ ಚರ್ಚ್, ಬೊಮ್ ಜೀಸಸ್ ಚರ್ಚ್, ಗಂಗೇಶ್ವರ ಮಹಾದೇವ ದೇಗುಲ, ಐಎನ್ಎಸ್ ಖುಕ್ರಿ ಸ್ಮಾರಕ ಸೇರಿದಂತೆ ಹಲವು ತಾಣಗಳಿಗೆ ಭೇಟಿ ನೀಡಬಹುದು.

ಮಾಹಿತಿ: ರಾಧಿಕಾ ಎನ್. ಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.