ನಗರದ ಉದ್ಯಾನ ಮತ್ತು ಹಾದಿ, ಬೀದಿಗಳಲ್ಲಿ ಬಗೆ, ಬಗೆಯ ಹೂಗಳು ಅರಳಿ ನಿಂತಿವೆ. ಸೂರ್ಯನ ರಶ್ಮಿ ಮತ್ತು ಇಬ್ಬನಿ ಸೋಕಿ ಬಿರಿದ ನಂತರ ಉದುರಿದ ಹೂಗಳು ಉದ್ಯಾನ ಮತ್ತು ರಸ್ತೆಗಳ ತುಂಬೆಲ್ಲಾ ರಂಗೋಲಿ ಹಾಕುತ್ತವೆ.

ಇದು ಚಳಿಗಾಲದ ಹೂಗಳ ಕಾಲ.ಶೀತಗಾಳಿಗೆ ಎಲೆ ಉದುರಿ ಹೂ ಅರಳುವ ಸಮಯ. ಕೆಲವೇ ಕೆಲವು ಗಿಡಮರಗಳು ಚಳಿಗಾಲಕ್ಕೆ ತಮ್ಮ ಒಡಲನ್ನು ತೆರೆದುಕೊಳ್ಳುತ್ತದೆ. ಈ ಸಮಯದಲ್ಲಿ ಅರಳುವ ಹೂವುಗಳು ತಮ್ಮ ವಿಶಿಷ್ಟವಾದ ಬಣ್ಣಗಳಿಂದಲೇ ನಗರಕ್ಕೆ ರಂಗು ಬಳಿದಿವೆ.

ಗಿಡಮರಗಳು ಮಾಗಿಯ ಚಳಿಗೆ ಮೈಯೊಡ್ಡಿ ನಿಂತಿವೆ. ಎಲೆಗಳನ್ನೆಲ್ಲ ಉದುರಿ, ಬೋಳಾಗಿ ಕಾಣುತ್ತಿದ್ದ ಗಿಡ, ಮರಗಳು ಚಳಿಗಾಲಕ್ಕಾಗಿಯೇ ಕಾದು ನಿಂತಿರುವಂತೆ ಹೂವುಗಳಿಂದ ಮೈದುಂಬಿಕೊಂಡು ನಳ, ನಳಿಸುತ್ತಿವೆ. ಹಸಿರು ಎಲೆಗಳಿಗೆ ಇಂಚು ಜಾಗ ಬಿಡದಂತೆ ಅರಳಿ ನಿಂತು ನೋಡುಗರನ್ನು ಸೆಳೆಯುತ್ತಿವೆ.

ಮನುಷ್ಯರ ಚರ್ಮ ಬಿರಿಯುವ ಶುಷ್ಕ ಕಾಲದಲ್ಲಿ ಮರಗಳು ಎಷ್ಟೊಂದು ಬಣ್ಣಗಳನ್ನು ಬಳಿದುಕೊಂಡು ನಿಂತು ಅಚ್ಚರಿ ಮೂಡಿಸುತ್ತವೆ. ಮರದ ತುದಿ, ರೆಂಬೆ ಕೊಂಬೆಗಳೆಲ್ಲ ಕೆಂಡ ಮುಡಿದಂತೆ,ರಂಗು ಬಳಿದಂತೆ ಹೂವುಗಳಿಂದ ಅಲಂಕಾರಗೊಂಡಿವೆ.ಸುವಾಸನೆಗಿಂತ ತಮ್ಮ ಬಣ್ಣಗಳಿಂದಲೇ ಆಕರ್ಷಿಸುವಹೂವುಗಳು ಹೆಚ್ಚು.

ಚಳಿಗಾಲದಲ್ಲಿಯೇ ಮಾತ್ರ ಬಿರಿಯುವಪುಷ್ಪ ವೈಭವ, ಅಪರೂಪದ ಹೂಗಳ ಸೊಬಗು, ಬಿನ್ನಾಣ ಮತ್ತು ವೈಭವವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ.

ಚಳಿಗಾಲದ ಆರಂಭವಾಗುತ್ತಲೇ ಬಿರಿಯುವ ತಬೂಬಿಯಾ ಚಳಿಗಾಲದ ಅಂತ್ಯದವರೆಗೂ ಇರುತ್ತದೆ. ಇನ್ನು ಪಿಟುನಿಯಾ ಮಿಲ್ಲಿಂಗ್,ಜೇಟ್ ವೈನ್, ಟೋನಿಯಾ, ಸ್ಪೆಥೋಡಿಯಾ ಕ್ಯಾಂಪಾನುಟಾ ಫೌಂಟೇನ್ ಟ್ರೀ, ಆಫ್ರಿಕನ್ ಟ್ಯುಲಿಪ್ ಟ್ರೀಸೌಂದರ್ಯ ವ್ಯಕ್ತವಾಗುವುದೇ ಚಳಿಗಾಲದಲ್ಲಿ.

ನಗರದ ರಸ್ತೆ ಬದಿ, ಕಬ್ಬನ್ ಪಾರ್ಕ್ ಸುತ್ತಮುತ್ತ, ಲಾಲ್ಬಾಗ್ನಲ್ಲಿ ಕಾಣಿಸುವ‘ಟಬೂಬಿಯಾ’ ಮರಗಳು ತಿಳಿ ನೇರಳೆ ಬಣ್ಣದ ಮನಸ್ಸಿಗೆ ಆಹ್ಲಾದ ನೀಡುವ ಹೂವುಗಳಿಂದ ತುಂಬಿ ತುಳುಕುತ್ತಿವೆ.

ಸಾಲ್ವಡಾರ್ನ ‘ರಾಷ್ಟ್ರೀಯ ಪುಷ್ಪ’ ಮಾನ್ಯತೆ ಪಡೆದ ಅಮೆರಿಕ ಮೂಲದ ಟಬೂಬಿಯಾ ಮರ ‘ಟ್ರಂಪೆಟ್ ಟ್ರೀ’ ಎಂದು ಚಿರಪರಿಚಿತ. ‘ಬಿಗ್ನೋನಿಸಿಯೇ’ ಕುಟುಂಬಕ್ಕೆ ಸೇರಿದ ಹಲವು ಸಂಕುಲಗಳನ್ನು ಬೆಂಗಳೂರಿಗೆ ಪರಿಚಯಿಸಿದ್ದುಬ್ರಿಟಿಷರು.

ಟಬೂಬಿಯಾ ಉಷ್ಣವಲಯದಬರಡು ನೆಲದ ಮರ. ಸಂಕ್ರಾಂತಿ ವೇಳೆಗೆ ಮರದ ವೈಭವ ಕಳೆಗಟ್ಟಿ, ದುಂಬಿಗಳನ್ನು ಆಕರ್ಷಿಸುತ್ತದೆ. ವಸಂತನ ಆಗಮನಕ್ಕೂ ಮೊದಲೇ ಹೂವು ಉದುರುತ್ತವೆ.ನಗರದ ಮನೆಗಳ ಮುಂದಿನ ಕಂಪೌಂಡ್ ಮತ್ತು ಗೇಟ್ಗಳಿಗೆ ಹಬ್ಬಿದ ದಟ್ಟ ಹಸಿರ ಪೊದೆಯಲ್ಲಿ ಗೊಂಚಲು ಗೊಂಚಲಾಗಿ ಹಾರದಂತೆ ಇಳಿಬಿದ್ದ ಬಿಗ್ನೋನಿಚಳಿಗಾಲದಲ್ಲಿ ಅರಳುವ ಹೂವುಗಳು.ಕಿತ್ತಳೆ ಬಣ್ಣದ ಇವುಗಳತ್ತ ದೃಷ್ಟಿ ಹಾಯಿಸದವರೇ ಇಲ್ಲ.

ಇದನ್ನೂ ಓದಿ:ಉದ್ಯಾನ: ಎಲ್ಲೆಡೆ ಅಧ್ವಾನ

ಮನೆಯ ಗೋಡೆ, ಛಾವಣಿಯಲ್ಲಿ ಕಿತ್ತಳೆ ಬಣ್ಣದ ಬಿಗ್ನೋನಿಯ ಹೂವು ಅರಳಿತೆಂದರೆ ಸೌಂದರ್ಯ ರಾಶಿಯೇ ಮೈದಳೆದಂತೆ.ಪೈರೋ ಸ್ಟೀಜಿಯಾ ವೆನುಸ್ಟಾ ಇದರ ಸಸ್ಯಶಾಸ್ತ್ರೀಯ ಹೆಸರು. ಇದನ್ನು ಗೋಲ್ಡನ್ ಶವರ್ ಅಥವಾ ಸುವರ್ಣಧಾರೆ ಎಂಬ ಹೆಸರಿನಿಂದಲೂ ಕರೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.