ಕೂಷ್ಮಾಂಡ ಕೆತ್ತನೆ

ಭಯ ಹುಟ್ಟಿಸುವಂತೆ ಕುಂಬಳಕಾಯಿಗಳನ್ನು ಕೆತ್ತಿ ರಾಕ್ಷಸ ರೂಪಗಳನ್ನು ತಯಾರಿಸುವುದು ಕೂಡ ಹ್ಯಾಲೊವಿನ್ ಭಾಗ. ನಗರದ ತ್ರೀ ಡಾಟ್ಸ್ ಆ್ಯಂಡ್ ಡ್ಯಾಶ್ ರೆಸ್ಟೊರೆಂಟ್ನಲ್ಲಿ ಇಂದುಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಕುಂಬಳಕಾಯಿ ಕೆತ್ತನೆ ಕಾರ್ಯಕ್ರಮ ನಡೆಯಲಿದೆ. ಇಂದಿರಾನಗರ ಮತ್ತು ಜೆ.ಪಿ. ನಗರದಲ್ಲಿ ಈ ರೆಸ್ಟೊರೆಂಟ್ಗಳಿವೆ. ಇದರ ಜತೆಗೆ ವಿಶೇಷ ಬಗೆಯ ಪಾನೀಯಗಳು ಮತ್ತು ಖಾದ್ಯಗಳನ್ನೂ ಸವಿಯಬಹುದು.

ವಿಶೇಷ ಉಡುಪು

ಹ್ಯಾಲೊವಿನ್ ಮೂವಿ ಮತ್ತು ಷೋಗಳಲ್ಲಿ ಇಷ್ಟವಾದ ಪಾತ್ರದಂತೆ ಉಡುಪು ಧರಿಸುವ ಬಯಕೆ ಇದ್ದರೆ, ಹೊರವರ್ತುಲ ರಸ್ತೆಯಲ್ಲಿರುವ ದಿ ಸ್ಕ್ವೇರ್, ನೊವೊಟೆಲ್ ರೆಸ್ಟೊರೆಂಟ್ ನಿಮ್ಮ ಬಯಕೆ ಈಡೇರಿಸಲಿದೆ. ಹ್ಯಾಲೊವಿನ್ ಮೆಚ್ಚುವ ಮೀಟ್ ಪೀಸ್, ಪೊಟಾಟೊ ಪ್ಯಾನ್ಕೇಕ್ಸ್, ಕ್ಯಾಂಡಿ ಸೇರಿದಂತೆ ಹಲವು ತಿನಿಸುಗಳು ದೊರೆಯಲಿವೆ. ನಿಮ್ಮಿಷ್ಟದ ಪಾತ್ರದ ಉಡುಪು ಧರಿಸುವುದಕ್ಕೆ ರೆಸ್ಟೊರೆಂಟ್ನಲ್ಲಿ ನೆರವು ನೀಡುವವರೂ ಇರುತ್ತಾರೆ. ಹೆಚ್ಚಿನ ಮಾಹಿತಿಗೆ 9538897371 ಸಂಪರ್ಕಿಸಿ.

ಟ್ರಿಕ್ ಆರ್ ಟ್ರೀಟ್

ಬಗೆ ಬಗೆಯ ಕಾಕ್ಟೇಲ್ಗಳ ರುಚಿ ಸವಿಯಲು ಇಷ್ಟಪಡುವವರು, ನಗರದ ಮ್ಯಾರಿಯಟ್ ಹೋಟೆಲ್ನ ಎಂ ಕೆಫೆಯಲ್ಲಿ ಇಂದು ಸಂಜೆ7 7ರಿಂದ 11ರ ವರೆಗೆ ನಡೆಯುವ ಹ್ಯಾಲೊವಿನ್ ಉತ್ಸವದಲ್ಲಿ ಭಾಗವಹಿಸಬಹುದು. ವಿಶೇಷ ಬಗೆಯ ಖಾದ್ಯಗಳೂ ದೊರೆಯುತ್ತವೆ. ಇದರ ಜತೆಗೆ ಟ್ರಿಕ್ ಆರ್ ಟ್ರೀಟ್ ಹೆಸರಿನ ವಿಶೇಷ ಕಾರ್ಯಕ್ರಮವೂ ನಡೆಯಲಿದ್ದು, ಭಿನ್ನ ರೀತಿಯ ಪಾರ್ಟಿ ಬೇಕೆನ್ನುವವರು ಭಾಗವಹಿಸಬಹುದು.

ದಿರಿಸುಗಳ ಉತ್ಸವ

ಭಯ ಹುಟ್ಟಿಸುವಂತಹ ಇಷ್ಟದ ಹ್ಯಾಲೊವಿನ್ ದಿರಿಸು ಧರಿಸಿ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕೋರಮಂಗಲದಲ್ಲಿರುವ ಬೀರ್ ಲೈಬ್ರರಿ ಒದಗಿಸುತ್ತಿದೆ. ಇಷ್ಟವಾದ ಉಡುಪುಗಳನ್ನು ಧರಿಸಿಕೊಂಡು ಬಂದು, ರೆಸ್ಟೊರೆಂಟ್ನಲ್ಲೇ ಮೇಕಪ್ ಮಾಡಿಕೊಳ್ಳಬಹುದು. ನೆರವಾಗುವುದಕ್ಕೆ ಸಿಬ್ಬಂದಿಯೂ ಇದ್ದಾರೆ. ಪ್ರವೇಶ ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗೆ 9108180000ಗೆ ಸಂಪರ್ಕಿಸಿ.

ಭಯಾನಕ ಖಾದ್ಯಗಳು

ಬ್ರ್ಯೂ ಆ್ಯಂಡ್ ಬಾರ್ಬೆಕ್ಯೂ ರೆಸ್ಟೊರೆಂಟ್ನಲ್ಲಿ ಭಯ ಹುಟ್ಟಿಸುವಂತಹ ವಿಶೇಷ ಖಾದ್ಯಗಳನ್ನು ಹ್ಯಾಲೊವಿನ್ ಅಂಗವಾಗಿ ಬಡಿಸಲಾಗುತ್ತಿದೆ. ರಾಕ್ಷರಸ ಬೆರಳು, ಹಾವನ್ನು ಹೋಲುವ ಖಾದ್ಯಗಳು, ವಿಶೇಷ ಸೂಪ್ಗಳು ದೊರೆಯಲಿವೆ. ಪೆಪ್ಪರ್ ಮಮ್ಮೀಸ್, ಡೆವಿಲ್ ಓರಿಯೊದಂತಹ ವಿಶೇಷ ಹೆಸರಿನ ಖಾದ್ಯಗಳು ದೊರೆಯಲಿವೆ. ಈ ವಿಶೇಷ ಆಹಾರ ಉತ್ಸವ ಅಕ್ಟೋಬರ್ 31ರಿಂದ ನವೆಂಬರ್ 7ರ ವರೆಗೆ ನಡೆಯಲಿದೆ.

ಬೇಟೆಯಾಡುವ ಮನೆ

ಭಯ ಹುಟ್ಟಿಸುವ ವಾತಾವರಣದಲ್ಲಿ ವಿಶೇಷ ಆಟಗಳನ್ನು ಮೋಜು ಮಾಡುವ ಬಯಕೆ ಇದ್ದರೆ, ಬೆಳ್ಳಂದೂರಿನ ಮಯ್ಯ ರೆಸ್ಟೊರೆಂಟ್ನಲ್ಲಿ ಅಕ್ಟೋಬರ್ 31ರಿಂದ ನವೆಂಬರ್ 3ರ ವರೆಗೆ ನಡೆಯುವ ಹ್ಯಾಲೊವಿನ್ ಉತ್ಸವದಲ್ಲಿ ಭಾಗವಹಿಸಬಹುದು. ದೈತ್ ಜೇಡಗಳು, ವಿಶೇಷ ಕೂಷ್ಮಾಂಡಗಳು ಇಲ್ಲಿ ಇರಲಿವೆ. ಹೆಚ್ಚಿನ ಮಾಹಿತಿಗೆ 080 42183056ಗೆ ಸಂಪರ್ಕಿಸಿ.

ವಿಶೇಷ ಪಾರ್ಟಿ

ಜೆ.ಪಿ. ನಗರದ ಎರಿಕ್ ಹೌಸ್ನಲ್ಲಿ ಇಂದು ಸಂಜೆ 7ರಿಂದ ಹ್ಯಾಲೊಯೀನ್ ಪಾರ್ಟಿ ನಡೆಯಲಿದೆ. ವಿಶೇಷವಾಗಿ ಅಲಂಕರಿಸಿರುವ ರೆಸ್ಟೊರೆಂಟ್ನಲ್ಲಿ ವಿಶೇಷ ಖಾದ್ಯಗಳು ಮತ್ತು ಕಾಕ್ಟೇಲ್ಗಳನ್ನು ಸವಿಯಬಹುದು. ಭಯನಾಕ ಮತ್ತು ರೋಮಾಂಚನಕಾರಿ ಅನುಭವ ನೀಡುವ ಹಲವು ಹಂಗುಗಳು ಈ ರೆಸ್ಟೊರೆಂಟ್ನಲ್ಲಿ ಸಿಗಲಿವೆ.

ಸಂತೋಷದ ಕ್ಷಣಗಳಿಗಾಗಿ

ಫೀನಿಕ್ಸ್ ಮಾರ್ಕೆಟ್ನಲ್ಲಿರುವ ಬಾರ್ಬಾರ್ನಲ್ಲಿ ವಿಶೇಷ ಅನುಭವ ನೀಡುವ ಪಾರ್ಟಿ ಇಂದು ನಡೆಯಲಿದೆ. ಇಲ್ಲಿ ಬಾಸ್+ಬ್ರ್ಯೂಸ್ ಹೆಸರಿನಲ್ಲಿ ₹1700ಕ್ಕೆ ಬೇಕಿನಿಸುವಷ್ಟು ಬೀರ್ ಕುಡಿಯಬಹುದು. ₹1450ಕ್ಕೆ ಬೀರ್ ಜತೆಗೆ ಸಸ್ಯಾಹಾರಿ ಅಥವ ಮಾಂಸಾಹಾರಿ ಪ್ಲ್ಯಾಟರ್ಗಳು ಕೂಡ ಸಿಗಲಿವೆ. ಹೆಚ್ಚಿನ ಮಾಹಿತಿಗೆ 9182786025ಗೆ ಸಂಪರ್ಕಿಸಿ.

ಹ್ಯಾಲೊವಿನ್ ಗ್ರಿಂಡ್

ಕೋರಮಂಗಲ, ಚರ್ಚ್ಸ್ಟ್ರೀಟ್ ಮತ್ತು ವೈಟ್ಫೀಲ್ಡ್ನಲ್ಲಿರುವ ಸೋಷಿಯಲ್ ರೆಸ್ಟೊರೆಂಟ್ನಲ್ಲಿ ಹ್ಯಾಲೊವಿನ್ ಗ್ರಿಂಡ್ ಹೆಸರಿನ ವಿಶೇಷ ಉತ್ಸವ ನಡೆಯಲಿದೆ. ವಿಶೇಷ ಖಾದ್ಯಗಳು ಮತ್ತು ಪಾನೀಯಗಳು ದೊರೆಯಲಿವೆ. ಹ್ಯಾಲೊಯೀನ್ ಅನುಭವ ನೀಡುವಂತೆ ರೆಸ್ಟೊರೆಂಟ್ ಬದಲಿಸಲಾಗಿದೆ.

ರಾತ್ರಿಯ ರೋಮಾಂಚನಗಳು

ಕೋರಮಂಗಲದಲ್ಲಿರುವ ಫಾಕ್ಸ್ಟ್ರಾಟ್ನಲ್ಲಿ ಇಂದು ಸಂಜೆ 8ರಿಂದ ಹ್ಯಾಲೊಯೋನ್ ಉತ್ಸವ ನಡೆಯಲಿದೆ. ರೋಮಾಂಚನಕಾರಿ ಅನುಭವ ನೀಡುವ ಹಲವು ಕಾರ್ಯಕ್ರಮಗಳು ಉತ್ಸವದಲ್ಲಿ ಇರಲಿವೆ. ಕುಣಿದು ನಲಿಯುವುದಕ್ಕೂ ಅವಕಾಶವಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.