ರಿಯಲ್ ಮಿ 3ಐ – ಹತ್ತು ಸಾವಿರ ಮೌಲ್ಯದೊಳಗಿನ ಮೊಬೈಲ್ ಫೋನ್ಗಳ ಪಟ್ಟಿಗೆ ಸೇರುವ ಸ್ಮಾರ್ಟ್ ಫೋನ್. ಇದು ಅಂಗೈ ಆವರಿಸುವಷ್ಟು ಅಗಲ. ಶರ್ಟ್ ಜೇಬಲ್ಲಿಟ್ಟರೆ ಕಾಲುಭಾಗ ಮೇಲೆ ಕಾಣುವಷ್ಟು ಉದ್ದ. ಈ ಫೋನ್ ತುಂಬ ಅಪ್ಲಿಕೇಷನ್ಗಳಿವೆ, ಜತೆಗೊಂದಿಷ್ಟು ಆಕರ್ಷಕ ಫೀಚರ್ಗಳಿವೆ.

ಇನ್ಡಿಸ್ಪ್ಲೇ ಫಿಂಗರ್ಪ್ರಿಂಟ್ ತಂತ್ರಜ್ಞಾನದ ಸ್ಕ್ರೀನ್ ಅನ್ಲಾಕ್ ಜತೆಗೆ, ಫೇಸ್ ರೆಕಗ್ನೀಷನ್ ಅನ್ಲಾಕ್ ಆಯ್ಕೆಯೂ ಇದೆ. ಮುಖಚಹರೆ ಗುರುತಿಸಿ ಅನ್ಲಾಕ್ ಆಗುವ ವ್ಯವಸ್ಥೆ ಚೆನ್ನಾಗಿದೆ.

ಆದರೆ, ಫಿಂಗರ್ಪ್ರಿಂಟ್ ಅನ್ಲಾಕ್ ಆಯ್ಕೆಗೆ ಬೆರಳಚ್ಚು ದಾಖಲಿಸುವಾಗ ಸ್ವಲ್ಪ ಸಮಯ ಹಿಡಿಯುತ್ತದೆ. ಬೆರಳಿನ ಎಲ್ಲ ಗೆರೆಗಳು ಮೂಡಬೇಕು. ಆದರೆ, ಒಮ್ಮೆ ಬೆರಳಚ್ಚು ದಾಖಲಾದರೆ ನಂತರ ಸಮಸ್ಯೆ ಕೊಡುವುದಿಲ್ಲ.

13 ಎಂಪಿ ಪ್ರೈಮರಿ ಮತ್ತು 2 ಎಂಪಿ ಸೆಕೆಂಡರಿ ಕ್ಯಾಮೆರಾಗಳಿವೆ. ಹೊರಾಂಗಣ ಚಿತ್ರಗಳು ಬಹಳ ಎಫೆಕ್ಟಿವ್ ಆಗಿ ಬರುತ್ತವೆ. ಕಡಿಮೆ ಬೆಳಕಿನಲ್ಲೂ ಫೋಟೊಗಳು ಚೆನ್ನಾಗಿ ಬರುತ್ತವೆ. ಲ್ಯಾಂಡ್ ಸ್ಕೇಪ್ ಮತ್ತು ಪೋರ್ಟ್ರೇಟ್ ಜತೆಗೆ, ಕ್ಲೋಸ್ಅಪ್ ಚಿತ್ರಗಳನ್ನು ಉತ್ತಮವಾಗಿ ತೆಗೆಯಬಹುದು. ನೈಟ್ಸ್ಕೇಪ್ ಎಂಬ ಸೌಲಭ್ಯ ನೀಡಿರುವುದರಿಂದ ಒಳಾಂಗಣದಲ್ಲಿ ತೆಗೆಯುವ ಚಿತ್ರಗಳೂ ಚೆನ್ನಾಗಿ ಬರುತ್ತವೆ. ಫ್ರಂಟ್ ಕ್ಯಾಮೆರಾ 16 ಎಂಪಿ ಇದ್ದು, ಸೆಲ್ಫಿ ಚಿತ್ರಗಳು ಚೆನ್ನಾಗಿರುತ್ತವೆ. ವಿಡಿಯೊ ರೆಕಾರ್ಡಿಂಗ್ ಕೂಡ ಚೆನ್ನಾಗಿದೆ.

ಬ್ಯಾಟರಿ ಬ್ಯಾಕ್ ಅಪ್: ಡೈಮಂಡ್ ಕಟ್ ವಿನ್ಯಾಸವಿದೆ. 4230 ಎಂಎಎಚ್ ಸಾಮರ್ಥ್ಯದ ಬ್ಯಾಟರಿ ಇದೆ. ವೇಗವಾಗಿ ಚಾರ್ಜ್ ಆಗಲು vooc ಫ್ಲ್ಯಾಷ್ ಚಾರ್ಜ್ 3.0 ಒಳಗೊಂಡಿದೆ. ಸಾಮಾನ್ಯವಾಗಿ ಮೊಬೈಲ್ ಬಳಸುವವರಿಗೆ ಬಹುಶಃ ಎರಡು ದಿನಗಳವರೆಗೂ ಬ್ಯಾಟರಿ ಬ್ಯಾಕ್ಅಪ್ ಬರಬಹುದು. ಹೆಚ್ಚು ಬಳಸುವವರಿಗೂ ಒಂದೂವರೆ ದಿನದವರೆಗೂ ಬರಬಹುದು. ಬಳಕೆ ಪ್ರಮಾಣ ಹೆಚ್ಚಾದ ನಂತರ ಬ್ಯಾಟರಿ ಬ್ಯಾಕ್ಅಪ್ ಶಕ್ತಿ ಹೇಗಿರುತ್ತದೆ ಎಂಬುದು ಗೊತ್ತಿಲ್ಲ.

ಡಿಸ್ ಪ್ಲೇ, ಧ್ವನಿ: 6.22 ಇಂಚ್ ಡಿಸ್ ಪ್ಲೇ ಇದೆ. ಡಿಸ್ ಪ್ಲೇ ವಿಶಾಲವಾಗಿರುವುದರಿಂದ ಸಿನಿಮಾ ವೀಕ್ಷಿಸಲು ಚೆನ್ನಾಗಿರುತ್ತದೆ. ‘ಸ್ಕ್ರೀನ್ ಫಿಂಚ್’ ಸೌಲಭ್ಯ ನೀಡಿರುವುದರಿಂದ, ಸ್ಕ್ರೀನ್ ಝೂಮ್ ಮಾಡಿ ನೋಡಬಹುದು. ಹೀಗಾಗಿ, ಇಡೀ ಸ್ಕ್ರೀನ್ ತುಂಬಾ ಪಿಕ್ಚರ್ ಕಾಣಿಸುತ್ತದೆ. ಆಡಿಯೊ ಮತ್ತು ವಿಡಿಯೊ ಗುಣಮಟ್ಟ ತೃಪ್ತಿದಾಯಕ. ಇಯರ್ ಫೋನ್ ನೀಡಿಲ್ಲ.

ಎರಡು ಮಾದರಿ, ಮೂರು ಬಣ್ಣ..: ಕಂಪನಿ ಎರಡು ಮಾದರಿಗಳಲ್ಲಿಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಒಂದರಲ್ಲಿ 3 ಜಿಬಿ ರ್ಯಾಮ್ + 32 ಜಿಬಿ ಸಂಗ್ರಹ ಸಾಮರ್ಥ್ಯ(₹ 7999), ಇನ್ನೊಂದು 4 ಜಿಬಿ ರ್ಯಾಮ್ + 64 ಜಿಬಿ ಸಂಗ್ರಹ ಸಾಮರ್ಥ್ಯದ ಮಾದರಿಗಳಿವೆ (₹ 9999). ಕಪ್ಪು, ನೀಲಿ ಮತ್ತು ಕೆಂಪು ಮೂರು ಕಲರ್ ಗಳಲ್ಲಿ ಫೋನ್ ಗಳು ಲಭ್ಯವಿವೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.