ಇಡೀ ದೇಶವೇ ಗಣರಾಜ್ಯೋತ್ಸವದ ಆಚರಣೆಗೆ ಸಜ್ಜಾಗಿದೆ. ಈ ಸಲದ ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮುಖ್ಯ ಅತಿಥಿಯಾಗಿ ಆಗಮಿಸಲಿರುವುದು ಆಕರ್ಷಣೆಯನ್ನು ಹೆಚ್ಚಿಸಿದೆ.

ಜ. 26ರಂದು ನಡೆಯುವ ಗಣರಾಜ್ಯೋತ್ಸವದ ಆಕರ್ಷಕ ಪಥಸಂಚಲನಕ್ಕೆ ಒಬಾಮಾ ಸಾಕ್ಷಿಯಾಗಲಿದ್ದಾರೆ. ಇದೇ ವೇಳೆ 14 ರಾಜ್ಯಗಳ ಸ್ತಬ್ಧಚಿತ್ರಗಳು ಅವರ ಮುಂದೆ ಹಾದುಹೋಗಲಿವೆ. ಇವುಗಳ ಪೈಕಿ ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳೂ ಪಥಸಂಚಲನದ ಮೆರುಗು ಹೆಚ್ಚಿಸಲು ಸಜ್ಜಾಗಿವೆ.

ಚನ್ನಪಟ್ಟಣದ ಗೊಂಬೆಗಳು ಈ ಸಲ ಮಹಾನಗರಕ್ಕೆ ಬರಲಿರುವ ಒಬಾಮಾ ಅವರ ಜತೆ ಅಮೆರಿಕಕ್ಕೆ ತೆರಳಲೂ ಸಿದ್ಧವಾಗಿ ನಿಂತಿರುವುದು ವಿಶೇಷ. ಹೌದು! ಗಣರಾಜ್ಯೋತ್ಸವದಂದು ಬೆಂಗಳೂರಿಗೆ ಬರಲಿರುವ ‘ಹಿರಿಯಣ್ಣ’ನಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಚನ್ನಪಟ್ಟದ ಗೊಂಬೆಗಳನ್ನು ಉಡುಗೊರೆಯಾಗಿ ನೀಡಲಿದೆ. ಉಡುಗೊರೆಗೆ ಚನ್ನಪಟ್ಟಣದ ಗೊಂಬೆಗಳನ್ನೇ ಆರಿಸಿರುವುದಕ್ಕೂ ಕಾರಣವಿದೆ.

ಹಿಂದೊಮ್ಮೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಅವರು ಕುಟುಂಬ ಸಮೇತರಾಗಿ ಭಾರತಕ್ಕೆ ಬಂದಿದ್ದ ಸಮಯದಲ್ಲಿ ಅವರ ಪತ್ನಿ ಮಿಶೆಲ್ ಒಬಾಮ ನವದೆಹಲಿಯ ವಸ್ತು ಪ್ರದರ್ಶನದಲ್ಲಿ ಚನ್ನಪಟ್ಟಣದ ಬೊಂಬೆಗಳನ್ನು ಇಷ್ಟಪಟ್ಟು ಖರೀದಿಸಿದ್ದರು. ಅವರ ಮೂಲಕ ಚನ್ನಪಟ್ಟಣದ ಗೊಂಬೆಗಳು ಶ್ವೇತಭವನದಲ್ಲಿ ಸ್ಥಾನಪಡೆದಿದ್ದವು. ಆದ್ದರಿಂದಲೇ ಈ ಬಾರಿ ಒಬಾಮ ಅವರಿಗೆ ಉಡುಗೊರೆಯಾಗಿ ಚನ್ನಪಟ್ಟಣದ ಗೊಂಬೆಗಳನ್ನೇ ನೀಡಲು ವಾರ್ತಾ ಇಲಾಖೆ ನಿರ್ಧರಿಸಿದೆ.

ಬರಾಕ್ ಒಬಾಮಾ ಅವರು ದೆಹಲಿಯ ಕೆಂಪುಕೋಟೆಯಲ್ಲಿ ನಡೆಯುವ ಪರೇಡ್ ವೀಕ್ಷಣೆ ನಂತರ ವಿದೇಶಾಂಗ ಸಚಿವಾಲಯದ ಮೂಲಕ ಈ ಗೊಂಬೆಗಳನ್ನು ತಲುಪಿಸಲಾಗುವುದು ಎಂದು ರಾಜ್ಯ ವಾರ್ತಾ ಇಲಾಖೆ ನಿರ್ದೆಶಕ ಎನ್.ಆರ್.ವಿಶುಕುಮಾರ್ ತಿಳಿಸಿದ್ದಾರೆ.

ಎಲ್ಲೆಲ್ಲಿಂದ ಖರೀದಿ
ಅಮೆರಿಕ ಅಧ್ಯಕ್ಷರಿಗೆ ಉಡುಗೊರೆ ನೀಡುವುದೆಂದರೆ ಸಾಮಾನ್ಯವೇ? ಇದಕ್ಕಾಗಿ ವಾರ್ತಾ ಇಲಾಖೆ ಸಾಕಷ್ಟು ಎಚ್ಚರಿಕೆಯಿಂದ ಗೊಂಬೆಗಳನ್ನು ಆಯ್ಕೆ ಮಾಡಿದೆ. ಜೆ.ಪಿನಗರದಲ್ಲಿರುವ ಮಾಯಾ ಆರ್ಗಾನಿಕ್, ಎಂ.ಜಿ.ರಸ್ತೆಯ ಕಾವೇರಿ ಎಪೋರಿಯಂನಿಂದ ತರಹೇವಾರಿ ಗೊಂಬೆಗಳನ್ನು ಆಯ್ಕೆ ಮಾಡಿ ಖರೀದಿಸಲಾಗಿದೆ.

ಮಾಯಾ ಆರ್ಗಾನಿಕ್‌ನಿಂದ ಆರು ಗೊಂಬೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ಒಂದು ಕುದುರೆ, ಒಂದು ನಾಯಿ, ಎರಡು ಸ್ಟ್ಯಾಕರ್‍್ಸ್ (ಒಂದು ಚಿಕ್ಕದ್ದು, ಇನ್ನೊಂದು ದೊಡ್ಡದ್ದು), ಒಂದು ಕಾರು, ಒಂದು ಬಾತುಕೋಳಿ. ಕಾವೇರಿ ಎಂಪೋರಿಯಂನಿಂದ 15 ಬಗೆಯ ಗೊಂಬೆಗಳನ್ನು ಆಯ್ಕೆ ಮಾಡಲಾಗಿದೆ. ಇದರಲ್ಲಿ ವೀಣಾವಾದನ, ಹೂವಿನ ಕುಂಡ, ಫಿರಂಗಿ, ಕುಳಿತುಕೊಂಡಿರುವ–ನಿಂತುಕೊಂಡಿರುವ ಬ್ಲ್ಯಾಕ್ ಡಾಲ್‌ಗಳು, ವಿಮಾನ ಮುಂತಾದ ಬಗೆಯ ಗೊಂಬೆಗಳಿವೆ.

ಚನ್ನಪಟ್ಟಣದ ಗೊಂಬೆಗಳಿಗೆ ಬೇಡಿಕೆ ತುಂಬ ಇದೆ. ಕಾವೇರಿ ಎಂಪೋರಿಯಂನಿಂದ ಒಂದಷ್ಟು ಗೊಂಬೆಗಳನ್ನು ವಾರ್ತಾ ಇಲಾಖೆಯವರು ಆಯ್ಕೆ ಮಾಡಿದ್ದಾರೆ. ನಮ್ಮೂರಿನ ಗೊಂಬೆಗಳು ಅಮೆರಿಕಾದ ಅಧ್ಯಕ್ಷನ ಕೈ ಸೇರುತ್ತಿವೆ ಎಂಬುದೇ ನಮಗೆ ಹೆಮ್ಮೆಯ ವಿಷಯ.
– ಜಿ.ಮುನಿಸ್ವಾಮಿ (ಪ್ರಧಾನ ವ್ಯವಸ್ಥಾಪಕ, ಕಾವೇರಿ ಎಂಪೋರಿಯಂ)

ದೇಶದ ಅತಿಥಿಗೆ ತಾವು ತಯಾರಿಸಿದ ಗೊಂಬೆಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ತಯಾರಕರಿಗೂ ಹೆಮ್ಮೆ ತಂದಿದೆ.
ಚಿಕ್ಕವಯಸ್ಸಿನಿಂದಲೂ ಚನ್ನಪಟ್ಟಣದ ಗೊಂಬೆ ತಯಾರಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸೈಯದ್ ಮತ್ತು ರಹೀಂ ಅವರ ಮುಖದಲ್ಲೀಗ ಸಾರ್ಥಕದ ನಗು. ಇವರು ತಯಾರಿಸಿದ ಗೊಂಬೆ ಅಮೆರಿಕ ಅಧ್ಯಕ್ಷನ ಮನೆಯನ್ನು ಅಲಂಕರಿಸಲಿದೆ ಎಂಬುದೇ ಅವರ ನಗುವಿಗೆ ಕಾರಣ.

‘ಒಂದೊಂದು ಗೊಂಬೆ ಮಾಡುವಾಗ ಈ ಗೊಂಬೆ ಯಾರ ಕೈ ಸೇರಲಿವೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಆಟಿಕೆಗಳಾಗಿ, ಅಲಂಕಾರಕ್ಕಾಗಿ ನಾವು ತಯಾರಿಸಿದ ಗೊಂಬೆಗಳು ಮಾರಾಟವಾಗುತ್ತವೆ. ಈ ಸಲವಂತೂ ತುಂಬ ಖುಷಿಯಾಗಿದೆ. ಗಣರಾಜ್ಯೋತ್ಸದ ದಿನ ಒಬಾಮ ಅವರಿಗೆ ಉಡುಗೊರೆ ನೀಡಲು ನಮ್ಮ ಅಂಗಡಿಯಿಂದ ಗೊಂಬೆ ಆಯ್ಕೆ ಮಾಡಿದರು. ಈ ಹೆಮ್ಮೆ ನಮ್ಮಲ್ಲಿ ಹೊಸ ಹುರುಪನ್ನು ಮೂಡಿಸಿದೆ. ಇನ್ನಷ್ಟು ಚೆಂದವಾಗಿ ಗೊಂಬೆ ಮಾಡುವುದಕ್ಕೆ ಸ್ಫೂರ್ತಿ ನೀಡಿದೆ’ ಎನ್ನುತ್ತಾರೆ ಕಾವೇರಿ ಎಂಪೋರಿಯಂನಲ್ಲಿರುವ ರಹೀಂ.

ಮಾಯಾ ಆರ್ಗಾನಿಕ್‌ನ ಸುಬ್ಬಾರಾವ್ ಅವರೂ ತಾವು ತಯಾರಿಸಿದ ಗೊಂಬೆ ಇಂಥ ಗೌರವಕ್ಕೆ ಆಯ್ಕೆಯಾಗಿದ್ದಕ್ಕೆ ತುಂಬಾ ಖುಷಿಯಾಗಿದ್ದಾರೆ. ‘ನಮ್ಮ ಅಂಗಡಿಯಿಂದ ಆರು ಗೊಂಬೆಗಳನ್ನು ವಾರ್ತಾ ಇಲಾಖೆಯವರು ತೆಗೆದುಕೊಂಡು ಹೋದರು. ಮೊದಲು ಯಾಕೆ ಎಂದು ನನಗೆ ಗೊತ್ತಿರಲಿಲ್ಲ. ವಿಷಯ ಗೊತ್ತಾದಾಗ ತುಂಬ ಖುಷಿಯಾಯಿತು. ಕಲಾವಿದನಿಗೆ ಇದಕ್ಕಿಂತ ಹೆಚ್ಚು ಇನ್ನೇನು ಬೇಕು. ಈ ಗೊಂಬೆಗಳನ್ನು ನಾನೇ ತಯಾರಿಸಿದ್ದು ಎಂದು ಹೇಳುವುದಕ್ಕೆ ಹೆಮ್ಮೆ ಅನಿಸುತ್ತಿದೆ’ ಎನ್ನುತ್ತಾರೆ ಸುಬ್ಬಾರಾವ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.