`ಅರೇ~...! ಇದು ನನ್ನ ಭಾವನೆ, ನನ್ನ ಕನಸುಗಳನ್ನು ನನಸಾಗಿಸಿ ಜೀವ ತಳೆದ ಕಲಾ ಪ್ರದರ್ಶನ. ಪೇಟಿಂಗ್ ನನ್ನ ಹವ್ಯಾಸ. ಮೊದಲೆಲ್ಲಾ ನನ್ನ ಮನಸ್ಸಿನ ಸಂತೋಷಕ್ಕಾಗಿ ಪೇಂಟಿಂಗ್ ಮಾಡುತ್ತಿದ್ದೆ. ಆದರೀಗ, ನನ್ನ ಆನಂದವನ್ನು ಎಲ್ಲರೊಡನೆ ಹಂಚಿಕೊಳ್ಳುವ ಆಸೆ. ಹೀಗೆನ್ನುತ್ತಾರೆ ವಾಣಿ ನರೇಶ್, ತಮ್ಮ `ಅರೇ~ ಕಲಾ ಪ್ರದರ್ಶನದ ಬಗ್ಗೆ.

ಚಿಕ್ಕಂದಿನಿಂದಲೂ, ವಾಣಿ ಅವರಿಗೆ ಬಣ್ಣ ಎಂದರೆ ಪ್ರಾಣ. ಕ್ರೇಯಾನ್ ಕಲರ್ ಪೆನ್ಸಿಲ್, ವಾಟರ್ ಕಲರ್ ಹೀಗೆ ಬಣ್ಣದೊಡನೆ ಆಟವಾಡುತ್ತಾ ಪ್ರಾರಂಭವಾದ ಬಣ್ಣದೊಡನಾಟ ಅವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ. ತನ್ನ ತಪ್ಪು ಒಪ್ಪುಗಳಿಂದ ಬೆಳೆಯುತ್ತ, ಸಲಹೆಯಿಂದ ತಿದ್ದಿಕೊಳ್ಳುತ್ತ ಕಲಾ ರಚನೆಯಲ್ಲಿ ತೊಡಗಿಸಿಕೊಂಡ ಅವರು ಒಂದರ್ಥದಲ್ಲಿ ಏಕಲವ್ಯ. ಏಕೆಂದರೆ ಯಾವ ತರಗತಿಯಲ್ಲೂ ಕುಳಿತು ಕಲಿತವರಲ್ಲ. ಅವರ ಸ್ವಯಂ ಕೃಷಿ ಇಂದು 100ಕ್ಕೂ ಹೆಚ್ಚು ಕಲಾ ಕೃತಿಗಳನ್ನು ಪ್ರದರ್ಶಿಸುವ ಮಟ್ಟ ಮುಟ್ಟಿದೆ.

ಈ ಬಗ್ಗೆ ಮಾತನಾಡುತ್ತ, `ನನಗೆ ಸದಾ ಏನನ್ನಾದರೂ ಸಾಧಿಸಬೇಕೆಂಬ ಕನಸಿತ್ತು. ಇಂದು ಆ ಕನಸು ನನಸಾಗಿದೆ~ ಎನ್ನುತ್ತಾರೆ. `ಇದುವರೆಗೂ ಯಾರ ಬಳಿಯೂ ಕಲಿತಿಲ್ಲ, ಇನ್ನಾದರೂ ಪರಿಣಿತರ ಬಳಿ ಕಲಿತು, ಉತ್ತಮ ಕಲಾ ಕೃತಿಗಳನ್ನು ಸಿದ್ಧಪಡಿಸಿ, ಇಂತಹ ಇನ್ನೂ ಅನೇಕ ಪ್ರದರ್ಶನ ಸಂಘಟಿಸುವ ಆಸೆ ಇದೆ~ ಎಂದು ಹೇಳುತ್ತಾರೆ.

ಅವರ ಚಿತ್ರಕಲೆ ಅವರ ಮನದ ಭಾವನೆಗಳನ್ನು ಹತ್ತು ಹಲವು ರೀತಿಯಲ್ಲಿ ಅಭಿವ್ಯಕ್ತಿಸುತ್ತದೆ. `ಬಾಂಡಿಂಗ್~ ಭಾವನಾತ್ಮಕ ಸಂಬಂಧಗಳ ಎಳೆಗಳನ್ನು ಬಿಡಿಸಿಡುತ್ತದೆ. `ಹ್ಯೂಮನ್ ಐಡೆಂಟಿಟಿ~ ಯಲ್ಲಿ ಚದುರಂಗದ ಮಣೆ ಮತ್ತು ಕಾಯಿಗಳ ಮೂಲಕ `ಜೀವನದ ಆಟದಲ್ಲಿ ಪ್ರತಿ ವ್ಯಕ್ತಿ ತನ್ನ ಪಾತ್ರ ನಿಭಾಯಿಸುತ್ತಾನೆ, ಯಾರೂ ಮೇಲು-ಕೀಳಲ್ಲ~ ಎಂಬ ವೇದಾಂತ ಸಾರವನ್ನು ಸುಂದರವಾಗಿ ಮೂಡಿಸಿದ್ದಾರೆ.

`ನಮಗೆ ಲ್ಯಾಂಡ್ಸ್ಕೇಪ್ ತುಂಬ ಇಷ್ಟ. ಎತ್ತರವಾಗಿ ಬೆಳೆದು ನಿಲ್ಲುವ ಮರಗಳನ್ನು ಕ್ವಾನ್ವಾಸ್ ಮೇಲೆ ಮೂಡಿಸುವಾಸೆ ನೀಲಗಿರಿ, ಪೈನ್ ಮರಗಳ ಕಲೆಯನ್ನೂ ಪ್ರದರ್ಶಿಸುತ್ತಿದ್ದೇನೆ~ ಎನ್ನುವ ವಾಣಿ, ತನ್ನ ಕಲಾಕೃತಿಗಳನ್ನು ಸಿದ್ಧಪಡಿಸಲು ಸುಮಾರು ಒಂದೂವರೆ ವರ್ಷ ಸತತ ಪ್ರಯತ್ನದಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿಷ್ಠಿತ ಐಟಿ ಕಂಪೆನಿಯೊಂದರಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿರುವ ಅವರ ವಾರಾಂತ್ಯ, ರಜಾ ದಿನಗಳೆಲ್ಲ ಕಲಾ ಗೀಳು, ಕಲಾ ರಚನೆ ಹವ್ಯಾಸಕ್ಕೆ ಮೀಸಲು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.