ನಗರದಲ್ಲಿ ಆಗಷ್ಟೇ ಪಾಶ್ಚಾತ್ಯ ಸಂಗೀತದ ಗಂಧಗಾಳಿ ಬೀಸುತ್ತಿತ್ತು. ಬೆನ್ಸನ್ ಟೌನ್‌ನಲ್ಲಿ ಗಿಟಾರ್‌ಗಳನ್ನು ಮಾಡುವ ಅಂಗಡಿ. ಅಲ್ಲಿಗೆ ಗಿಟಾರ್ ಖರೀದಿಸಲು ಬಂದ ಗ್ರಾಹಕನನ್ನು ಇದಿರುಗೊಂಡದ್ದು ಹತ್ತು ವರ್ಷದ ಬಾಲಕ. ಹೆಸರು ಸಿರಿಲ್ ಲೂಯಿಸ್. ಚೋಟುದ್ದ ಹುಡುಗನನ್ನು ಕಂಡು ಆ ಗ್ರಾಹಕ, `ನಿನಗೆ ಇಂಥ ವಾದ್ಯ ತಯಾರಿಸಲು ಸಾಧ್ಯವಿಲ್ಲ' ಎಂದು ಕಿಚಾಯಿಸಿದ. ಹುಡುಗ ಅದನ್ನು ಸವಾಲಾಗಿ ಸ್ವೀಕರಿಸಿದ. ಅದಾಗಲೇ ಔಚಪಾರಿಕ ಓದಿನಿಂದ ದೂರವಾಗಿದ್ದ ಬಾಲಕ ತನ್ನ ಅಪ್ಪ ನಿಯೋಲ್ ಲೂಯಿಸ್ ಮಾರ್ಗದರ್ಶನ ಪಡೆದು ಒಂದು ಗಿಟಾರ್ ಸಿದ್ಧಪಡಿಸಿದ. ಆಗ ಅವನ ಸಂತೋಷಕ್ಕೆ ಪಾರವೇ ಇರಲಿಲ್ಲ. ಹುಡುಗ ತನ್ನ ಬದುಕಿನ ಮೊದಲ ಗಿಟಾರ್ ತಯಾರಿಸಿದ್ದನ್ನು ನೋಡಲು ಕಿಚಾಯಿಸಿದ ಆ ಗ್ರಾಹಕ ಇರಲಿಲ್ಲವಷ್ಟೆ.

ಹಾಗೆ ವಾದ್ಯ ಮಾಡುವ ಕಾಯಕ ಪ್ರಾರಂಭಿಸಿದ ಹುಡುಗ ಈಗ 67 ವರ್ಷದ ಅನುಭವಿ. ಸಿರಿಲ್ ಲೂಯಿಸ್ ಪದೇಪದೇ ತಮ್ಮ ಬಾಲ್ಯದ ಆ ದಿನಗಳನ್ನು ನೆನಪಿಸಿಕೊಳ್ಳಲು ಅವರಿಗಿರುವ ವಾದ್ಯಮೋಹವೇ ಕಾರಣ. ಆದರೆ, ಅವರು ವಾದ್ಯ ನುಡಿಸುವುದರಲ್ಲಿ ನಿಪುಣರಲ್ಲ.

ಗಿಟಾರ್, ಪಿಯಾನೋ, ಕೀಬೋರ್ಡ್‌ಗಳನ್ನು ಸಿನಿಮಾಗಳಲ್ಲಿ ಮಾತ್ರ ಕಾಣಬೇಕು ಎಂಬಂತಿದ್ದ ಕಾಲದಲ್ಲಿ ಅವುಗಳನ್ನು ತಯಾರಿಸಿದ ವಿರಳಾತಿವಿರಳ ಕಸುಬುದಾರರಲ್ಲಿ ನಿಯೋಲ್ ಲೂಯಿಸ್ ಕೂಡ ಒಬ್ಬರು. ಅವರ ಗರಡಿಯಲ್ಲಿ ಪಳಗಿ ಅಪ್ಪನ ಹಾದಿಯಲ್ಲೇ ನಡೆದವರು ಸಿರಿಲ್. ಅಪ್ಪನನ್ನು ಅನುಕರಿಸಿ ಕಲಿತಿದ್ದು ಒಂದೆಡೆಯಾದರೆ, ಪ್ರಯೋಗಗಳಿಂದ ಕಲಿತಿದ್ದು ಬೆಟ್ಟದಷ್ಟು.

ತಂದೆ ತೀರಿಕೊಂಡ ನಂತರ ವಾದ್ಯಗಳನ್ನು ಸಿದ್ಧಪಡಿಸಿ, ಮಾರುವ ಜವಾಬ್ದಾರಿ ಸಿರಿಲ್ ಹೆಗಲೇರಿತು. ಒಂದೇ ವಾರಕ್ಕೆ ಹತ್ತು ಗಿಟಾರ್ ತಯಾರಿಸಬಲ್ಲಷ್ಟು ಕೈಪಳಗಿಸಿಕೊಂಡರು. ಆರ್ಡರ್‌ಗಳನ್ನು ಪೂರೈಸಲು ಹಗಲು ರಾತ್ರಿ ಕೆಲಸ ಮಾಡುವ ಶ್ರದ್ಧೆಯ ಜೊತೆಗೆ, ಅಗತ್ಯ ಪರಿಣತಿಯೂ ಅವರಿಗೆ ಸಿದ್ಧಿಸಿದೆ.

ವಯಲಿನ್, ಡಬಲ್ ಬೇಸ್ ಗಿಟಾರ್, ಸೆಲೋಸ್, ಪಿಯಾನೋ, ಕೀಬೋರ್ಡ್, ವೀಣೆ, ಸಂತೂರ್, ಘಟಂ, ಕೊಳಲು ಹೀಗೆ ಹಲವು ಸಂಗೀತ ವಾದ್ಯಗಳಿಗೆ ಹೊಸತನದ ಸ್ಪರ್ಶ ನೀಡುತ್ತಲೇ ಬೆಳೆದವರು ಅವರು. ಎಲ್ಲೇ ಇದ್ದರೂ, ವಿನ್ಯಾಸದತ್ತಲೇ ಮನಸ್ಸು ಚಿಂತಿಸುತ್ತಿರುತ್ತದೆ ಎನ್ನುವ ಸಿರಿಲ್ ವಾದ್ಯವನ್ನು ನುಡಿಸಲು ಮಾತ್ರ ಕಲಿತಿಲ್ಲ. `ಸ್ವಲ್ಪ ನುಡಿಸಬಲ್ಲೆ, ಕೇಳಲು ಮಾತ್ರ ತುಂಬಾ ಇಷ್ಟ' ಎಂದು ನಗುತ್ತಾರೆ.

ಬ್ಯಾಟ್ ಗಿಟಾರ್
ಟಿ.ವಿ.ಯಲ್ಲಿ ಯುವತಿಯೊಬ್ಬಳು ಕ್ರಿಕೆಟ್ ಬ್ಯಾಟನ್ನು ಗಿಟಾರ್‌ನಂತೆ ಹಿಡಿದು ಆಡುತ್ತಿದುದನ್ನು ಕಂಡ ಸಿರಿಲ್ ಅವರಿಗೆ ಗಿಟಾರ್‌ಗೆ ಯಾಕೆ ಬ್ಯಾಟ್‌ನಂತೆ ಹೊಸ ರೂಪು ಕೊಡಬಾರದು ಅನ್ನಿಸಿತಂತೆ. ಕೆಲವೇ ದಿನಗಳಲ್ಲಿ ಬ್ಯಾಟ್ ವಿನ್ಯಾಸದ ಗಿಟಾರ್ ಸಿದ್ಧಗೊಂಡಿತು. ಬ್ಯಾಟ್ ಮಾತ್ರವಲ್ಲ, ಹಾಕಿ ಸ್ಟಿಕ್ ಆಕಾರದ ಗಿಟಾರ್ ಕೂಡ ಇವರ ಬಳಿಯಿದೆ. ಕ್ರೀಡೆಯಲ್ಲಿ ಆಸಕ್ತಿಯಿಲ್ಲದಿದ್ದರೂ ಅವುಗಳ ರೂಪವನ್ನು ಸಾಧನಗಳಿಗೆ ಒಗ್ಗಿಸಿ ಅವರು ಖುಷಿ ಪಡುತ್ತಾರಂತೆ.

`ವೀಣೆ ಹೊರಲು ಕಷ್ಟ ಎಂಬ ಕಾರಣಕ್ಕೆ ಚಿಕ್ಕ ಎಲೆಕ್ಟ್ರಿಕ್ ವೀಣೆ ತಯಾರಿಸಿದೆ. ಆದರೆ ಸಂಪ್ರದಾಯವಾದಿಗಳು ಒಪ್ಪಲಿಲ್ಲ. ಯುವಜನರಿಗೆ ತುಂಬಾ ಇಷ್ಟವಾಯಿತು. ಪ್ರಯೋಗವೆಂದರೆ ಅದೇ ತಾನೆ?' ಎಂದು ಪ್ರಶ್ನಿಸುತ್ತಾರೆ ಸಿರಿಲ್.

ಸಿರಿಲ್ ಅವರಿಗೆ ನಾಲ್ವರು ಮಕ್ಕಳು. ಮಕ್ಕಳಾದ ಜೋಸೆಫ್, ಜೆರಾನ್, ನಿಯೋಲ್ ವಾದ್ಯಗಳನ್ನು ತಯಾರಿಸುವುದಿಲ್ಲ. ಆದರೆ ಹಾಡಬಲ್ಲರು, ವಾದ್ಯಗಳನ್ನು ನುಡಿಸಬಲ್ಲರು. ಮಗಳು ಲೊರಿಟಾ ಕೂಡ ಅಪ್ಪನ ಸಂಗೀತ ವಾದ್ಯದ ಹಾದಿಯನ್ನು ಒಪ್ಪಿಕೊಂಡಿಲ್ಲ.

ಅತಿ ದೊಡ್ಡ ಹಾರ್ಪ್
ಸಾವಿರಾರು ವರ್ಷಗಳ ಇತಿಹಾಸವಿರುವ ಹಾರ್ಪ್ ಬಗ್ಗೆ ಸಿರಿಲ್ ಅವರಿಗೆ ವಿಪರೀತ ಕುತೂಹಲ. ಅರಮನೆಗಳಲ್ಲಿ ವಿಲಾಸಿ ಜೀವನದ ಸಂಕೇತವಾಗಿದ್ದ ಹಾರ್ಪ್‌ಗಳ ನೋಟ, ನಾದವೂ ಅತ್ಯಾಕರ್ಷಕ. ಇಂತಹ ವಾದನವನ್ನು ವಿನ್ಯಾಸಗೊಳಿಸಿದ ಹೆಗ್ಗಳಿಕೆ ಸಿರಿಲ್ ಅವರದ್ದು. ಅಂಥ ವಾದ್ಯಕ್ಕೆ ಅವರು ಮನಸೋತಿದ್ದು ಏಕೆ ಎಂಬುದನ್ನು ಅವರ ಮಾತಿನಲ್ಲೇ ಕೇಳಿ...

`ಹಾರ್ಪ್ ವಿನ್ಯಾಸಗೊಳಿಸಬೇಕೆಂಬುದು ನನ್ನ ಬಹು ದಿನಗಳ ಆಸೆಯಾಗಿತ್ತು. ಲಂಡನ್‌ನ ಮ್ಯೂಸಿಯಂನಲ್ಲಿ ಆ ವಾದ್ಯವನ್ನು ಸೂಕ್ಷ್ಮವಾಗಿ ಗಮನಿಸಿದೆ. ಮನಸ್ಸಿನಲ್ಲಿ ಅದರ ಆಕಾರವನ್ನು ಧ್ಯಾನಿಸುತ್ತಾ, ಅದನ್ನು ತಯಾರಿಸಲೇಬೇಕೆಂಬ ಹಟಕ್ಕೆ ಬಿದ್ದೆ. ಹಗಲು ರಾತ್ರಿ ಕಷ್ಟಪಟ್ಟೆ. ಎರಡು ತಿಂಗಳಲ್ಲಿ ಒಂದು ಹಾರ್ಪ್ ಸಿದ್ಧಗೊಳಿಸಿದೆ. ಅದನ್ನು ರೂಪಿಸುವವರೆಗೂ ಏನೋ ತಳಮಳ. ಕೊನೆಗೂ ಹಾರ್ಪ್ ನನ್ನ ಕೈ ಅಲಂಕರಿಸಿತು'.

ಸಿರಿಲ್ ಪ್ರಕಾರ ದೆಹಲಿಯಲ್ಲಿ ಒಂದು ಹಾರ್ಪ್ ಇತ್ತಷ್ಟೆ. ಕರ್ನಾಟಕದಲ್ಲಿ ಒಂದೂ ಇರಲಿಲ್ಲ. ಈಗ ನಾಲ್ಕು ಹಾರ್ಪ್‌ಗಳನ್ನು ಅವರು ತಯಾರಿಸಿದ್ದಾರೆ. ಅವುಗಳಲ್ಲಿ ಎರಡು ಹಾರ್ಪ್‌ಗಳು ಐದು ಅಡಿ, ಎರಡು ಇಂಚಿನಷ್ಟು ಉದ್ದ ಇವೆ. ಮತ್ತೊಂದು ನಾಲ್ಕು ಅಡಿ, ಎರಡು ಇಂಚು ಇದೆ. ಮಗದೊಂದು ಮೂರು ಅಡಿಯಷ್ಟೆ. ಹಳೆಯ ಕಾಲದ `ಲುಕ್' ಬಯಸುವ ಮಂದಿ ಮದುವೆ, ಇನ್ನಿತರ ಸಮಾರಂಭಗಳಲ್ಲಿ ಹಾರ್ಪ್ ಅನ್ನು ಪ್ರದರ್ಶನಕ್ಕಿಡಲು ಬಾಡಿಗೆಗೂ ಕೊಂಡೊಯ್ಯುತ್ತಾರೆ.

`ಹಾರ್ಪ್ ತಯಾರಿಕೆ ಬಲು ಕಷ್ಟ. ಒಂದು ಹಾರ್ಪ್‌ಗೆ ನಾಲ್ಕು ರೀತಿಯ ಮರಗಳು ಬೇಕು. ಮರವು ಸಂಪೂರ್ಣ ಒಣಗಿದ ಮೇಲಷ್ಟೇ ನಾದ ಹೊರಹೊಮ್ಮಲು ಸಾಧ್ಯ' ಎನ್ನುತ್ತಾರೆ ಸಿರಿಲ್. ಅಂದಹಾಗೆ, ಸಿರಿಲ್ ಅವರ ಮಕ್ಕಳು ಕಳೆದ 20 ವರ್ಷಗಳಿಂದಲೂ ಸಂಗೀತ ಪಾಠ ಕೂಡ ನಡೆಸುತ್ತಿದ್ದಾರೆ. ನಾದದೊಂದಿಗೆ ಹೀಗೆ ಬದುಕು ನಂಟು ಹಾಕಿಕೊಂಡ ಅವರ ಕಥನಗಳು ಕುತೂಹಲ ಮೂಡಿಸುವಂತಿವೆ. ಅವರ ಸಂಪರ್ಕಕ್ಕೆ: 98455 06631.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.