ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕವನ್ನು ಉಚ್ವಾಸ -ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು!

Last Updated 16 ಜನವರಿ 2017, 10:12 IST
ಅಕ್ಷರ ಗಾತ್ರ

ಜೈಪುರ್: ಆಮ್ಲಜನಕವನ್ನು ಉಚ್ವಾಸ -ನಿಶ್ವಾಸ ಮಾಡುವ ಏಕೈಕ ಪ್ರಾಣಿ ಹಸು! ಹೀಗೆ ಹೇಳಿದ್ದು ರಾಜಸ್ತಾನ ಶಿಕ್ಷಣ ಸಚಿವ ವಾಸುದೇವ್ ದೇವ್‍ನಾನಿ.

ಅಕ್ಷಯ್ ಪಾತ್ರಾ ಫೌಂಡೇಶನ್ ಆಯೋಜಿಸಿದ್ದ ಹಿಂಗೊನಿಯಾ ಗೋಶಾಲಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಚಿವರು, ಹಸು ಸಾಕಣೆಯ ಉದ್ದೇಶವನ್ನು ಈ ರೀತಿ ವಿವರಿಸಿದ್ದಾರೆ.

ಹಸುವಿನ ಬಗ್ಗೆ ವೈಜ್ಞಾನಿಕ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವೇನೂ ಇಲ್ಲ. ಆಮ್ಲಜನಕವನ್ನು ಉಸಿರಾಡಿ, ಆಮ್ಲಜನಕವನ್ನೇ ಹೊರಬಿಡುವ ಏಕೈಕ ಪ್ರಾಣಿ ಹಸು. ಇಂಥಾ ವಿಷಯಗಳು ಅಧಿಕ ಜನರಿಗೆ ತಲುಪಿದರೆ ಸಾಕು ಎಂದಿದ್ದಾರೆ.

ವಾತಾವರಣಕ್ಕೆ ಹಸಿರು ಮನೆ ಅನಿಲ ಹೊರಹಾಕುವಲ್ಲಿ ಪ್ರಾಣಿಗಳದ್ದೂ ಪಾತ್ರವಿದೆ. ಹಸುಗಳ ಸೆಗಣಿ ಕೊಳೆತಾಗಲೂ ಹಸಿರು ಮನೆ ಅನಿಲ (ಗ್ರೀನ್ ಹೌಸ್ ಗ್ಯಾಸ್) ಬಿಡುಗಡೆಯಾಗುತ್ತದೆ ಎಂದು ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಆಹಾರ ಮತ್ತು ಕೃಷಿ ಸಂಸ್ಥೆ ವರದಿಯಲ್ಲಿ ಹೇಳಿತ್ತು.

ಈ ವಾದವನ್ನು ತಳ್ಳಿ ಹಾಕಿ ಸಚಿವರು ಈ ರೀತಿಯ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT