ಬೆಂಗಳೂರು: ದೇಶರಕ್ಷಣೆಗಾಗಿ ದೇಹತ್ಯಾಗ ಮಾಡಿದ ಸೈನಿಕರಿಗೆ ನಮನ ಸಲ್ಲಿಸಲು ನೀವು ಬಯಸುತ್ತೀರಾ. ಹುತಾತ್ಮ ಸೈನಿಕರ ಕುಟುಂಬದವರಿಗೆ ಸಾಂತ್ವನ ಹೇಳುತ್ತೀರಾ. ಇದಕ್ಕೆ ನೆರವಾಗುವುದಕ್ಕಾಗಿಯೇ ಆನ್‌ಲೈನ್ ಸ್ಮಾರಕವೊಂದಿದೆ.

ನಗರದಲ್ಲಿ ನೆಲೆಸಿರುವ, ವಾಯುಪಡೆಯ ಮೂವರು ನಿವೃತ್ತ ವಿಂಗ್ ಕಮಾಂಡರ್‌ಗಳಾದ ಎಂ.ಎ.ಅಫ್ರಾಜ್, ರಾಜೇಂದ್ರ ಪ್ರಸಾದ್, ಎಲ್.ಕೆ.ಚೌಬೆ ಅವರು ಸೇರಿಕೊಂಡು ‘ಹಾನರ್ ಪಾಯಿಂಟ್’ (www.honourpoint.in) ಎಂಬ ಸೈನಿಕರ ಸ್ಮಾರಕವನ್ನು ಅಭಿವೃದ್ಧಿಪಡಿಸಿದ್ದಾರೆ. 11 ಮಂದಿ ನಿವೃತ್ತ ಯೋಧರು ಇದರ ನಿರ್ವಹಣೆಯಲ್ಲಿ ತೊಡಗಿದ್ದಾರೆ. ಇದರ ಫೇಸ್‌ಬುಕ್ ಪುಟವೂ (https://www.facebook.com/honourpoint.) ಲಭ್ಯವಿದೆ. ಸರ್ಕಾರದ ನೆರವು ಪಡೆಯದೆಯೇ, ಮಾಜಿ ಸೈನಿಕರೇ ನಿರ್ವಹಿಸುತ್ತಿರುವ ಸ್ಮಾರಕವಿದು.

ಏನೇನಿದೆ: ಈ ಸ್ಮಾರಕದಲ್ಲಿ, 1947ರ ಪಾಕಿಸ್ಥಾನ ಯುದ್ಧದಲ್ಲಿ ಮೃತಪಟ್ಟ ಸೈನಿಕರಿಂದ ಹಿಡಿದು ಇದೇ ಆಗಸ್ಟ್ 13ರಂದು ಪಾಕಿಸ್ಥಾನದ ಸೈನಿಕರ ಗುಂಡಿಗೆ ಬಲಿಯಾದ ನಯೀಬ್ ಸುಬೇದಾರ್ ಜಗ್ರಾಮ್ ಸಿಂಗ್ ತೋಮರ್‌ವರೆಗೆ ಕರ್ತವ್ಯದಲ್ಲಿರುವಾಗಲೇ ಮೃತಪಟ್ಟ ಒಟ್ಟು 12,438 ಮೃತ ಯೋಧರ ಸಚಿತ್ರ ವಿವರಗಳಿವೆ. ಹುತಾತ್ಮ ಸೈನಿಕರ ಹುಟ್ಟೂರು, ಅವರು ಸೇನೆಗೆ ಸೇರಿದ ದಿನಾಂಕ, ಯಾವ ಘಟಕದಲ್ಲಿ ಕಾರ್ಯನಿರ್ವಹಿಸಿದ್ದರು, ಕೊನೆಯದಾಗಿ ನಿರ್ವಹಿಸಿದ ಹುದ್ದೆ, ಯಾವ ಕಾರ್ಯಾಚರಣೆಯಲ್ಲಿ ಮೃತಪಟ್ಟರು, ಅವರ ಸಾಧನೆಗಳೇನು ಎಂಬ ವಿವರಗಳೂ ಇಲ್ಲಿ ಲಭ್ಯ.

ಕರ್ತವ್ಯನಿರತರಾಗಿರುವಾಗಲೇ ಸತ್ತ ಸೈನಿಕರ ಜೊತೆಗೆ ಸೇನೆಯಿಂದ ನಿವೃತ್ತರಾದ ಬಳಿಕ ಅಗಲಿದ ಯೋಧರ ವಿವರಗಳನ್ನೂ ಇಲ್ಲಿ ಒದಗಿಸಲಾಗಿದೆ. ಶನಿವಾರ (ಸೆ. 16) ಕೊನೆಯುಸಿರೆಳೆದ ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜುನ್ ಸಿಂಗ್ ಅವರ ಸಾಧನೆಗಳ ವಿವರವೂ ಈಗಾಗಲೇ ಸ್ಮಾರಕದಲ್ಲಿ ಅಪ್‌ಲೋಡ್ ಆಗಿದೆ. ನಿರ್ದಿಷ್ಟ ಸೈನಿಕರ ಭಾವಚಿತ್ರವನ್ನು ಕ್ಲಿಕ್ ಮಾಡಿ ಅವರಿಗೆ ‘ಅಕ್ಷರ ನಮನ’ ಸಲ್ಲಿಸಬಹುದು.

ಸ್ಮಾರಕ ಏಕೆ?

‘ನಿರ್ದಿಷ್ಟ ಯುದ್ಧದಲ್ಲಿ ಮೃತಪಟ್ಟ ಯೋಧರ ಕುರಿತು ಬಿಡಿಯಾಗಿ ವಿವರಗಳನ್ನು ಒದಗಿಸುವ ಅನೇಕ ಸ್ಮಾರಕಗಳು ದೇಶದ ವಿವಿಧ ಕಡೆಗಳಲ್ಲಿವೆ. ಉದಾಹರಣೆಗೆ ಅಮರ್ ಜವಾನ್ ಜ್ಯೋತಿ ಸ್ಮಾರಕದಲ್ಲಿ 1971ರ ಭಾರತ– ಪಾಕ್ ಯುದ್ಧದಲ್ಲಿ ಮೃತಪಟ್ಟ ಯೋಧರ ವಿವರಗಳು ಮಾತ್ರ ಸಿಗುತ್ತವೆ. ಆದರೆ, ದೇಶಸೇವೆಗಾಗಿ ಇದುವರೆಗೆ ಮೃತಪಟ್ಟ ಎಲ್ಲ ಸೈನಿಕರ ಕುರಿತ ವಿವರಗಳನ್ನು ಒಂದೇ ಕಡೆ ಒದಗಿಸುವ ಯಾವುದೇ ವ್ಯವಸ್ಥೆ ಇರಲಿಲ್ಲ. ಈ ಕೊರತೆಯನ್ನು ನೀಗಿಸಲು ಮೂವರು ಮಾಜಿ ಸೈನಿಕರು ಸೇರಿಕೊಂಡು ಆನ್‌ಲೈನ್ ಸ್ಮಾರಕವನ್ನು ಅಭಿವೃದ್ಧಿಪಡಿಸಿದೆವು’ ಎನ್ನುತ್ತಾರೆ ಅಫ್ರಾಜ್.

‘ಎರಡು ವರ್ಷಗಳಿಂದ ಆನ್‌ಲೈನ್ ಸ್ಮಾರಕ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ತೊಡಗಿದ್ದೇವೆ. ಸಾವಿರಾರು ಯೋಧರ ವಿವರಗಳನ್ನು ಕಲೆ ಹಾಕುವುದು ಸುಲಭದ ಮಾತಲ್ಲ. ಈ ವರ್ಷದ ಏಪ್ರಿಲ್‌ನಲ್ಲಿ ಈ ಸ್ಮಾರಕವನ್ನು ಲೋಕಾರ್ಪಣೆ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

‘ನಮ್ಮ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ದೇಶದ 24,000ಕ್ಕೂ ಅಧಿಕ ಯೋಧರು ಕರ್ತವ್ಯ ನಿರ್ವಹಣೆ ವೇಳೆಯೇ ಕೊನೆಯುಸಿರೆಳೆದಿದ್ದಾರೆ. ನಾವು ಇದುವರೆಗೆ 12,500 ಸೈನಿಕರ ವಿವರಗಳನ್ನು ಕಲೆ ಹಾಕಿದ್ದೇವೆ. ಸಾಧ್ಯವಾದಷ್ಟು ಹೆಚ್ಚು ಯೋಧರ ವಿವರಗಳನ್ನು ಈ ಸ್ಮಾರಕದಲ್ಲಿ ಅಳವಡಿಸುವುದು ನಮ್ಮ ಉದ್ದೇಶ. ಇನ್ನು ಮುಂದೆ ಯೋಧರು ಮೃತಪಟ್ಟರೆ ಅವರ ವಿವರಗಳನ್ನೂ ಸೇರ್ಪಡೆಗೊಳಿಸುತ್ತೇವೆ’ ಎಂದು ಅವರು ತಿಳಿಸಿದರು.

‘ಸೈನಿಕರು ಮೃತಪಟ್ಟಾಗ ಅವರ ಕುಟುಂಬದವರನ್ನು ಸಂಪರ್ಕಿಸಿ ಹಾಗೂ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಆಧರಿಸಿ ಅವರ ವಿವರಗಳನ್ನು ಕಲೆಹಾಕುತ್ತೇವೆ. ಸೇನಾ ವೆಬ್‌ಸೈಟ್‌ಗಳಲ್ಲಿ ಅವರ ಕುರಿತು ಇರುವ ಮಾಹಿತಿಯನ್ನೂ ಬಳಸಿಕೊಳ್ಳುತ್ತೇವೆ. ಮೃತ ಸೈನಿಕರ ವಿವರವನ್ನು ಯಾರು ಬೇಕಾದರೂ ನಮಗೆ ಒದಗಿಸಬಹುದು. ಆನ್‌ಲೈನ್ ಸ್ಮಾರಕದಲ್ಲೇ ಇದಕ್ಕಾಗಿ ಪ್ರತ್ಯೇಕ ಆಯ್ಕೆಯನ್ನು ಒದಗಿಸಿದ್ದೇವೆ. ಆ ವಿವರಗಳನ್ನು ಪರಿಶೀಲಿಸಿ ನಾವೇ ಅದನ್ನು ಸ್ಮಾರಕದಲ್ಲಿ ಅಪ್‌ಲೋಡ್ ಮಾಡುತ್ತೇವೆ’ ಎಂದರು.

ಬಲಿದಾನದ ಸ್ಮರಣೆ: ‘ಸೈನಿಕರ ಬಲಿದಾನದ ಬಗ್ಗೆ ಯುವಜನರಲ್ಲಿ, ವಿದ್ಯಾರ್ಥಿಗಳಲ್ಲಿ ಹೆಮ್ಮೆ ಮೂಡಿಸುವ ಕಾಯಕದಲ್ಲೂ ನಮ್ಮ ತಂಡ ನಿರತವಾಗಿದೆ. ಶಾಲಾ ಕಾಲೇಜುಗಳಲ್ಲಿ ಈ ಕುರಿತು ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಾಗೂ ವಿದ್ಯಾರ್ಥಿಗಳಿಗಾಗಿ ಸ್ಪರ್ಧೆಗಳನ್ನು ಏರ್ಪಡಿಸುತ್ತೇವೆ’ ಎಂದು ತಿಳಿಸಿದರು.

‘ಹುತಾತ್ಮ ಯೋಧರ ಕುಟುಂಬಗಳಿಗೆ ಸ್ಥೈರ್ಯ ತುಂಬಿ’

ಹುತಾತ್ಮ ಯೋಧರ ಕುಟುಂಬಗಳಿಗೆ ಭಾವನಾತ್ಮಕವಾಗಿ ಸ್ಥೈರ್ಯ ತುಂಬುವ ಕಾರ್ಯ ಆಗಬೇಕು. ಈ ಆನ್‌ಲೈನ್ ಸ್ಮಾರಕದಲ್ಲಿ ಬರೆಯುವ ಬರಹಗಳನ್ನು ಅವರ ಕುಟುಂಬದ ಸದಸ್ಯರೂ ಓದುತ್ತಾರೆ. ಯೋಧರ ಬಲಿದಾನಕ್ಕೆ ಗೌರವ ಸೂಚಿಸಿ ಬರೆಯುವ ಒಂದೊಂದು ಅಕ್ಷರವೂ ಅವರಲ್ಲಿ ಹೆಮ್ಮೆ ಮೂಡಿಸಬಲ್ಲುದು’ ಎನ್ನುತ್ತಾರೆ ಅಫ್ರಾಜ್.

ಆರ್ಥಿಕ ನೆರವು ಒದಗಿಸಲು ವೇದಿಕೆ:

‘ಹುತಾತ್ಮರಾಗಿರುವ ಎಷ್ಟೋ ಸೈನಿಕರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿವೆ. ಸಾರ್ವಜನಿಕರು ಅವರಿಗೆ ನೆರವಾಗಲು ನಾವು ವೇದಿಕೆ ಕಲ್ಪಿಸುತ್ತೇವೆ. ಜನರು ಇಂತಹ ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸಬಹುದು ಅಥವಾ ಯೋಧರ ಮಕ್ಕಳ ವಿದ್ಯಾಭ್ಯಾಸವನ್ನು ಪ್ರಾಯೋಜಿಸಬಹುದು. ಸೈನಿಕರ ವಿಧವೆಯರಿಗೆ ವೃತ್ತಿಪರ ತರಬೇತಿ ಒದಗಿಸಲು, ಉದ್ಯೋಗ ಒದಗಿಸಲು ಕೂಡಾ ಸಹಾಯ ಮಾಡಬಹುದು. ಯಾರಾದರೂ ಮುಂದೆ ಬಂದರೆ, ಇಂತಹ ಕುಟುಂಬಗಳನ್ನು ಸಂಪರ್ಕಿಸಲು ನೆರವಾಗುತ್ತೇವೆ’ ಎಂದು ಅವರು ತಿಳಿಸಿದರು.

* ಹುತಾತ್ಮ ಯೋಧರ ಬಲಿದಾನವನ್ನು ಕಡೆಗಣಿಸಲಾಗುತ್ತಿದೆ ಎಂಬ ನೋವು ಅವರ ಕುಟುಂಬದವರ ಮನದಲ್ಲಿದೆ. ಹುತಾತ್ಮ ಯೋಧರಿಗೆ ಸಲ್ಲಿಸುವ ಒಂದೊಂದು ಶ್ರದ್ಧಾಂಜಲಿಯೂ ಅವರ ಕುಟುಂಬಸ್ಥರ ನೋವನ್ನು ಶಮನ ಮಾಡಬಲ್ಲುದು

–ಎಂ.ಎ.ಅಫ್ರಾಜ್, ವಾಯುಪಡೆಯ ನಿವೃತ್ತ ವಿಂಗ್ ಕಮಾಂಡರ್

ಅಂಕಿ ಅಂಶ

* 12,438 ಹುತಾತ್ಮ ಯೋಧರ ವಿವರ ಆನ್‌ಲೈನ್ ಸ್ಮಾರಕದಲ್ಲಿದೆ

* 70,500 ಆನ್‌ಲೈನ್ ಸ್ಮಾರಕದ ಫೇಸ್‌ಬುಕ್ ಪುಟದ ಬೆಂಬಲಿಗರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.