ವಿದೇಶಿ ಅಧಿಕಾರಿಗಳು ಬಾಳೆ ಎಲೆಯಲ್ಲಿ ಊಟ ಮಾಡುತ್ತಿರುವುದರ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಭಾರತದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ‘ಪೊಂಗಲ್’ ಹಬ್ಬವನ್ನು (ಸಂಕ್ರಾಂತಿ) ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಕಚೇರಿಯಲ್ಲಿ ಆಚರಿಸಿದ್ದಾರೆ ಎಂದು ಭಾರತದ ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ. ‘ಪ್ರಧಾನಿ ಕಚೇರಿಯ ಸಿಬ್ಬಂದಿಗೆ ಸಾಂಪ್ರದಾಯಿಕ ಬಾಳೆಎಲೆಯ ಊಟ ಬಡಿಸಲಾಗಿದೆ. ರಿಷಿ ಸುನಕ್ ಅವರು ಭಾರತದ ಹಬ್ಬ ಹಾಗೂ ಸಂಪ್ರದಾಯಗಳನ್ನು ಮರೆತಿಲ್ಲ’ ಎಂದು ಜಾಲತಾಣ ಬಳಕೆದಾರರು ಪ್ರಶಂಸಿಸಿದ್ದಾರೆ. ಆದರೆ ಇದು ಸುಳ್ಳು ಸುದ್ದಿ.

ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರು ತಮ್ಮ ಕಚೇರಿಯ ಸಿಬ್ಬಂದಿಗೆ ಸಂಕ್ರಾಂತಿ ಭೋಜನಕೂಟ ಏರ್ಪಡಿಸಿದ್ದರು ಎಂದು ತಪ್ಪಾಗಿ ಅರ್ಥೈಸಲಾಗಿದೆ ಎಂದು ‘ಆಲ್ಟ್‌ನ್ಯೂಸ್’ ವೆಬ್‌ಸೈಟ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ. ಈ ವಿಡಿಯೊ ಕೆನಡಾದ ವಾಟರ್‌ಲೂಗೆ ಸಂಬಂಧಿಸಿದ್ದು. ಅಲ್ಲಿನ ತಮಿಳ್ ಸಂಘವು ಏರ್ಪಡಿಸಿದ್ದ ಪೊಂಗಲ್ ಹಬ್ಬದೂಟದಲ್ಲಿ ಸ್ಥಳೀಯ ಮೇಯರ್, ಕೌನ್ಸಿಲರ್‌ಗಳು ಹಾಗೂ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು. ಈ ವಿಡಿಯೊವನ್ನು ತಮಿಳ್ ಸಂಘವು ತನ್ನ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಿದೆ. ಇದನ್ನೇ ತಪ್ಪಾಗಿ ಅರ್ಥೈಸಿ, ಸುನಕ್ ಅವರು ಆಯೋಜಿಸಿದ್ದ ಭೋಜನಕೂಟ ಎಂದು ಬಿಂಬಿಸಲಾಗಿದೆ ಎಂದು ವೆಬ್‌ಸೈಟ್ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.