‘ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಪ್ರಾಬಲ್ಯ ಜೋರಾಗಿದ್ದು, ಕಾಬೂಲ್ ನಗರವನ್ನು ಪ್ರವೇಶಿಸುವಾಗ ಅವರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿದ್ದಾರೆ. ಮುಖಕ್ಕೆ ಮಾಸ್ಕ್ ಅಥವಾ ವಸ್ತ್ರಗಳನ್ನು ಧರಿಸಿದ್ದನ್ನು ಸಿಎನ್ಎನ್ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ಶ್ಲಾಘಿಸಿದೆ ಎಂಬ ಪೋಸ್ಟರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ. ತಾಲಿಬಾನಿಗಳು ತಮ್ಮ ಜವಾಬ್ದಾರಿ ಮೆರೆದಿದ್ದಾರೆ ಎಂಬದಾಗಿ ಸಿಎನ್ಎನ್ ವಾಹಿನಿಯಲ್ಲಿ ಪ್ರಸಾರವಾಗಿದೆ ಎನ್ನಲಾದ ಸ್ಕ್ರೀನ್ಶಾಟ್ಗಳು ವೈರಲ್ ಆಗಿವೆ. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಹಲವರು ಈ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಸಿಎನ್ಎನ್ ಈ ರೀತಿಯ ಸುದ್ದಿ ಪ್ರಸಾರ ಮಾಡಿಲ್ಲ ಎಂದು ಲಾಜಿಕಲ್ ಇಂಡಿಯನ್ ಫ್ಯಾಕ್ಟ್ ಚೆಕ್ ವೇದಿಕೆ ತಿಳಿಸಿದೆ. ಬ್ಯಾಬಿಲಾನ್ ಬಿ ಎಂಬ ವೆಬ್ ಪೋರ್ಟಲ್ ಆಗಸ್ಟ್ 14ರಂದುವರದಿಯೊಂದನ್ನು ಪ್ರಕಟಿಸಿತ್ತು. ‘ದಾಳಿಯ ಸಮಯದಲ್ಲಿ ಮುಖಗವಸು ಧರಿಸಿದ್ದಕ್ಕಾಗಿ ಸಿಎನ್ಎನ್ ಸುದ್ದಿಸಂಸ್ಥೆಯು ತಾಲಿಬಾನ್ ಅನ್ನು ಪ್ರಶಂಸಿಸಿದೆ’ ಎಂಬಶೀರ್ಷಿಕೆ ಇತ್ತು.ಕ್ರಿಶ್ಚಿಯನ್ನರು, ರಾಜಕೀಯ ಮತ್ತು ದೈನಂದಿನ ಜೀವನಕ್ಕೆ ಸಂಬಂಧಿಸಿದ ವಿಷಯವನ್ನು ಈ ಪೋರ್ಟಲ್ ವಿಡಂಬನಾತ್ಮಕವಾಗಿ ವರದಿ ಮಾಡುತ್ತದೆ.ವೆಬ್ಸೈಟ್ನಲ್ಲಿ ಈ ಮಾಹಿತಿ ಇದೆ. ಈ ಮೂಲ ಚಿತ್ರ ರಾಯಿಟರ್ಸ್ಗೆ ಸೇರಿದ್ದು, ಬಿಬಿಸಿ ಸುದ್ದಿಸಂಸ್ಥೆಯು 2017ರಲ್ಲಿ ಲೇಖನವೊಂದಕ್ಕಾಗಿ ಬಳಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.