‘ದಿ ಕಾಶ್ಮೀರ್ ಫೈಲ್ಸ್’ ಚಿತ್ರಕ್ಕೆ ‘ದಾದಾಸಾಹೇಬ್ ಫಾಲ್ಕೆ ಪುರಸ್ಕಾರ’ ಸಿಕ್ಕಿದೆ ಎಂಬ ವಿಚಾರವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚಿತ್ರದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಸ್ವತಃ ಟ್ವಿಟರ್ನಲ್ಲಿ ಇದನ್ನು ಹಂಚಿಕೊಂಡಿದ್ದರು. ವಿವೇಕ್ ಅವರನ್ನು ಜಾಲತಾಣ ಬಳಕೆದಾರರು ಅಭಿನಂದಿಸಿದ್ದಾರೆ. ಉತ್ತಮ ನಟ, ನಟಿ, ನಿರ್ದೇಶಕ ಮೊದಲಾದ ವಿಭಾಗಗಳಲ್ಲೂ ಪ್ರಶಸ್ತಿ ಪ್ರಕಟಿಸಲಾಗಿದೆ. ಇದು ಭಾರತ ಸರ್ಕಾರ ನೀಡುವ ಪ್ರತಿಷ್ಠಿತ ಫಾಲ್ಕೆ ಪುರಸ್ಕಾರ ಎಂದೇ ಹಲವರು ಅಭಿನಂದಿಸಿದ್ದಾರೆ. ಸಿನಿಮಾ ರಂಗದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರ ನೀಡುವ ಅತಿದೊಡ್ಡ ಪ್ರಶಸ್ತಿ ಎನಿಸಿರುವ ‘ದಾದಾಸಾಹೇಬ್ ಫಾಲ್ಕೆ’ಗೂ, ಖಾಸಗಿ ಸಂಸ್ಥೆಯೊಂದು ನೀಡುವ ‘ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ಗೂ ವ್ಯತ್ಯಾಸವಿದೆ ಎಂದು ‘ಆಲ್ಟ್ ನ್ಯೂಸ್’ ವರದಿ ಮಾಡಿದೆ.

1913ರಲ್ಲಿ ‘ರಾಜಾ ಹರಿಶ್ಚಂದ್ರ’ ಎಂಬ ಪೂರ್ಣ ಪ್ರಮಾಣದ ಚಿತ್ರವನ್ನು ನಿರ್ದೇಶಿಸಿದ್ದ ದಾದಾಸಾಹೇಬ್ ಫಾಲ್ಕೆ ಅವರ ಗೌರವಾರ್ಥ ಭಾರತ ಸರ್ಕಾರವು ಚಿತ್ರರಂಗದ ಒಬ್ಬ ಗಣ್ಯ ವ್ಯಕ್ತಿಯನ್ನು ಮಾತ್ರ ಪ್ರತೀ ವರ್ಷ ಈ ಪ್ರಶಸ್ತಿಗೆ ಆಯ್ಕೆ ಮಾಡುತ್ತದೆ. ಉತ್ತಮ ನಟ, ನಟಿ, ನಿರ್ದೇಶಕ ಮೊದಲಾದ ವಿಭಾಗದಡಿ ಪ್ರಶಸ್ತಿ ನೀಡುವುದಿಲ್ಲ. ಆದರೆ, ಅನಿಲ್ ಮಿಶ್ರಾ ಎಂಬವರು ಮುಖ್ಯಸ್ಥರಾಗಿರುವ ಖಾಸಗಿ ಸಂಸ್ಥೆಯೊಂದು ಫಾಲ್ಕೆ ಹೆಸರಿನಲ್ಲಿ 2016ರಿಂದ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡುತ್ತಿದೆ. ಉತ್ತಮ ನಟ, ನಟಿ, ನಿರ್ದೇಶಕ ಮೊದಲಾದ ವಿಭಾಗದಡಿ ಪ್ರಶಸ್ತಿ ನೀಡುತ್ತಿದೆ. ಫಾಲ್ಕೆ ಅವರ ಹೆಸರಿನಲ್ಲಿ ಇನ್ನೊಂದಿಷ್ಟು ಪ್ರಶಸ್ತಿಗಳೂ ಇವೆ. ಹೀಗೆ ವಿವಿಧ ಪ್ರಶಸ್ತಿಗಳಿಗೆ ಫಾಲ್ಕೆ ಹೆಸರು ಬಳಸಿಕೊಳ್ಳುತ್ತಿರುವುದಕ್ಕೆ ಅವರ ಮರಿಮೊಮ್ಮಗ ಚಂದ್ರಶೇಖರ ಪುಲಸ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.