‘ಭಾರತದ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅಂತರರಾಷ್ಟ್ರೀಯ ನ್ಯಾಯಾಲಯದ (ಐಸಿಜೆ) ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾಗಿದ್ದಾರೆ. ಈ ಹುದ್ದೆಗಾಗಿ ನಡೆದ ಚುನಾವಣೆಯಲ್ಲಿ ದಲ್ವೀರ್ ಭಂಡಾರಿ ಅವರು, ಬ್ರಿಟನ್‌ನ ನ್ಯಾಯಮೂರ್ತಿ ಕ್ರಿಸ್ಟೋಫರ್ ಗ್ರೀನ್‌ವುಡ್ ಅವರನ್ನು ಸೋಲಿಸಿದರು. ಈ ಹುದ್ದೆಯ ಮೇಲೆ 71 ವರ್ಷಗಳಿಂದ ಇದ್ದ ಬ್ರಿಟನ್‌ನ ಏಕಸ್ವಾಮ್ಯವನ್ನು ಅವರು ಮುರಿದಿದ್ದಾರೆ. ಇದನ್ನು ಸಾಧಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕಳೆದ 6 ತಿಂಗಳಿಂದ ಶ್ರಮಿಸುತ್ತಿದೆ! ಎಲ್ಲಾ 193 ದೇಶಗಳ ಪ್ರತಿನಿಧಿಗಳನ್ನು ಸಂಪರ್ಕಿಸುವುದು ಮತ್ತು ಪ್ರತಿಸ್ಪರ್ಧಿ ಬ್ರಿಟಿಷ್ ಅಭ್ಯರ್ಥಿಯ ಬಗ್ಗೆ ಭಾರತದ ನಿಲುವನ್ನು ವಿವರಿಸುವುದು ತುಂಬಾ ಕಷ್ಟಕರವಾದ ಕೆಲಸವಾಗಿತ್ತು. ಮೋದಿ ಅವರ ಶ್ರಮದಿಂದಾಗಿಯೇ 193 ಮತಗಳಲ್ಲಿ ದಲ್ವೀರ್ ಅವರಿಗೆ 183 ಮತಗಳು ಬಂದವು’ ಎಂಬ ವಿವರ ಇರುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆದರೆ ಇದು ಸುಳ್ಳು ಸುದ್ದಿ.

ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಸದಸ್ಯರು ಎಂಬ ಹುದ್ದೆಗಳಷ್ಟೇ ಇವೆ. ಅದರಲ್ಲಿ ಮುಖ್ಯನ್ಯಾಯಮೂರ್ತಿ ಎಂಬ ಹುದ್ದೆ ಈ ಹಿಂದೆ ಎಂದಿಗೂ ಇರಲಿಲ್ಲ. ಈಗಲೂ ಇಲ್ಲ. ಇನ್ನು ನ್ಯಾಯಮೂರ್ತಿ ದಲ್ವೀರ್ ಸಿಂಗ್ ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಸದಸ್ಯರಾಗಿದ್ದಾರೆ. ಅವರು ಮೊದಲ ಬಾರಿ ಈ ಸದಸ್ಯತ್ವ ಪಡೆದುಕೊಂಡದ್ದು 2012ರ ಏಪ್ರಿಲ್ 27ರಂದು. ಆಗ ಭಾರತದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ–2 ಸರ್ಕಾರವಿತ್ತು. ಅವರು ಅಂತರರಾಷ್ಟ್ರೀಯ ನ್ಯಾಯಾಲಯದ ಸದಸ್ಯರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದು 2018ರ ಫೆಬ್ರುವರಿ 6ರಂದು. ಆಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವಿತ್ತು. ಹೀಗಾಗಿ ಮೋದಿ ಅವರ ಶ್ರಮದಿಂದಾಗಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಅವರು ಐಸಿಜೆಯ ಮುಖ್ಯನ್ಯಾಯಮೂರ್ತಿಯಾಗಿ ಚುನಾಯಿತರಾದರು ಎಂಬುದು ಸುಳ್ಳುಸುದ್ದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.