ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ನಡೆಯುತ್ತಿದ್ದು, ಗೋರಖಪುರದಲ್ಲಿ ಅತಿಉದ್ದದ ಎಲ್‌ಪಿಜಿ ಪೈಪ್‌ಲೈನ್ ಕಾಮಗಾರಿ 2023ಕ್ಕೆ ಪೂರ್ಣಗೊಳ್ಳಲಿದೆ ಎಂಬ ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಗೋರಖಪುರದಿಂದ ಸ್ಪರ್ಧಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಈ ಯೋಜನೆಗೆ 2019ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಗುಜರಾತ್‌ನ ಕಾಂಡ್ಲಾದಿಂದ ಮಧ್ಯಪ್ರದೇಶ ಮೂಲಕ ಗೋರಖಪುರಕ್ಕೆ ಪೈಪ್‌ಲೈನ್ ಅಳವಡಿಲಾಗುತ್ತಿದೆ. ವೈರಲ್ ಆಗಿರುವ ಗ್ರಾಫಿಕ್ ಚಿತ್ರದಲ್ಲಿ ಇದನ್ನು ಜಗತ್ತಿನ ಅತಿದೊಡ್ಡ ಪೈಪ್‌ಲೈನ್ ಎಂದು ಬಣ್ಣಿಸಲಾಗಿದೆ. 2,757 ಕಿಲೋಮೀಟರ್ ಉದ್ದದ ಈ ಮಾರ್ಗವನ್ನು ₹10 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಉಲ್ಲೇಖಿಸಲಾಗಿದೆ. 34 ಕೋಟಿ ಮನೆಗಳಿಗೆ ಎಲ್‌ಪಿಜಿ ಪೂರೈಕೆಯಾಗಲಿದ್ದು, ಇದನ್ನು ಕ್ರಾಂತಿಕಾರಿ ಯೋಜನೆ ಎಂದು ಕರೆಯಲಾಗಿದೆ.

ವೈರಲ್ ಆಗಿರುವ ಈ ಚಿತ್ರ ಜರ್ಮನಿಗೆ ಸಂಬಂಧಿಸಿದ್ದು ಎಂದು ಲಾಜಿಕಲ್ ಇಂಡಿಯನ್ ವೆಬ್‌ಸೈಟ್ ತಿಳಿಸಿದೆ. ಯೋಜನೆಗೆ 2019ರಲ್ಲಿ ಶಂಕುಸ್ಥಾನಪನೆ ನೆರವೇರಿಸುವುದಕ್ಕೂ ಮುನ್ನ ಈ ಚಿತ್ರ ಅಂತರ್ಜಾಲದಲ್ಲಿ ಲಭ್ಯವಿತ್ತು. 2010ರಲ್ಲಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಪ್ರಕಟಿಸಿದ್ದ ನಾರ್ಡ್ ಸ್ಟ್ರೀಮ್ ಪೈಪ್‌ಲೈನ್ ಕಾಮಗಾರಿ ಆರಂಭದ ಸುದ್ದಿಯ ಜೊತೆ ಈ ಚಿತ್ರ ಬಳಕೆಯಾಗಿತ್ತು. ಹೀಗಾಗಿ ಗೋರಖಪುರ–ಕಾಂಡ್ಲಾ ಪೈಪ್‌ಲೈನ್ ಕಾಮಗಾರಿಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂಬುದು ಸ್ಪಷ್ಟಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.